ಪುಣೆ (ಮಹಾರಾಷ್ಟ್ರ):ಸ್ಕೂಟರ್​ ಕಳ್ಳತನ ಮಾಡುತ್ತಿರುವ ಖದೀಮನೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಈತನ ವರ್ತನೆ ಪೊಲೀಸರಿಗೂ ಅಚ್ಚರಿ ಮೂಡಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ಇದಕ್ಕೆ ಕಾರಣ ಈತ ಮಾಡುತ್ತಿದ್ದ ಕಳ್ಳತನವೇ ವಿಚಿತ್ರವಾಗಿತ್ತು.
ಘಳಿಗೆ, ಮುಹೂರ್ತ ನೋಡಿಕೊಂಡು ಈತ ಕಳ್ಳತನ ಮಾಡುತ್ತಿರುವುದು ತನಿಖೆಯಿಂದ ಬಯಲಿಗೆ ಬಂದಿದೆ. ಇವನ ಹೆಸರು ವಿವೇಕ್ ವಾಲ್ಮಿಕ್ ಗಾಯಕ್ವಾಡ್. ವಯಸ್ಸು ಸುಮಾರು 20. ಈತ ಪ್ರತಿ ಭಾನುವಾರ ಕಳ್ಳತನ ಮಾಡುತ್ತಿದ್ದ. ಕಳ್ಳತನ ಮಾಡುತ್ತಿದ್ದುದು ಬಿಳಿ ಬಣ್ಣದ ಸ್ಕೂಟರ್​ ಮಾತ್ರ. ಕಳ್ಳತನಕ್ಕೆ ಆಯ್ದುಕೊಂಡಿದ್ದ ಸಮಯ ಬೆಳಗ್ಗೆ 11ರಿಂದ ಮಧ್ಯಾಹ್ನ 1. ಇದಿಷ್ಟು ಬಿಟ್ಟರೆ ಬೇರೆ ದಿನವಾಗಲೀ, ಬೇರೆ ಬಣ್ಣದ ಸ್ಕೂಟರ್​ ಆಗಲಿ ಅಥವಾ ಬೇರೆ ಸಮಯದಲ್ಲಿ ಈತ ಕಳ್ಳತನ ಮಾಡುತ್ತಿರಲಿಲ್ಲ!
ಆದರೆ ಈತನ ಅದೃಷ್ಟ ಈಗ ಕೈಕೊಟ್ಟಿತ್ತು. ನಾಲ್ಕು ಭಾನುವಾರ ಕಳ್ಳತನ ಮಾಡಿ ಎಸ್ಕೇಪ್​ ಆಗಿದ್ದ ಈತ ಐದನೇ ಭಾನುವಾರ ಸಿಕ್ಕಿಬಿದ್ದಿದ್ದಾನೆ.
ಕಳೆದ ಕೆಲವು ದಿನಗಳಲ್ಲಿ ಪುಣೆಯಲ್ಲಿ ವಾಹನಗಳ ಕಳ್ಳತನ ಭಾರೀ ಸುದ್ದಿಯಾಗಿತ್ತು. ಜನರು ವಾಹನಗಳನ್ನು ಮನೆ ಮುಂದೆ ನಿಲ್ಲಿಸಲೂ ಹೆದರುತ್ತಿದ್ದರು. ಆದರೆ ಈ ಕಳ್ಳತನಗಳ ಹಿಂದೆ ಇದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಾಲ್ಕು ಭಾನುವಾರ ನಿಗದಿತ ಅವಧಿಯಲ್ಲಿ ಸ್ಕೂಟರ್​ ಕಳುವು ಆಗಿದ್ದನ್ನು ಪೊಲೀಸರು ಗಮನಿಸಿದರು. ಅದೂ ಬಿಳಿಬಣ್ಣದ ಸ್ಕೂಟರ್​ಗಳೇ ಎನ್ನುವುದು ಅವರ ಗಮನಕ್ಕೆ ಬಂತು. ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಐದನೇ ಭಾನುವಾರವೇ ಬಂದೇ ಬರುತ್ತಾನೆ ಎಂದು ಅದೇ ಏರಿಯಾದಲ್ಲಿ ಅದೇ ಸಮಯದಲ್ಲಿ ಕಾದುಕುಳಿತ ಪೊಲೀಸರಿಗೆ ಈತ ಸಿಕ್ಕಿಬಿದ್ದಿದ್ದಾನೆ. ಇದೇ ರೀತಿ ಹಿಂದೆ ಕೂಡ ಬೇರೆ ಪ್ರದೇಶಗಳಲ್ಲಿ ಇದೇ ರೀತಿಯಲ್ಲಿ ಕಳುವು ಮಾಡಿರುವುದು ತಿಳಿದುಬಂದಿದ್ದು, ಆ ಸ್ಕೂಟರ್​ಗಳನ್ನೂಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸದ್ಯ ಪೊಲೀಸರು ವಾಹನ ಕಳ್ಳತನ ಆರೋಪಿಯನ್ನು ಬಂಧಿಸಿದ್ದು ಪುಣೆಯ ನಾಗರಿಕರು ನಿರಾಳ ಉಸಿರು ಬಿಟ್ಟಿದ್ದಾರೆ. ಆದರೆ ತಿಥಿ, ಮುಹೂರ್ತ, ಘಳಿಗೆ ನೋಡಿ ಕಳ್ಳತನ ಮಾಡುತ್ತಿದ್ದ ಆರೋಪಿಯ ಒಳಗುಟ್ಟು ಇನ್ನಷ್ಟೇ ಬಹಿರಂಗ ಆಗಬೇಕಿದೆ(ಏಜೆನ್ಸೀಸ್​)
ಜ್ಞಾನವಾಪಿ ಕೇಸ್​ ವಾಪಸ್​ ಪಡೆಯದಿದ್ರೆ ನಿಮ್​ ಕಥೆ ಕನ್ಹಯ್ಯಾಲಾಲ್​ನಂತೆ ಆಗತ್ತೆ: ಪಾಕ್​ನಿಂದ ಬೆದರಿಕೆ

ನನ್ನಣ್ಣ ನರೇಂದ್ರ ಮೋದಿ ನೀಡಿದ್ದ 11 ರೂ. ಅರ್ಧ ಗಂಟೆಯಲ್ಲಿಯೇ 7.5 ಲಕ್ಷ ರೂ. ಆಯ್ತು: ಗದ್ಗಿತರಾದ ಮಾಜಿ ಸಂಸದೆ

VIDEO: ಗಾಡಿ ಸ್ಟಾರ್ಟ್​ ಮಾಡುವಾಗ ಇರಲಿ ಎಚ್ಚರ! ಮೈಸೂರು, ತುಮಕೂರಿನಲ್ಲಿ ಬೈಕ್​ ಒಳಗೆ ಕುಳಿತ ಬೃಹತ್​ ನಾಗರ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 + two =
Remember me
