ಕ್ಯಾಲಿಫೋರ್ನಿಯಾ:ಪರ್ಸ್​ ಒಮ್ಮೆ ಕಳೆದುಹೋಯಿತು ಎಂದರೆ ಅದನ್ನು ವಾಪಸ್​ ಪಡೆಯಲು ಹರಸಾಹಸವೇ ಮಾಡಬೇಕು. ಎಷ್ಟೋ ಬಾರಿ ಜಪ್ಪಯ್ಯ ಎಂದರು ಅದು ಸಿಗುವುದೇ ಇಲ್ಲ. ಕೊನೆಯ ಪಕ್ಷ ಹಣವನ್ನಾದರೂ ಇಟ್ಟುಕೊಂಡು ಅದರಲ್ಲಿಯೂ ಕಾರ್ಡ್ಸ್​ಗಳನ್ನಾದರೂ ಕೊಡಲಪ್ಪ ಎಂದುಕೊಂಡರೂ ಅದೂ ಸಿಗುವುದೇ ಇಲ್ಲ.
ಆದರೆ ಇಲ್ಲೊಂದು ಅಪರೂಪದ ಪ್ರಕರಣದಲ್ಲಿ 53 ವರ್ಷಗಳ ಹಿಂದೆ ಕಳೆದುಕೊಂಡಿರುವ ಪರ್ಸ್​ವೊಂದು ಸಿಕ್ಕಿದೆ. 38ನೇ ವಯಸ್ಸಿನವರಿರುವಾಗ ಕಳೆದುಕೊಂಡ ಪರ್ಸ್​ 91ನೇ ವಯಸ್ಸಿನಲ್ಲಿ ಸಿಕ್ಕ ಅಪರೂಪದ ಪ್ರಕರಣವಿದು. ಕ್ಯಾಲಿಫೋರ್ನಿಯಾದ ಪಾಲ್ ಗ್ರಿಶ್ಮ್​ ಎಂಬ ವ್ಯಕ್ತಿ ಅಂಟಾರ್ಟಿಕಾದಲ್ಲಿ ಈ ಪರ್ಸ್​ ಕಳೆದುಕೊಂಡಿದ್ದರು.
ಇವರು ಆಗ ಅಂದರೆ 1967ರಲ್ಲಿ ಅಮೆರಿಕದಲ್ಲಿ ನೌಕಾಪಡೆಯ ಹವಾಮಾನ ಶಾಸ್ತ್ರಜ್ಞನಾಗಿ ಕಾರ್ಯನಿರ್ವಸುತ್ತಿದ್ದರು. ದಕ್ಷಿಣ ಪಟ್ಟಣದ ಮೆಕ್‍ಮುರ್ಡೋ ನಿಲ್ದಾಣದಲ್ಲಿರುವ ಕಟ್ಟಡ ನೆಲಸಮಗೊಳಿಸುವ ಸಂದರ್ಭದಲ್ಲಿ ಅವರು ಪರ್ಸ್​ ಕಳೆದುಕೊಂಡಿದ್ದರು. ಇವರ ಜತೆ ಅದೇ ವೇಳೆ ಇವರ ಸಹೊದ್ಯೋಗಿ ಸ್ಟಿಫನ್ ಡೆಕಾಟೋ ಎನ್ನುವವರೂ ಪರ್ಸ್​ ಕಳೆದುಕೊಂಡಿದ್ದರು. ಎಲ್ಲಿ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ.
ವರ್ಷ ಕಳೆದಂತೆ ಪರ್ಸ್​ ಬಗ್ಗೆ ಅವರು ಮರೆತೇ ಹೋಗಿದ್ದರು. ಆದರೆ ಅಚ್ಚರಿ ಎಂದರೆ ಇದೀಗ ಪಾಲ್​ ಅವರ ಮನೆಗೆ ಪರ್ಸ್​ ಬಂದು ತಲುಪಿದೆ. ಅದನ್ನು ನೋಡಿ ತನ್ನ ಕಣ್ಣುಗಳನ್ನೇ ತಾನು ನಂಬದಾದೆ. ನನಗೆ ಪರ್ಸ್​ ಕಳೆದದ್ದು ನೆನಪೇ ಇಲ್ಲ ಎಂದಿದ್ದಾರೆ ಪಾಲ್​.ಅಷ್ಟಕ್ಕೂ ಆಗಿದ್ದೇನೆಂದರೆ ಇವರು ಪರ್ಸ್​ ಕಳೆದುಕೊಂಡಿರುವ ಕಟ್ಟಡವನ್ನು ಈಗ ನೆಲಸಮಗೊಳಿಸಲಾಗುತ್ತಿದೆ. ಆಗ ಅಲ್ಲಿ ಪಾಲ್​ ಹಾಗೂ ಸ್ಟಿಫನ್​ ಅವರ ಪರ್ಸ್​ ಸಿಕ್ಕಿದೆ. ಅದರಲ್ಲಿ ಇರುವ ಡ್ರೈವಿಂಗ್​ ಲೈಸೆನ್ಸ್​ ಸೇರಿದಂತೆ ಕಾರ್ಡ್​ಗಳ ಆಧಾರದ ಮೇಲೆ ಇಬ್ಬರ ಮನೆಗೂ ಪರ್ಸ್​ ತಲುಪಿಸಲಾಗಿದೆ.
ಪಾಲ್​ ಅವರಿಗೆ ಈಗ 91 ವರ್ಷ ವಯಸ್ಸು. ಪರ್ಸ್​ನಲ್ಲಿ ಹಣ ಇರದಿದ್ದರೂ ಕಾರ್ಡ್​ಗಳನ್ನು ಡುಪ್ಲಿಕೇಟ್​ ಮಾಡಿಸಿದ್ದರೂ, ಕಳೆದುಹೋದ ವಸ್ತು ವಾಪಸ್​ ಸಿಕ್ಕ ಖುಷಿ. ಆದರೆ ಸ್ಟಿಫನ್​ ಅವರು ಇದಾಗಲೇ ಮೃತಪಟ್ಟಿರುವ ಕಾರಣ, ಅವರ ಕುಟುಂಬದವರು ಪರ್ಸ್​ ಪಡೆದುಕೊಂಡಿದ್ದಾರೆ.
ಅಪ್ರಾಪ್ತೆ ಸ್ವ ಇಚ್ಛೆಯಿಂದ ಮದುವೆಯಾದರೆ ಗಂಡನ ಜತೆ ಇರಬಹುದೆ? ಹೈಕೋರ್ಟ್​ ಏನು ಹೇಳಿದೆ ನೋಡಿ…

ಇಲ್ಲೊಬ್ಬ ಆಂಟಿಗೆ ಬಾಯ್​ಫ್ರೆಂಡ್​ ಕಾಟ ಕೊಡ್ತಿದ್ದಾನಂತೆ; ಅವ್ರು ನನ್ನನ್ನು ಹೆಗೇಗೋ ಪೀಡಿಸ್ತಿದ್ದಾರೆ- ಏನು ಮಾಡಲಿ?

ಒಂದೇ ಗಂಟೆಯಲ್ಲಿ ₹365 ಕೋಟಿ ದುಡಿಯುವ ಆಸೆಯೆ? ಹಾಗಿದ್ದರೆ ಇಲ್ಲಿದೆ ನಿಮಗೊಂದು ಚಾಲೆಂಜ್​!

ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ‘ಯದುವೀರ್​ ಒಡೆಯರ್’​ ಟ್ವೀಟ್​- ಆದರೆ ಅಸಲಿಯತ್ತೇ ಬೇರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
