ಜೈಪುರ:ಪತ್ನಿಯನ್ನು ಕೊಲ್ಲುವುದಕ್ಕಾಗಿಯೇ ಆಕೆಯ ಹೆಸರಿನಲ್ಲಿ 35 ಲಕ್ಷ ರೂಪಾಯಿಗಳ ವಿಮೆ ಮಾಡಿರುವ ಭಯಾನಕ ಘಟನೆ ಮಧ್ಯಪ್ರದೇಶದ ರಾಜ್‌ಗಢದಲ್ಲಿ ನಡೆದಿದೆ. ಮಾಡಿರುವ ಸಾಲವನ್ನು ತೀರಿಸಲು ವಿಮೆ ಮಾಡಿಸಿ ನಂತರ ಆಕೆಯನ್ನು ಕೊಲ್ಲಲು ಐದು ಲಕ್ಷ ರೂಪಾಯಿ ಸುಪಾರಿ ನೀಡಿರುವ ಗಂಡ ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಇಂಥದ್ದೊಂದು ಖತರ್ನಾಕ್​ ಐಡಿಯಾ ಮಾಡಿ ಪತ್ನಿಯನ್ನು ಕೊಂದವ 31 ವರ್ಷದ ಬದ್ರಿಪ್ರಸಾದ್ ಮೀನಾ. ಈತನ ಕೃತ್ಯಕ್ಕೆ ಬಲಿಯಾದವಳು 27 ವರ್ಷದ ಪತ್ನಿ ಪೂಜಾ ಮೀನಾ. ಸುಮಾರು 50 ಲಕ್ಷ ರೂಪಾಯಿ ಸಾಲವನ್ನು ಮಾಡಿಕೊಂಡಿದ್ದ ಬದ್ರಿಪ್ರಸಾದನಿಗೆ ಅದನ್ನು ತೀರಿಸಲು ಸಾಧ್ಯವಾಗಿರಲಿಲ್ಲ. ಸುಲಭದಲ್ಲಿ ಹಣ ಹೇಗೆ ಮಾಡಬಹುದು ಎಂದು ಇಂಟರ್​ನೆಟ್​ ಹುಡುಕಿದ್ದಾನೆ. ಆಗ ಆತನಿಗೆ ಈ ಮರ್ಡರ್​ ಪ್ಲ್ಯಾನ್​ ಬಗ್ಗೆ ತಿಳಿದುಬಂದಿದೆ. ಮೊದಲಿಗೆ ಪತ್ನಿಯ ಹೆಸರಿನಲ್ಲಿ ವಿಮೆ ಮಾಡಿಸಿ, ನಂತರ ಆಕೆ ಸತ್ತುಹೋದರೆ ವಿಮೆ ಹಣವು ತನಗೆ ಸಿಗುತ್ತದೆ, ಅದರಿಂದ ತಾನು ಸಾಲ ತೀರಿಸಬಹುದು ಎಂದು ಇಂಟರ್​ನೆಟ್​ನಲ್ಲಿ ನೋಡಿ ತಿಳಿದುಕೊಂಡ ಈತ ಅದೇ ರೀತಿ ಪತ್ನಿಯ ಕೊಲೆ ಮಾಡಲು ಐದು ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದಾನೆ.
ಅದರಂತೆ ಆತ, ಜುಲೈ 26 ರ ರಾತ್ರಿ 9 ಗಂಟೆಯ ಸುಮಾರಿಗೆ ಪತ್ನಿ ಮೀನಾಳನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾನೆ. ನಡು ರಸ್ತೆಯಲ್ಲಿ ಬೈಕ್ ಹಾಳಾಯಿತು ಎಂದು ಸುಳ್ಳು ಹೇಳಿದ ಆತ, ಪತ್ನಿಯನ್ನು ಕೆಳಕ್ಕೆ ಇಳಿಸಿದ್ದಾನೆ. ಮೊದಲೇ ಮಾಡಿಕೊಂಡ ಪ್ಲ್ಯಾನ್​ನಂತೆ ಸುಪಾರಿ ಪಡೆದಿದ್ದವರು ಬಂದು ಮಹಿಳೆಗೆ ಹಿಂದಿನಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಎಲ್ಲವೂ ತಾನು ಅಂದುಕೊಂಡಂತೆ ಆಯಿತು ಎಂದು ಖುಷಿಪಟ್ಟ ಬದ್ರಿನಾಥ್​, ಓಡಿ ಪೊಲೀಸ್​ ಠಾಣೆಗೆ ಬಂದು ಅತ್ತವರಂತೆ ನಟಿಸುತ್ತಾ, ಅಪರಿಚಿತರು ಗುಂಡು ಹಾರಿಸಿ ಹೋಗಿರುವ ವಿಷಯ ತಿಳಿಸಿದ್ದಾನೆ. ‘ನಾನು ನಾಲ್ವರಿಂದ ಸಾಲ ಪಡೆದಿದ್ದೇನೆ. ಹಣ ವಾಪಸ್ ನೀಡುವಂತೆ ನಿರಂತರವಾಗಿ ಅವರು ಒತ್ತಡ ಹೇರುತ್ತಿದ್ದರು. ಅದೇ ಕಾರಣಕ್ಕೆ ನನ್ನ ಮೇಲೆ ಗುಂಡು ಹಾರಿಸಲು ಮುಂದಾಗಿದ್ದರು, ಅದು ನನ್ನ ಪತ್ನಿಗೆ ತಗುಲಿತು’ ಎಂದು ಹೇಳಿದ ಬದ್ರಿನಾಥ್​. ಮುಂದಿನಿಂದ ಬಂದು ಗುಂಡು ಹಾರಿಸಿದರು ಎಂದ. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಗುಂಡು ಹಿಂದಿನಿಂದ ತಗುಲಿರುವುದು ಪೊಲೀಸರಿಗೆ ತಿಳಿಯಿತು.
ಅಷ್ಟೇ ಅಲ್ಲದೇ, ತನಿಖೆ ವೇಳೆ ಕೆಲ ದಿನಗಳ ಹಿಂದಷ್ಟೇ ಪತ್ನಿಯ ಹೆಸರಿಗೆ ವಿಮೆ ಮಾಡಿಸಿರುವುದು ಪೊಲೀಸರ ಗಮನಕ್ಕೆ ಬಂದಿದೆ. ತಾನು ಯಾರಿಂದ ಸಾಲ ಪಡೆದಿದ್ದೆ ಎಂದು ಈತ ಹೇಳಿದ್ದನೋ ಅವರ ಫೋನ್​ ಕಾಲ್​ಗಳನ್ನು ಪರಿಶೀಲಿಸಿದಾಗ, ಅವರು ಘಟನೆ ನಡೆದ ಜಾಗದಲ್ಲಿ ಇರಲಿಲ್ಲ ಎನ್ನುವುದು ಪೊಲೀಸರಿಗೆ ತಿಳಿದು ಅನುಮಾನ ಇನ್ನಷ್ಟು ಬಲವಾಗಿದೆ. ನಂತರ ಬದ್ರಿನಾಥನ ಫೋನ್​ನಿಂದ ಇಬ್ಬರು ವ್ಯಕ್ತಿಗಳಿಗೆ ಪದೇ ಪದೇ ಕರೆ ಹೋಗಿರುವುದು ಕಂಡಿದೆ. ಅದನ್ನು ಪತ್ತೆ ಮಾಡಿ ಆ ಕರೆ ಹೋದ ವ್ಯಕ್ತಿಗಳನ್ನು ವಶಕ್ಕೆ ಪಡೆದಾಗ ಅವರೇ ತಾವು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ನಂತರ ಗಂಡನನ್ನು ಪೊಲೀಸರು ಅರೆಸ್ಟ್​ ಮಾಡಿ ಬಾಯಿ ಬಿಡಿಸಿದಾಗ ನಡೆದಿರುವ ಘಟನೆಯನ್ನು ವಿವರಿಸಿದ್ದಾನೆ. ಇಂಟರ್‌ನೆಟ್‌ನಲ್ಲಿ ವಿಡಿಯೋ ನೋಡಿ ಪತ್ನಿಯನ್ನು ಕೊಲ್ಲಲು ಯೋಜನೆ ರೂಪಿಸಿದ್ದೆ ಎಂದೂ ಹೇಳಿದ್ದಾನೆ. ಮಹಿಳೆಯನ್ನು ಕೊಲ್ಲಲು ಅಜಯ್ ಅಲಿಯಾಸ್ ಗೋಲು, ಶಾಕೀರ್ ಮತ್ತು ಹುನಾರ್ ಸಿಂಗ್ ಸಹಕರಿಸಿರುವುದು ತಿಳಿದುಬಂದಿದೆ. ಬದ್ರಿಪ್ರಸಾದ್ ಮತ್ತು ಹುನಾರ್ ಸಿಂಗ್ ಅವರನ್ನು ಬಂಧಿಸಿದ್ದಾರೆ. ಉಳಿದವರು ತಪ್ಪಿಸಿಕೊಂಡಿದ್ದು, ಶೋಧ ಕಾರ್ಯ ಮುಂದುವರೆಸಿದ್ದಾರೆ.(ಏಜೆನ್ಸೀಸ್​)
ದಾವಣಗೆರೆಯಲ್ಲಿ ನಶೆಯಲ್ಲಿ ಯುವಜನ: ಮಧ್ಯರಾತ್ರಿ ಪೊಲೀಸ್​ ದಾಳಿ- ಮುಖ ಮುಚ್ಕೊಂಡು ಕಾಲ್ಕಿತ್ತ ಯುವತಿಯರು!

ಅಬ್ಬಬ್ಬಾ… ಇದೆಂಥ ಶೌರ್ಯ! ಕಣ್ಣಲ್ಲಿ ಖಾರದ ಪುಡಿ, ಕಾಲಿಗೆ ಏಟಾದರೂ ಕಳ್ಳನನ್ನು ಬೈಕ್​ನಿಂದ ಕೆಳಕ್ಕುರುಳಿಸಿದ ಗಟ್ಟಿಗಿತ್ತಿ!

ಚುನಾವಣಾ ಅಫಿಡವಿಟ್​ನಲ್ಲಿ 73, ವೆಬ್​ಸೈಟ್​ನಲ್ಲಿ 74, ಜನ್ಮದಿನ ನಡೆದದ್ದು 75! ಸಿದ್ದು ವಯಸ್ಸಿನ ಬಿಸಿಬಿಸಿ ಚರ್ಚೆ

ರಾಮಾಯಣ ರಸಪ್ರಶ್ನೆಯಲ್ಲಿ ಅಗ್ರಸ್ಥಾನ ಪಡೆದ ಮುಸ್ಲಿಂ ಯುವಕರು: ಸಾಧನೆ ಕುರಿತು ಅವರು ಹೇಳಿದ್ದು ಹೀಗೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
