ಮಲೇಷಿಯಾ:ಮಹಿಳೆಯೊಬ್ಬಳು ತನಗೆ ಮದುವೆಯಾಗಿದೆ ಎಂದು ಪದೇ ಪದೇ ಹೇಳುತ್ತಿದ್ದರೂ ಆಕೆಗೆ ಯುವಕನೊಬ್ಬ ಅಸಭ್ಯವಾದ ಸಂದೇಶ ಕಳುಹಿಸುತ್ತಾ ಮದುವೆಯಾಗುವಂತೆ ಒತ್ತಾಯಿಸಿ ಕೊನೆಗೆ ಪೊಲೀಸರ ಅತಿಥಿಯಾಗಿರುವ ಘಟನೆ ಮಲೇಷಿಯಾದಲ್ಲಿ ನಡೆದಿದೆ.
ತಮಗೆ ಅಸಭ್ಯವಾಗಿ ಮೆಸೇಜ್ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಮಲೇಷ್ಯಾದ ಮಹಿಳೆ ಸಯ್ಜಾ ಎಂಬವರು ಸಲ್ಲಿಸಿದ್ದ ದೂರಿನ ಅನ್ವಯ ಈ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಆತ ಹೇಳಿರುವ ಕಾರಣ ಕೇಳಿ ಪೊಲೀಸರೇ ಪೆಚ್ಚಾಗಿದ್ದಾರೆ.
ಆಗಿದ್ದೇನೆಂದರೆ, ಸಯ್ಜಾ ವಿವಾಹಿತೆ. ಆದರೆ ಈ ಯುವಕ ತನ್ನನ್ನು ಮದುವೆಯಾಗುವಂತೆ ಪದೇ ಪದೇ ಮೆಸೇಜ್​ ಕಳುಹಿಸುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ತನ್ನ ಫೋನ್​ ಅನ್ನು ಪತಿಯ ಕೈಗೆ ನೀಡಿದ್ದಳು. ಪತಿ ಕೂಡ ಪತ್ನಿಯೇ ಸಂದೇಶ ಕಳುಹಿಸುವಂತೆ ಮೆಸೇಜ್​ ಕಳಿಸುತ್ತಿದ್ದ. ನನ್ನ ಮದುವೆಯಾಗಿದ್ದು, ಈ ರೀತಿಯ ಸಂದೇಶ ಕಳುಹಿಸಬೇಡ ಎಂದು ಹೇಳಿದ್ದ. ಕೊನೆಗೆ ಯುವಕನ ವರ್ತನೆ ಮಿತಿಮೀರಿದಾಗ ಪೊಲೀಸರಲ್ಲಿ ದೂರು ದಾಖಲಾಯಿತು.
ಕೊನೆಗೆ ಆ ಯುವಕ ಹೇಳಿದ್ದೇನೆಂದರೆ, ಆಕೆಯ ಮದುವೆಯಾಗಿಲ್ಲ ಎಂದೇ ನಾನು ಅಂದುಕೊಂಡಿದ್ದೆ. ಏಕೆಂದರೆ ಮುಸ್ಲಿಂ ಮಹಿಳೆಯರು ಮದುವೆಯಾದ ಮೇಲೆ ಸಾಮಾಜಿಕ ಜಾಲತಾಣದಿಂದ ದೂರ ಉಳಿಯುತ್ತಾರೆ. ಮದುವೆಗೂ ಮುನ್ನ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿದ್ದವರನ್ನು ಅವರ ಪತಿ ಎಲ್ಲಾ ಬ್ಲಾಕ್​ ಮಾಡುತ್ತಾರೆ. ಆದರೆ ಈಕೆ ಜಾಲತಾಣಗಳಲ್ಲಿ ಆ್ಯಕ್ಟೀವ್​ ಆಗಿದ್ದನ್ನು ನೋಡಿ ನಾನು ಆಕೆಗಿನ್ನೂ ಮದುವೆಯಾಗಿಲ್ಲ ಎಂದೇ ಅಂದುಕೊಂಡೆ. ಅದಕ್ಕಾಗಿ ಮದುವೆಗೆ ಒತ್ತಾಯಿಸಿದೆ ಎಂದಿದ್ದಾನೆ, ಕೊನೆಗೆ ಮಹಿಳೆ ಹಾಗೂ ಆಕೆಯ ಪತಿಯಲ್ಲಿ ಕ್ಷಮೆ ಕೋರಿದ್ದಾನೆ.
ಕೊನೆಗೆ ತನಿಖೆಯಿಂದ ಈತ ಇದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿರೋ ಮುಸ್ಲಿಂ ಮಹಿಳೆಯರಿಗೆ ಮದುವೆಗೆ ಒತ್ತಾಯ ಮಾಡುತ್ತಿರುವುದು ಕಂಡುಬಂದಿದೆ.
ಹಿಜಾಬ್​ ವಿಚಾರಣೆಗೆ ಮತ್ತೆ ಹಿನ್ನಡೆ: ಪರೀಕ್ಷೆಗೂ ಇದಕ್ಕೂ ಸಂಬಂಧವಿಲ್ಲ, ಸಮಸ್ಯೆ ಸೂಕ್ಷ್ಮಮಾಡ್ಬೇಡಿ ಎಂದ ‘ಸುಪ್ರೀಂ’

ಬಲವಂತವಾಗಿ ಹಿಜಾಬ್​ ತೆಗೆಸಿದ ಕಂಡಕ್ಟರ್​! ಹಿಡಿಶಾಪ ಹಾಕಿದ ಪ್ರಯಾಣಿಕರೂ ಸತ್ಯ ತಿಳಿದು ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 9 =
Remember me
