ಲಖನೌ:ಕೋವಿಡ್‌ನಿಂದಾಗಿ ಉದ್ಯೋಗ ಕಳೆದುಕೊಂಡ ವ್ಯಕ್ತಿಯೊಬ್ಬ ಪತ್ನಿಗೆ ಹೊಡೆಯುವುದನ್ನು ನೋಡಲಾಗದೇ ಜಗಳ ಬಿಡಿಸಲು ಹೋದ ಪಕ್ಕದ ಮನೆಯಾತ ಕೊಲೆಯಾದ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಪ್ರೇಮನಗರದಲ್ಲಿ ನಡೆದಿದೆ.
ಅರ್ಜುನ್ ಎಂಬ 24 ವರ್ಷದ ಯುವಕ ಹತ್ಯೆಗೀಡಾಗಿದ್ದಾನೆ. ಈಗ ಪಕ್ಕದ ಮನೆಯ ನವೀನ್ ಕುಮಾರ್ ಎಂಬಾತ ತನ್ನ ಪತ್ನಿಗೆ ಹೊಡೆಯುವುದನ್ನು ತಪ್ಪಿಸಲು ಹೋಗಿದ್ದ. ಈ ಸಂದರ್ಭದಲ್ಲಿ ನಡೆದಿರುವ ಅವಘಡದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.
ನವೀನ್ ಕುಮಾರ್ ದಿನವೂ ಪತ್ನಿ ದೀಪಮಾಲಾ ಜತೆಗೆ ಜಗಳವಾಡುತ್ತಿದ್ದ, ಹೊಡೆಯುತ್ತಿದ್ದ. ಇದರಿಂದ ಬೇಸತ್ತ ಅರ್ಜುನ್‌ ಇಂದು ಜಗಳ ಬಿಡಿಸಲು ಹೋಗಿದ್ದಾನೆ. ಕೋಪದಲ್ಲಿದ್ದ ನವೀನ್‌ ಅರ್ಜುನ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ಈ ರಭಸಕ್ಕೆ ಅರ್ಜುನ್‍ ಕುಸಿದು ಬಿದ್ದಿದ್ದಾನೆ.
ವಿಪರೀತ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಅರ್ಜುನ್‌ನನ್ನು ಕುಟುಂಬದವರು ಆಸ್ಪತ್ರೆಗೆ ಕರೆದೊಯ್ಯುವ ಬದಲು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಅಲ್ಲಿ ದೂರು ನೀಡಿದ ನಂತರ ಆಸ್ಪತ್ರೆಗೆ ಸಾಗಿಸಿದರು. ಆದರೆ ದಾರಿ ಮಧ್ಯೆಯೇ ಆತ ಪ್ರಾಣ ಕಳೆದುಕೊಂಡಿದ್ದಾನೆ. ಆರೋಪಿ ನವೀನ್‍ನನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ ಎಂದು ಬರೇಲಿ ಎಸ್‍ಎಸ್‍ಪಿ ರೋಹಿತ್ ಸಿಂಗ್ ಸಜ್ವಾನ್ ಮಾಹಿತಿ ನೀಡಿದ್ದಾರೆ.
ಮಳೆಯಲ್ಲಿ ನೆನೆದು ಕೂಲ್‌ ಕೂಲ್‌ ಆದ ನಟಿ ದೀಪಿಕಾ ವಿಡಿಯೋ ನೋಡಿ ಗರಂ ಗರಂ ಆದ ನೆಟ್ಟಿಗರು!

ಪುರುಷ ಮೃತಪಟ್ಟರೆ ಎರಡನೆಯ ಹೆಂಡತಿ, ಮಕ್ಕಳಿಗೆ ಆಸ್ತಿ ಸಿಗತ್ತಾ?

ಲಸಿಕೆ ಹಾಕಿಸಿಕೊಂಡ ಫೋಟೋ ಶೇರ್‌ ಮಾಡಿ ಪೇಚಿಗೆ ಸಿಲುಕಿದ ಟೀಂ ಇಂಡಿಯಾ ಬೌಲರ್‌- ತನಿಖೆಗೆ ಆದೇಶ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
