ಚೆನ್ನೈ:ಚೀನಾದ ಕರೊನಾ ವೈರಸ್​ನಿಂದ ಕ್ಷಣ ಕ್ಷಣಕ್ಕೂ ಆತಂಕಪಡುತ್ತಿರುವ ಭಾರತೀಯರಿಗೆ ಇದೀಗ ಇನ್ನೊಂದು ದೊಡ್ಡ ಶಾಕ್​ ಎದುರಾಗಿದೆ. ಇದಾಗಲೇ ಬ್ರಿಟನ್ನಿಗರ ನಿದ್ದೆಗೆಡಿಸಿರುವ ಹೊಸ ಕರೊನಾ ವೈರಸ್​ ಭಾರತಕ್ಕೂ ಕಾಲಿಟ್ಟೇಬಿಟ್ಟಿದೆ!
ವಿದೇಶ ಪ್ರಯಾಣದಿಂದ ಮರಳಿದವರ ಪೈಕಿ ಬಹುತೇಕದಿಂದಲೇ ಕರೊನಾ ವೈರಸ್​ ದೇಶಾದ್ಯಂತ ಹರಡಿದ್ದು ಹೊಸ ವಿಷಯವೇನಲ್ಲ. ಆದರೆ ಈಗ ಬ್ರಿಟನ್​ನಿಂದ ಚೆನ್ನೈಗೆ ಪ್ರಯಾಣ ಬೆಳೆಸಿದಂಥ ವ್ಯಕ್ತಿಗೆ ಈ ಹೊಸ ಸೋಂಕು ತಗುಲಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ.
ಬ್ರಿಟನ್​ನಲ್ಲಿ ಈ ಹೊಸ ಕೋವಿಡ್​ ಸೋಂಕು ಮಿತಿಮೀರಿದ್ದು ಅಲ್ಲಿಯ ಜನ ಅಕ್ಷರಶಃ ನಲುಗಿ ಹೋಗಿದ್ದಾರೆ. ಈ ಸೋಂಕು ಬೇರೆ ದೇಶಗಳಿಗೆ ಹರಡದಂತೆ ಭಾರತ,ಬ್ರಿಟನ್ವಿಮಾನ ಹಾರಾಟ ರದ್ದು ಮಾಡಲಾಗಿದೆ. ಭಾರತದಿಂದಬ್ರಿಟನ್ಗೆ ತೆರಳುವ ವಿಮಾನ ಸಂಚಾರವನ್ನೂ ಕೂಡಾ ಈ ಸಂದರ್ಭದಲ್ಲಿ ತಾತ್ಕಾಲಿಕ ಸ್ಥಗಿತ ಮಾಡಲಾಗಿದೆ.
ಆದರೆ ಈ ನಡುವೆಯೇ ಚೆನ್ನೈ ಮೂಲದ ವ್ಯಕ್ತಿ ಬ್ರಿಟನ್​ ಪ್ರವಾಸದಲ್ಲಿದ್ದರು. ಇದೇ ಸಂದರ್ಭದಲ್ಲಿ ಬ್ರಿಟನ್​ನಲ್ಲಿ ಈ ಹೊಸ ಕರೊನಾ ಸೋಂಕು ಕಾಣಿಸಿಕೊಂಡಿದೆ. ಅಲ್ಲಿಂದ ಪುನಃ ತಮ್ಮ ಊರಿಗೆ ಈ ವ್ಯಕ್ತಿ ಬಂದಿದ್ದಾರೆ. ಇದೀಗ ಹಳೆಯ ಕರೊನಾ ಸೋಂಕಿನೊಟ್ಟಿಗೆ ಹೊಸ ಸೋಂಕಿನ ಪತ್ತೆಯನ್ನೂ ವಿಮಾನ ನಿಲ್ದಾಣಗಳಲ್ಲಿ ಮಾಡಲಾಗುತ್ತಿದೆ.
ಇದನ್ನೂ ಓದಿ:ಹೊಸ ರೂಪಾಂತರ ಕರೊನಾ ವೈರಸ್​ ನಿಯಂತ್ರಣ ತಪ್ಪಿಲ್ಲ: ಡಬ್ಲ್ಯುಎಚ್​ಒ ಸ್ಪಷ್ಟನೆ
ಬ್ರಿಟನ್​ನಿಂದ ಬರುವ ಪ್ರಯಾಣಿಕರಿಗೆ ಆರ್​ಟಿ ಪಿಸಿಆರ್ ಪರೀಕ್ಷೆಗೆ ಒಳಪಡಿಸಿ ಈ ಸೋಂಕು ತಗುಲಿದೆಯೇ ಎಂಬುದನ್ನು ಪತ್ತೆ ಹಚ್ಚುತ್ತಾರೆ. ಈ ಸಂದರ್ಭದಲ್ಲಿ ಚೆನ್ನೈ ವ್ಯಕ್ತಿಗೆ ಈ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ಭಾರತದಲ್ಲಿ ಹೊಸ ಕರೊನಾ ಆತಂಕ ಸೃಷ್ಟಿಸಲು ಶುರು ಮಾಡಿದಂತಾಗಿದೆ.
ಈ ವ್ಯಕ್ತಿಯ ಮೇಲೆ ವೈದ್ಯರು ತೀವ್ರ ನಿಗಾ ವಹಿಸಿದ್ದಾರೆ. ಚಕಿತ್ಸೆಗಾಗಿ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಲಿವ್​ ಇನ್ ಹೆಸರಲ್ಲಿ ಗರ್ಭಿಣಿ ಮಾಡಿ ಬೀದಿಗೆ ಬಿಟ್ಟಿದ್ದಾನೆ- ಆತ್ಮಹತ್ಯೆ ಬಿಟ್ಟು ಬೇರೆನು ಮಾಡಲಿ?

ಈ ಮಗುವಿಗೆ 60 ವರ್ಷ ಎಷ್ಟು ಬೇಕೋ ಅಷ್ಟು ಪಿಜ್ಜಾ ಫ್ರೀ! ಕಾರಣ ಕೇಳಿದ್ರೆ ಅಚ್ಚರಿಯಾಗ್ತೀರಾ…

ಹೆಸರು ತಂದಿಟ್ಟ ಗ್ರಹಚಾರ: ಜಾಮೀನು ಸಿಕ್ಕರೂ ಎಂಟು ತಿಂಗಳು ಮಾಡಲಿಲ್ಲ ಬಿಡುಗಡೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 4 =
Remember me
