ಲಖನೌ:ನನ್ನ ಹೆಂಡತಿಗೆ ಸ್ನಾನ ಮಾಡೋದು ಎಂದ್ರೆ ಆಗಲ್ಲ, ದಿನವೂ ಒತ್ತಾಯ ಮಾಡಬೇಕು. ಸ್ನಾನ ಮಾಡು ಎಂದರೆ ಸಾಕು ಜಗಳಕ್ಕೆ ಬರ್ತಾಳೆ, ಇಂಥವಳ ಜತೆ ನಾನೂ ಹೇಗೆ ಬಾಳಲಿ?
ಹೀಗೆಂದು ಉತ್ತರ ಪ್ರದೇಶದ ಅಲೀಘರ್‌ನ ಯುವಕನೊಬ್ಬ ಮಹಿಳಾ ಆಯೋಗದ ಮುಂದೆ ಅಳಲು ತೋಡಿಕೊಂಡಿದ್ದಾನೆ. ಸ್ನಾನಕ್ಕೆ ಒಪ್ಪದ ಪತ್ನಿ ವಿರುದ್ಧ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಈತನ ಕೇಸ್‌ ಇದೀಗ ಮಹಿಳಾ ಆಯೋಗದ ಮುಂದೆ ಬಂದಿದ್ದು, ಪತ್ನಿಯಿಂದ ದೂರ ಇರಲೇಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಅವನು ಗೋಳು ತೋಡಿಕೊಂಡಿದ್ದಾನೆ.
ಅಲಿಗರ್‌ನ ಚಂದೌಸ್ ಗ್ರಾಮದ ಪತಿ ಸಮೀಪದ ಕ್ವಾರ್ಸಿ ಗ್ರಾಮದ ಯುವತಿಯ ಜತೆ ಮದುವೆಯಾಗಿದ್ದು, ಅವರಿಗೆ ಒಂದು ವರ್ಷದ ಮಗು ಕೂಡ ಇದೆ. ಆದರೆ ಈ ಮಧ್ಯೆ ಪತಿ-ಪತ್ನಿ ನಡುವೆ ಸ್ನಾನದ ವಿಷಯವಾಗಿ ಸಾಕಷ್ಟು ಬಾರಿ ಗಲಾಟೆಯಾಗಿದೆಯಂತೆ. ಸ್ನಾನಕ್ಕೆ ಒಪ್ಪದ ತನ್ನ ಪತ್ನಿ ವಿರುದ್ಧ ಪತಿ ಕೋರ್ಟ್‌ಗೆ ಕೇಸ‌ ಹಾಕಿದ್ದು, ತಲಾಖ್‌ಗೆ ಅರ್ಜಿ ಸಲ್ಲಿಸಿದ್ದಾನೆ.
ಆದರೆ ಪತ್ನಿ ಮಹಿಳಾ ಆಯೋಗದ ಮುಂದೆ ಸಹಾಯ ಕೋರಿದ್ದು, ತನ್ನ ಪತಿ ತಲಾಖ್‌ಗೆ ಅರ್ಜಿ ಸಲ್ಲಿಸಿದ್ದಾನೆ. ನನಗೆ ಇದು ಇಷ್ಟವಿಲ್ಲ. ನನ್ನ ದಾಂಪತ್ಯವನ್ನು ಉಳಿಸಿಕೊಡಿ ಎಂದು ಆಕೆ ಮೊರೆ ಹೋಗಿದ್ದಾಳೆ. ಕೋರ್ಟ್‌ ನಿರ್ದೇಶನದ ಮೇರೆಗೆ ಮಹಿಳಾ ಆಯೋಗವು ಈ ದಂಪತಿಗೆ ಆಪ್ತ ಸಮಾಲೋಚನೆ ನಡೆಸಿದೆ.
ಆದರೆ ನಿತ್ಯ ಸ್ನಾನ ಮಾಡದ ಪತ್ನಿಯ ಜತೆ ತನಗೆ ಮಲಗಲೂ ಆಗುತ್ತಿಲ್ಲ, ಹೀಗಿದ್ದ ಮೇಲೆ ಅವಳ ಜತೆ ಹೇಗೆ ಸಂಸಾರ ಮಾಡಲಿ ಎಂದು ಪತಿರಾಯ ಕೇಳಿದ್ದಾನೆ. ಸ್ನಾನ ಮಾಡು ಎಂದರೆ ಜಗಳಕ್ಕೆ ಬರುತ್ತಾಳೆ, ಇದರಿಂದ ನಿತ್ಯವೂ ಮನೆಯಲ್ಲಿ ಕಲಹವಾಗಿದೆ ಎಂದಿದ್ದಾನೆ.
ನಂತರ ಪತಿ-ಪತ್ನಿಯನ್ನು ಕರೆದು ಬುದ್ಧಿವಾದ ಹೇಳಿದ ಆಯೋಗವು ಇಷ್ಟು ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಪಡೆದುಕೊಳ್ಳದಂತೆ ಬುದ್ಧಿಮಾತು ಹೇಳಿದೆ. ಇಬ್ಬರನ್ನೂ ಕರೆದು ಬುದ್ಧಿವಾದ ಹೇಳಿದ್ದೇವೆ. ನಿಮ್ಮಲ್ಲಿಯೇ ಬಗೆಹರಿಸಬಹುದಾದ ಈ ಸಣ್ಣ ಕಾರಣಕ್ಕೆ ವಿಚ್ಛೇದನ ಪಡೆಯುವುದು ಸರಿಯಲ್ಲ. ಈ ನಿರ್ಧಾರ ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದೇವೆ. ಮುಂದೇನಾಗತ್ತೋ ನೋಡಬೇಕು ಎಂದು ಆಪ್ತ ಸಮಾಲೋಚಕರು ಹೇಳಿದ್ದಾರೆ.
ಮಗಳ ಸಾವಿಗೆ ಅಳಿಯನ ಖಾಸಗಿ ಅಂಗ ಕಾರಣ ಎಂದು ತಂದೆಯ ದೂರು: ಗಾತ್ರ ಪರೀಕ್ಷಿಸಿದ ಪೊಲೀಸರು!

ಸುಂದರಿಗೆ ಮರುಳಾಗಿ ಆಕೆ ಜತೆ ರಾತ್ರಿ ಕಳೆದ ಸೇನಾಧಿಕಾರಿ- ಕಾಮದ ನಶೆಯಲ್ಲಿ ಸಹಿ ಹಾಕಿ ಪೇಚಿಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 5 =
Remember me
