ಕೋಲ್ಕತಾ:ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿವಾಸಕ್ಕೆ ವ್ಯಕ್ತಿಯೊಬ್ಬ ಕಬ್ಬಿಣದ ರಾಡ್ ತೆಗೆದುಕೊಂಡು ನುಸುಳಿದ್ದು, ಇದೀಗ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಆರೋಪಿಯನ್ನು ಹಫೀಜುಲ್ ಮೊಲ್ಲಾಹ್ ಎಂದು ಗುರುತಿಸಲಾಗಿದ್ದು ಈತ ಹೀಗೆಕೆ ಮಾಡಿದ್ದ ಎನ್ನುವುದು ಇನ್ನಷ್ಟೇ ತನಿಖೆಯಿಂದ ಬಯಲಾಗಬೇಕಿದೆ.
ಈ ನಡುವೆ ಮಮತಾ ಅವರ ನಿವಾಸಕ್ಕೆ ಹೆಚ್ಚಿನ ಪೊಲೀಸ್​ ಬಂದೋಬಸ್ತ್ ಒದಗಿಸಲಾಗಿದೆ. ಕೃತ್ಯಕ್ಕೆ ಮುನ್ನ ಹಫೀಜುಲ್ ಮೊಲ್ಲಾಹ್ ಮಮತಾ ಅವರ ಮನೆಯ ಗೋಡೆಗಳನ್ನು ಅಳತೆ ಮಾಡಿರುವುದು ಸಿಸಿಟಿವಿಯಿಂದ ತಿಳಿದುಬಂದಿದೆ. ಹೀಗೆ ಮಾಡಿದ ಮರುದಿನ ಮನೆಯ ಆವರಣದೊಳಗೆ ಎಲ್ಲರ ಕಣ್ಣುತಪ್ಪಿಸಿ ನುಗ್ಗಿದ್ದಾನೆ.
ಮಮತಾ ಬ್ಯಾನರ್ಜಿಯವರು ಸಾಮಾನ್ಯವಾಗಿ ಪತ್ರಿಕಾಗೋಷ್ಠಿ ನಡೆಸಲು ಜಾಗದಲ್ಲಿಯೇ ಈ ವ್ಯಕ್ತಿ ಅಡಗಿಕುಳಿತುಕೊಂಡಿದ್ದು, ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾನೆ. ನಸುಕಿನ 1.20 ರ ಸುಮಾರಿಗೆ ಬ್ಯಾನರ್ಜಿಯವರ ನಿವಾಸವನ್ನು ಪ್ರವೇಶಿಸಿ ಮರುದಿನ ಬೆಳಗ್ಗೆ 8 ಗಂಟೆಯವರೆ ಆವರಣದೊಳಗೆ ಇದ್ದದ್ದು ತಿಳಿದುಬಂದಿದೆ. ಶರ್ಟ್ ಅಡಿಯಲ್ಲಿ ಕಬ್ಬಿಣದ ರಾಡ್ ಬಚ್ಚಿಟ್ಟುಕೊಂಡು ಒಳಗೆ ನುಗ್ಗಿದ್ದಾನೆ.
ಅನುಮಾನಾಸ್ಪದವಾಗಿದ್ದ ಈ ವ್ಯಕ್ತಿಯ ಮೇಲೆ ಭದ್ರತಾ ಸಿಬ್ಬಂದಿ ದೃಷ್ಟಿ ಬೀಳುತ್ತಲೇ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆಗ ರಾಡ್ ಕೆಳಕ್ಕೆ ಬಿದ್ದಿದೆ. ನಂತರ ವಿಚಾರಣೆ ಮಾಡಿದಾಗ ಈ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ಆತನ ಕುಟುಂಬದವರು ಹೇಳಿರುವುದಾಗಿ ವರದಿಯಾಗಿದೆ.
ಇದರ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ. ಆತನನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಮತಾ ಬ್ಯಾನರ್ಜಿಯವರಿಗೆ ನೀಡಲಾಗಿರುವ ಅತ್ಯಂತ ಕಠಿಣ ಝಡ್​ಪ್ಲಸ್​ ಭದ್ರತೆಯನ್ನೂ ಮೀರಿ ಆತ ನುಗ್ಗಿರುವುದು ಹೇಗೆ ಎಂಬ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ.
ವಾಯುಪಡೆಗೆ ನೇಮಕಾತಿ- ನೋಂದಣಿ ಕ್ಲೋಸ್​: ಅಬ್ಬಬ್ಬಾ ಈ ಪರಿ ಅರ್ಜಿ! ಅಗ್ನಿವೀರರಾಗಲು ಯುವತಿಯರ ದೌಡು…

ಅಪ್ಪು ನಡೆಸುತ್ತಿದ್ದ ಶಾಲೆಯ ಹೊಣೆ ಹೊತ್ತ ನಟ ವಿಶಾಲ್​ಗೆ ಭಾರಿ ಆಘಾತ: ಚಿತ್ರೀಕರಣದ ವೇಳೆ ಮತ್ತೊಮ್ಮೆ ಅನಾಹುತ

ಬಿಜೆಪಿ ಐಟಿ ಸೆಲ್ ಮುಖ್ಯಸ್ಥನ ಭಯಾನಕ ಹಿಸ್ಟರಿ! ಜಮ್ಮುವಿನಲ್ಲಿ ಬಂಧಿಸಿರೋ ಉಗ್ರನ ಹಿನ್ನೆಲೆ ನೋಡಿ ಶಾಕ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven + eleven =
Remember me
