ಇಸ್ಲಾಮಾಬಾದ್​​:ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಏರುತ್ತಲೇ ಸಾಗಿದೆ. ಒಂದೆಡೆ ಬಲವಂತದ ಮತಾಂತರ, ಇನ್ನೊಂದೆಡೆ ಮದುವೆ ಮಾಡಿಕೊಂಡು ಹಿಂದೂ ಹೆಣ್ಣುಮಕ್ಕಳನ್ನು ನಡುರಸ್ತೆಯಲ್ಲಿ ಕೈಬಿಡುವ ಹೇಯ ಕೃತ್ಯ ಪಾಕಿಸ್ತಾನದಲ್ಲಿಯೂ ಎಗ್ಗಿಲ್ಲದೇ ಸಾಗಿದೆ. ಮತಾಂತರಗೊಳ್ಳಲು ನಿರಾಕರಿಸಿದ ಯುವತಿಯೊಬ್ಬಳನ್ನು ನಡುರಸ್ತೆಯಲ್ಲಿಯೇ ಯುವಕನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸಿಂಧ್‌ ಪ್ರದೇಶದಲ್ಲಿ ನಡೆದಿದೆ.
ಪೂಜಾ ಕುಮಾರಿ ಎಂಬ 18 ವರ್ಷದ ಯುವತಿ ನೀಚ ವಾಹಿದ್‌ ಎಂಬಾತನಿಂದ ಪ್ರಾಣ ಕಳೆದುಕೊಂಡಿದ್ದಾನೆ. ವಾಹಿದ್‌ ಈಕೆಯನ್ನು ಪ್ರೀತಿಸುತ್ತಿದ್ದ. ಪದೇ ಪದೇ ಕಾಡುತ್ತಿದ್ದ. ಪೂಜಾಳನ್ನು ಹೇಗಾದರೂ ಮಾಡಿ ಇಸ್ಲಾಂಗೆ ಮತಾಂತರ ಮಾಡಿ ಆಕೆಯನ್ನು ಮದುವೆಯಾಗಬೇಕು ಎಂದುಕೊಂಡಿದ್ದ. ಇದಕ್ಕೆ ಪೂಜಾ ನಿರಾಕರಿಸುತ್ತಳೇ ಬಂದಿದ್ದಳು.
ಮತಾಂತರಕ್ಕೆ ಆಕೆ ವಿರೋಧಿಸಿದ ಹಿನ್ನೆಲೆಯಲ್ಲಿ ವಾಹಿದ್‌ ಗುಂಡಿನ ದಾಳಿ ನಡೆಸಿದ್ದಾನೆ. ಈ ಘಟನೆಯಿಂದ ಸಿಂಧ್‌ ಪ್ರದೇಶದಲ್ಲಿನ ಹಿಂದೂಗಳು ಬೆಚ್ಚಿಬಿದ್ದಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾನು ಆಕೆಯನ್ನು ಮತಾಂತರಗೊಳಿಸಿ ಮದುವೆ ಮಾಡಿಕೊಳ್ಳಬೇಕೆಂದು ಇದ್ದು, ಅದಕ್ಕೆ ಅವಳು ನಿರಾಕರಿಸಿದ್ದಳು ಎಂಬ ಸತ್ಯವನ್ನು ಈ ಪಾಪಿ ಒಪ್ಪಿಕೊಂಡಿದ್ದಾನೆ.
ಪೂಜಾಳ ಸಾವಿನ ಸಮಗ್ರ ತನಿಖೆ ಆಗಿ ಅಪರಾಧಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಸ್ಥಳೀಯ ಹಿಂದೂ ಸಂಘಟನೆಗಳು ‘ಜಸ್ಟೀಸ್​ ಫಾರ್​ ಪೂಜಾ ಕುಮಾರಿ’ ಎಂಬ ಹ್ಯಾಷ್‌​ಟ್ಯಾಗ್​​​​ನೊಂದಿಗೆ ಟ್ವಿಟರ್​​ನಲ್ಲಿ ಅಭಿಯಾನ ನಡೆಸುತ್ತಿದ್ದಾರೆ.
ಪಾಕಿಸ್ತಾನದ ಸಿಂಧ್​ ಪ್ರದೇಶದಲ್ಲಿ ಹಿಂದೂ ಸಮುದಾಯದ ಅಲ್ಪಸಂಖ್ಯಾತರೇ ಹೆಚ್ಚಾಗಿ ವಾಸವಾಗಿದ್ದಾರೆ. ಈ ಪ್ರದೇಶದಲ್ಲಿ ಮತೀಯ ಮೂಲಭೂತವಾದಿಗಳಿಂದ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಲೇ ಇವೆ. ಹಿಂದೂಗಳು ಮಾತ್ರವಲ್ಲದೇ ಕ್ರೈಸ್ತ ಮತ್ತು ಸಿಖ್‌ ಧರ್ಮೀಯ ಮಹಿಳೆಯರನ್ನು ಕೂಡ ಬಲವಂತವಾಗಿ ಮತಾಂತರಗೊಳಿಸಿ, ಮದುವೆ ಮಾಡಿಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪಗಳೂ ಕೇಳಿಬಂದಿವೆ.
ಜಾತ್ರೆಗಳಲ್ಲಿ ಹಿಂದೂ ವ್ಯಾಪಾರಸ್ಥರಿಗೆ ಮಾತ್ರ ಅವಕಾಶ: ಹಿಜಾಬ್‌ ಪ್ರತಿಭಟನೆಯಲ್ಲಿ ನಾವಿಲ್ಲ ಎಂದು ಕಣ್ಣೀರು ಹಾಕ್ತಿರೋ ವ್ಯಾಪಾರಸ್ಥರು

ಉ.ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು: ಪತ್ನಿಯನ್ನು ಥಳಿಸಿ ಹೊರಹಾಕಿದ ಪತಿ- ಎತ್ತಣೆತ್ತಣ ಸಂಬಂಧ ಅಂತೀರಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 14 =
Remember me
