ಅತ್ಯಂತ ಪುರಾತನವಾದ ಔಷಧ ಎಂದರೆ ಅದು ಆಯುರ್ವೇದ. ಕರೊನಾದ ಈ ದಿನಗಳಲ್ಲಿ ಬಗೆಬಗೆ ಕಷಾಯಕ್ಕೆ ಭಾರಿ ಬೇಡಿಕೆ ಬಂದಿದೆ. ಅಂಗಡಿಗಳಲ್ಲಿ ಸಿಗುವ ಕಷಾಯಪುಡಿಗಳಲ್ಲಿ ಏನೇನೋ ಮಿಕ್ಸ್​ ಆಗಿರಬಹುದು ಎಂಬ ಸಂದೇಹ ಬರುವುದು ಸಹಜ. ಆದ್ದರಿಂದ ಅಷ್ಟೆಲ್ಲಾ ಸಂದೇಹ ಪಡುವ ಬದಲು ಮನೆಯಲ್ಲಿಯೇ ತಯಾರಿಸಬಹುದು ವಿವಿಧ ಕಷಾಯಪುಡಿಗಳು. ಇದರ ಕುರಿತು ಇಲ್ಲಿ ವಿವರಿಸಿದ್ದಾರೆ| ಸುಧಾ ಎಚ್‌.ಎಸ್‌.
ಲಿಂಬು ಕಷಾಯಅಗತ್ಯ ಪದಾರ್ಥಗಳು2 ಲಿಂಬೇ ಹಣ್ಣು3 ಚಮಚ ಜೀರಿಗೆಒಂದೆರಡು ಮೆಣಸಿನಕಾಳು3 ಎಲೆ ತುಳಸಿಚಿಟಿಕೆ ಉಪ್ಪುಸ್ವಲ್ಪ ಕಲ್ಲುಸಕ್ಕರೆ3 ಲೋಟ ನೀರುಮಾಡುವುದು ಹೀಗೆ:ಒಂದು ಪಾತ್ರೆಯಲ್ಲಿ ನೀರು ಹಾಕಿ. ಅದಕ್ಕೆ ಲಿಂಬೆಹಣ್ಣು ಸೇರಿದಂತೆ ಮೇಲೆ ತಿಳಿಸಿರುವ ಎಲ್ಲ ಪದಾರ್ಥಗಳನ್ನೂ ಹಾಕಿ ಸಣ್ಣ ಉರಿಯಲ್ಲಿ ಕುದಿಸಿ. ಪಾತ್ರೆಯಲ್ಲಿರುವ ನೀರು ಕಾದು ಕಾದು ಅರ್ಧಭಾಗಕ್ಕೆ ಬರುವವರೆಗೂ ಕುದಿಸಿದರೆ ಕಷಾಯ ಸಿದ್ಧ.ಪ್ರಯೋಜನ: ಜ್ವರ, ನೆಗಡಿ ಇದ್ದರೆ ದಿನಕ್ಕೆ ಮೂರು ಬಾರಿ ಸೇವಿಸಿದರೆ ಅದು ಶೀಘ್ರ ವಾಸಿಯಾಗುವುದು. ಇದನ್ನು ಆರೋಗ್ಯವಂತರೂ ದಿನಕ್ಕೊಂದು ಬಾರಿ ಕುಡಿಯಬಹುದು.
ಹಿಪ್ಪಲಿ ಕಷಾಯಅಗತ್ಯ ಪದಾರ್ಥಗಳುಒಂದು ಹಿಪ್ಪಲಿಅರ್ಧ ಇಂಚು ಒಣಶುಂಠಿ8- 10 ಕಾಳುಮೆಣಸುನಾಲ್ಕೈದು ಎಲೆ ತುಳಸಿನಾಲ್ಕು ಚಮಚ ಬೆಲ್ಲದ ಪುಡಿ2 ಲೋಟ ನೀರು
ಮಾಡುವುದು ಹೀಗೆ:ಮೇಲಿನ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಜಜ್ಜಿಕೊಳ್ಳಿ. ಎರಡು ಲೋಟ ನೀರಿಗೆ ಎಲ್ಲವನ್ನೂ ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ.ನೀರು ಅರ್ಧ ಭಾಗಕ್ಕೆ ಬರುವವರೆಗೂ ಕಾಯಿಸಿ. ಸ್ವಲ್ಪ ಬಿಸಿಯಾಗಿದ್ದಲೇ ಕುಡಿಯಿರಿ.ಪ್ರಯೋಜನ: ಕೆಮ್ಮು ಮತ್ತು ಗಂಟಲು ನೋವಿಗೆ ಇದು ಉತ್ತಮ ಔಷಧ. ಆಹಾರದ ಮೊದಲು ದಿನಕ್ಕೆ ಮೂರು ಸಲದಂತೆ ಸೇವಿಸಿ. ಶೀತವಾಗಿದ್ದರೆ ಇದಕ್ಕೆ ಸ್ವಲ್ಪ ಹಾಲು ಸೇರಿಸಿಕೊಳ್ಳಿ. ಅದಕ್ಕೆ ಚಿಟಿಕೆಯಷ್ಟು ಅರಿಶಿಣ ಹಾಕಿ ಚೆನ್ನಾಗಿ ಕುದಿಸಿ. ಕುಡಿಯುವ ಸಂದರ್ಭದಲ್ಲಿ ಸ್ವಲ್ಪ ಜೇನುತುಪ್ಪ ಸೇರಿಸಿ.
ದೊಡ್ಡಪತ್ರೆಯ (ಸಾಸಂಬರ್‌) ಕಷಾಯಅಗತ್ಯ ಪದಾರ್ಥಗಳು10- 12 ದೊಡ್ಡಪತ್ರೆ ಎಲೆ2 ಚಮಚ ಕಾಳುಮೆಣಸು2 ಚಮಚ ಜೀರಿಗೆ3 ಚಮಚ ಬೆಲ್ಲದ ಪುಡಿ4 ಕಪ್‌ ನೀರು
ಮಾಡುವುದು ಹೀಗೆ:ದೊಡ್ಡಪತ್ರೆ ಎಲೆಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಕಾಳುಮೆಣಸು, ಬೆಲ್ಲ, ಜೀರಿಗೆ ಜಜ್ಜಿಕೊಳ್ಳಿ. ಇದನ್ನು ನೀರಿಗೆ ಹಾಕಿ ಕುದಿಸಿ. ಇದು ಕುದಿಯುತ್ತಿರುವಾಗ ದೊಡ್ಡಪತ್ರೆ ಸೊಪ್ಪನ್ನು ಹಾಕಿ ಚೆನ್ನಾಗಿ ಕುದಿಸಿ. ಇದನ್ನು ಬಿಸಿಯಾಗಿರುವಾಗಲೇ ಸ್ವಲ್ಪ ಸ್ವಲ್ಪವೇ ಕುಡಿಯಿರಿ. ದೊಡ್ಡಪತ್ರೆಯ ಬದಲು ಲಿಂಬೆಹುಲ್ಲನ್ನು ಹಾಕಿಯೂ ಈ ರೀತಿ ಕಷಾಯ ತಯಾರಿಸಿಕೊಳ್ಳಬಹುದು. ಅದನ್ನು ಜೇನುತುಪ್ಪದ ಜೊತೆ ಕುಡಿದರೆ ಉತ್ತಮ.ಪ್ರಯೋಜನ: ಗಂಟಲ ಕೆರೆತ, ಕಫ, ಹೊಟ್ಟೆ ಉಬ್ಬರ, ಶೀತದಿಂದ ತಲೆನೋವಿಗೆ ಇದು ಉತ್ತಮ ಔಷಧ.

ಕೊತ್ತಂಬರಿ- ಕಷಾಯಅಗತ್ಯ ಪದಾರ್ಥಗಳು1 ಚಮಚ ಜೀರಿಗೆ1 ಚಮಚ ಧನಿಯಾ1 ಜ್ಯೇಷ್ಠಮಧುಕಾಲು ಚಮಚ ಮೆಂತ್ಯ10 ಕಾಳುಮೆಣಸುಕಾಲು ಚಮಚ ಓಮದ ಪುಡಿಒಂದು ಚಮಚ ಅರಿಶಿಣ4 ಲವಂಗ1 ಚಮಚ ಶುಂಠಿ ಪುಡಿಕಾಲು ಹಿಪ್ಪಲಿಕಾಲು ಕಪ್‌ ಹಾಲು1 ಚಮಚ ಬೆಲ್ಲದ ಪುಡಿ3 ಕಪ್‌ ನೀರುಮಾಡುವುದು ಹೀಗೆ:ಬೆಲ್ಲ ಬಿಟ್ಟು ಮೇಲೆ ತಿಳಿಸಿರುವ ಎಲ್ಲ ಪದಾರ್ಥಗಳನ್ನೂ ಹುರಿದುಕೊಳ್ಳಿ. ಅದು ಆರಿದ ಮೇಲೆ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ. ಈ ಪುಡಿಯನ್ನು ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ ಶೋಧಿಸಿ. ಇದಕ್ಕೆ ಹಾಲು ಸೇರಿಸಿ ಕುಡಿಯಿರಿ.ಪ್ರಯೋಜನ: ದಿನಕ್ಕೆರಡು ಬಾರಿ ಊಟಕ್ಕಿಂತ ಮುಂಚೆ ಸೇವಿಸಿದರೆ ಶೀತದಿಂದ ಕಟ್ಟಿದ ಮೂಗು ತೆರೆದುಕೊಳ್ಳುತ್ತದೆ, ಶೀತ ವಾಸಿಯಾಗುತ್ತದೆ.

ಹಸಿ ಶುಂಠಿ ಕಷಾಯಅಗತ್ಯ ಪದಾರ್ಥಗಳುಒಂದು ದೊಡ್ಡ ಶುಂಠಿಒಂದು ಚಮಚ ಬೆಲ್ಲಕಾಲು ಕಪ್‌ ಹಾಕುಎರಡು ಕಪ್‌ ನೀರುಮಾಡುವುದು ಹೀಗೆ:ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ ಕುದಿಸಿ. ನಂತರ ಇದಕ್ಕೆ ಬೆಲ್ಲ ಹಾಕಿ ಪುನಃ ಕುದಿಸಿ ಗ್ಯಾಸ್‌ ಆರಿಸಿ. ಇದಕ್ಕೆ ಹಾಲು ಸೇರಿಸಿ. ಬಿಸಿ ಇರುವಾಗಲೇ ಸೇವಿಸಿಪ್ರಯೋಜನ: ಗಂಟಲು ಕೆರೆತ, ಶೀತ, ತಲೆಭಾರ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ದಿನಕ್ಕೆ 2 3 ಬಾರಿ ಸೇವಿಸಿ. ಇದಕ್ಕೆ ಒಂದು ಚಿಕ್ಕ ಜೇಷ್ಠಮಧುವನ್ನು ಸೇರಿಸಿ ಕುದಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.
ಕರಿಮೆಣಸಿನ ಕಷಾಯ‌ಅಗತ್ಯ ಪದಾರ್ಥಗಳು2 ಚಮಚ ಕರಿಮೆಣಸುಅರ್ಧ ಚಮಚ ಜೀರಿಗೆಅರ್ಧ ಇಂಚು ಒಣಶುಂಠಿಕಾಲು ಚಮಚ ಕೊತ್ತಂಬರಿಕಾಲು ಚಮಚ ಉದ್ದಿನ ಬೇಳೆಒಂದು ಏಲಕ್ಕಿ2 ಲವಂಗಕಾಲು ಚಮಚ ಅರಿಶಿಣ
ಮಾಡುವುದು ಹೀಗೆ:ಈ ಮೇಲಿನ ಎಲ್ಲ ಪದಾರ್ಥಗಳನ್ನು ಹುರಿದು ಪುಡಿ ಮಾಡಿಕೊಳ್ಳಿ. ಇದನ್ನು ಬಾಟಲಿಯಲ್ಲಿ ಹಾಕಿಟ್ಟುಕೊಂಡು ಬೇಕಾದಾಗ ಬಳಸಿಕೊಳ್ಳಬಹುದು.ಕಷಾಯ ಮಾಡುವ ವಿಧಾನ: ಎರಡು ಲೋಟ ನೀರಿಗೆ ಈ ಪುಡಿಯನ್ನು ಸೇರಿಸಿ ಕುದಿಸಿ. ಕುದಿಯುವ ನೀರಿಗೆ ಸ್ವಲ್ಪ ಬೆಲ್ಲದ ಚೂರು, ಸ್ವಲ್ಪ ಉಪ್ಪು, ತುಳಸಿ ಎಲೆ ಹಾಕಿ.ಪ್ರಯೋಜನ: ಇದು ಜ್ವರ, ಶೀತ, ನೆಗಡಿ ಕಡಿಮೆ ಮಾಡುತ್ತದೆ. ಶೀತದಿಂದ ಬಾಯಿ ರುಚಿಸದಿದ್ದರೆ ಈ ಕಷಾಯ ಕುಡಿದು ನೋಡಿ.

ಒಣಶುಂಠಿ ಕಷಾಯಅಗತ್ಯ ಪದಾರ್ಥಗಳುಚಿಕ್ಕ ಒಣ ಶುಂಠಿ1 ಚಮಚ ಕರಿ ಮೆಣಸು,1 ಚಮಚ ಜೀರಿಗೆ,1 ಚಮಚ ಕೊತ್ತಂಬರಿ ಬೀಜ1 ನಿಂಬೆ ಹಣ್ಣುಚಿಟಿಕೆ ಉಪ್ಪು1 ಚಮಚ ಬೆಲ್ಲದ ಪುಡಿಒಂದು ಚಮಚ ಕೆಂಪು ಕಲ್ಲುಸಕ್ಕರೆ.
ಮಾಡುವುದು ಹೀಗೆ:ಒಣ ಶುಂಠಿಯನ್ನು ತುಂಡು ಮಾಡಿ ಅಥವಾ ಜಜ್ಜಿಕೊಳ್ಳಿ. ಕರಿಮೆಣಸು, ಜೀರಿಗೆ ಮತ್ತು ಕೊತ್ತಂಬರಿ ಬೀಜಗಳನ್ನು ಪ್ರತ್ಯೇಕವಾಗಿ ಹುರಿಯಿರಿ. ಇದಕ್ಕೆ ಒಣ ಶುಂಠಿ ಹಾಕಿ ಪುಡಿಮಾಡಿ. ಈ ಪುಡಿಯನ್ನು ಬಾಟಲಿಯಲ್ಲಿ ತುಂಬಿಸಿಕೊಂಡು ಆಗತ್ಯವಿರುವಾಗ ಕಷಾಯ ತಯಾರಿಸಲು ಉಪಯೋಗಿಸಬಹುದು.ಕಷಾಯ ತಯಾರಿಸುವುದು ಹೀಗೆ: ನಾಲ್ಕು ಕಪ್‌ ನೀರಿಟ್ಟು ಕುದಿಸಿ. ಕುದಿಯುತ್ತಿರುವ ನೀರಿಗೆ ನಿಂಬೆ ಹಣ್ಣಿನ ರಸ, ಉಪ್ಪು, ಪುಡಿ ಮಾಡಿದ ಬೆಲ್ಲ ಮತ್ತು ಮೇಲೆ ತಯಾರಿಸಿಕೊಂಡ ಪುಡಿಯನ್ನು ಹಾಕಿ. 8 -10 ನಿಮಿಷ ಕುದಿಸಿ. ಬೇಕೆಂದರೆ ಕುದಿಸುವಾಗ ಕೆಂಪು ಕಲ್ಲುಸಕ್ಕರೆ ಸೇರಿಸಬಹುದು. ಬಿಸಿಯಿರುವಾಗಲೇ ಹಾಲು ಸೇರಿಸಿ ಅಥವಾ ಹಾಲು ಸೇರಿಸದೆಯೇ ಕುಡಿಯಿರಿ.ಪ್ರಯೋಜನ: ನೆಗಡಿ, ಶೀತ, ಮೂಗು ಕಟ್ಟುವಿಕೆಗೆ ಇದು ರಾಮಬಾಣ.
ನೀವೂ ಬರೆಯಬಹುದು:ಅಡುಗೆಯಲ್ಲಿ ನಿಮಗೆ ಆಸಕ್ತಿ ಇದೆಯೆ? ಹೊಸ ಹೊಸ ಅಡುಗೆಗಳನ್ನು ಮಾಡಿರುವಿರಾ? ಹಾಗಿದ್ದರೆ ಸೂಕ್ತ ಫೋಟೋ ಜತೆ (ಫೋಟೋ ಜತೆ ಅಡುಗೆಯ ಹೆಸರು ಇರಬೇಕು) ನಿಮ್ಮದೊಂದು ಫೋಟೋ ಇಟ್ಟು ನಮಗೆ ಕಳುಹಿಸಿ. ಮೂರಕ್ಕಿಂತ ಹೆಚ್ಚು ಅಡುಗೆ ಇದ್ದರೆ ಚೆನ್ನ. ನಿಮ್ಮ ರೆಸಿಪಿಯನ್ನು[email protected]ಗೆ ಕಳುಹಿಸಿ. ಸಾಧ್ಯವಾದರೆ 2-3 ನಿಮಿಷಗಳ ವಿಡಿಯೋ ಮಾಡಿ ಕಳುಹಿಸಿ.
ಕ್ಷಣ ಕ್ಷಣದ ಸುದ್ದಿಗಾಗಿhttps://www.vijayavani.net/ಕ್ಲಿಕ್ಕಿಸಿ. vijayavani ಫೇಸ್​ಬುಕ್​ ಪುಟವನ್ನು ಫಾಲೋ​ ಮಾಡಿ ಸುದ್ದಿ ಪಡೆಯಿರಿ.
ವಿಟಮಿನ್​ ಸೊಪ್ಪಿನ ಮಹಿಮೆ ಬಲ್ಲಿರಾ? ಇಲ್ಲಿವೆ ನೋಡಿ ನೀರೂರಿಸುವ ಖಾದ್ಯಗಳು

ತುಟಿ ಸದಾ ಒಣಗಿ ಕಪ್ಪು ಕಲೆಯಾಗುತ್ತದೆ- ಮನೆಮದ್ದು ಏನಾದರೂ ಇದೆಯೆ?

ಗರ್ಭ ಧರಿಸಿದಾಗ ಮಗುಬೇಡವೆಂದು ಮಾತ್ರೆ ತೆಗೆದುಕೊಂಡೆ- ಬಿಳಿ ಸೆರಗು ಹೋಗುತ್ತಿದೆ: ಪರಿಹಾರವೇನು?

ಋತುಸ್ರಾವ ನಿಂತ ಮೇಲೂ ಮತ್ತೆ ಆಗಿ ಹಿಂಸೆಯಾಗುತ್ತಿದೆ- ಪರಿಹಾರ ತಿಳಿಸಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × three =
Remember me
