ನವದೆಹಲಿ:ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ಸಮೀಕ್ಷೆಗಳನ್ನು ಬುಡಮೇಲು ಮಾಡಿ, ಎನ್​ಡಿಎ ಮೈತ್ರಿಕೂಟ ಮುನ್ನಡೆ ಸಾಧಿಸುತ್ತಿದ್ದರೆ, ಅತ್ತ ಮಣಿಪುರದ ಸಿಂಗಾಟ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ನವೆಂಬರ್ 7ರಂದು ರಾಜ್ಯದ ಲಿಲಾಂಗ್, ವಾಂಗ್‌ಜಿಂಗ್ ಟೆಂತಾ ಮತ್ತು ಸೈತು ಸೇರಿದಂತೆ ಐದು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಈ ಪೈಕಿ ಸಿಂಗಾಟ್​ ಕ್ಷೇತ್ರದ ಮೊದಲ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಅಭ್ಯರ್ಥಿಯಾಗಿದ್ದ ಜಿನ್ಸುವಾನಹೌ ಜಯಗಳಿಸಿದ್ದಾರೆ. ಈ ಕುರಿತು ಚುನಾವಣಾ ಆಯೋಗ ಅಧಿಕೃತವಾಗಿ ಘೋಷಿಸಿದೆ.
ಈವರೆಗಿನ ಅಂಕಿ ಅಂಶಗಳ ಪ್ರಕಾರ ವಾಂಗೊಯ್​ ಗಿಯ್​ ಗೋಯಿ ಕ್ಷೇತ್ರದಲ್ಲಿ ಓನಮ್ ಲುಖೋಯ್ ಸಿಂಗ್ ಅವರು 268 ಮತಗಳ ಅಂತರದಿಂದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಅಭ್ಯರ್ಥಿ ಖುರೈಜಮ್ ಲೋಕನ್ ಸಿಂಗ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.
ಇದನ್ನೂ ಓದಿ:ಎಂಜಿಬಿ ಎಂದರೆ ಮಹಾಘಟ್​​ಬಂಧನ ಅಲ್ಲ… ‘ಮರ್​ ಗಯಾ ಭಾಯ್’ ಎಂದ್ರಂತೆ ರಾಹುಲ್​!
ಕಾಂಗ್ರೆಸ್‌ನ ಮೊಯಿರಾಂಗ್ಥೆಮ್ ಹೇಮಂತ ಸಿಂಗ್ ಅವರು ವಾಂಗ್‌ಜಿಂಗ್ ಟೆಂತಾ ಕ್ಷೇತ್ರದಲ್ಲಿ ಬಿಜೆಪಿಯ ಪಾವೊಮ್ ಬ್ರೋಜೆನ್ ಸಿಂಗ್ ವಿರುದ್ಧ 675 ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ.
ಬಿಹಾರ ವಿಧಾನಸಭಾ ಚುನಾವಣೆ ಹೊರತುಪಡಿಸಿದರೆ, ಮಧ್ಯಪ್ರದೇಶದ 28, ಗುಜರಾತ್‌ನ 8 ಕ್ಷೇತ್ರಗಳ ಉಪಚುನಾವಣೆ, ಕರ್ನಾಟಕ, ಉತ್ತರ ಪ್ರದೇಶದ ಏಳು, ಜಾರ್ಖಂಡ್‌, ನಾಗಾಲ್ಯಾಂಡ್‌ ಮತ್ತು ಒಡಿಶಾದ ತಲಾ ಎರಡು ಮತ್ತು ಛತ್ತೀಸಗಡ, ಹರಿಯಾಣ ಹಾಗೂ ತೆಲಂಗಾಣದ ತಲಾ ಒಂದೊಂದು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿವೆ.
ಮಹಿಳೆ ಎಂದರೆ ವೇಶ್ಯೆ, ಕೆಟ್ಟ ಹೆಂಗಸು ಎಂದಿದ್ದ ಆಕ್ಸ್​ಫರ್ಡ್​​ ಡಿಕ್ಷನರಿಗೆ ಕೊನೆಗೂ ಆಯ್ತು ಜ್ಞಾನೋದಯ!

ನನ್ನ ಸಾವಿಗೆ ಉದ್ಧವ್​ ಠಾಕ್ರೆಯೇ ಕಾರಣ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡ ಕಂಡಕ್ಟರ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 − 8 =
Remember me
