ಇಂಫಾಲ (ಮಣಿಪುರ):ಕೇವಲ ಒಂದೇ ಒಂದು ನಿಮಿಷದ ಅವಧಿಯಲ್ಲಿ ಮಣಿಪುರದ ಇಂಫಾಲ್‌ನ ಯುವಕನೊಬ್ಬ 109 ಪುಶ್​​​-ಅಪ್​​ ಹೊಡೆದು ಗಿನ್ನೆಸ್ ವಿಶ್ವ ದಾಖಲೆ ಪುಟ ಸೇರಿದ್ದಾನೆ.
ಮಣಿಪುರ ಅಜ್ಟೆಕ್ಸ್ ಸ್ಪೋರ್ಟ್ಸ್ ಸಂಸ್ಥೆ, ಇಂಫಾಲ್‌ನ ಅಜ್ಟೆಕ್ಸ್ ಫೈಟ್ ಸ್ಟುಡಿಯೋದಲ್ಲಿ ಆಯೋಜಿಸಿದ್ದ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸ್ಪರ್ಧೆಯಲ್ಲಿ 24 ವರ್ಷದ ತೌನೋಜಮ್ ನಿರಂಜೋಯ್ ಸಿಂಗ್ ಎಂಬಾತ ಈ ದಾಖಲೆ ಬರೆದಿದ್ದಾನೆ. ಈ ಹಿಂದೆ ಒಂದು ನಿಮಿಷಕ್ಕೆ 105 ಪುಶ್‌ ಅಪ್‌ ಮಾಡಿರುವ ದಾಖಲೆ ಇತ್ತು. ಈ ದಾಖಲೆಯನ್ನು ತೌನೋಜಮ್‌ ಮುರಿದಿದ್ದಾನೆ.
ಬ್ಯಾಕ್‌ಗ್ರೌಂಡ್‌ ಚೆನ್ನಾಗಿರಲೆಂದು ಹಳಿಯ ಮೇಲೆ ನಿಂತು ಫೋಟೋ- ಪ್ರಾಣ ಕಳೆದುಕೊಂಡ ದಾವಣಗೆರೆಯ ಬಾಲಕ
ಒಂದೇ ನಿಮಿಷದಲ್ಲಿ ಅತೀ ಹೆಚ್ಚು ಪುಶ್​​-ಅಪ್​ ಮಾಡಿ ವಿಶ್ವ ದಾಖಲೆ ಮಾಡಿದ್ದು ಇದು ಅದ್ಭುತವಾಗಿದೆ. ಈತನ ಸಾಧನೆ ಬಗ್ಗೆ ನಾನು ತುಂಬಾ ಹೆಮ್ಮೆ ಪಡುತ್ತೇನೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಟ್ವೀಟ್​ ಮೂಲಕ ಅಭಿನಂದಿಸಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ
Amazing to see unbelievable power of Manipuri youth T. Niranjoy Singh who broke the Guinness Book of World Records for most push-ups (finger tips) in one minute 💪I'm so proud of his achievement !!pic.twitter.com/r1yT0ePn3f— Kiren Rijiju (@KirenRijiju)January 22, 2022
Amazing to see unbelievable power of Manipuri youth T. Niranjoy Singh who broke the Guinness Book of World Records for most push-ups (finger tips) in one minute 💪I'm so proud of his achievement !!pic.twitter.com/r1yT0ePn3f
Sign in to your account
Please enter an answer in digits:11 + fourteen =
Remember me
