ನವದೆಹಲಿ:ಪ್ರಧಾನಿ ನರೇಂದ್ರ ಮೋದಿಯವರು ಮನ್​ ಕೀ ಬಾತ್​ ಸರಣಿಯ 90ನೇ ಸಂಚಿಕೆಯಂದು ಮಾತನಾಡುತ್ತಾ 1975ರಲ್ಲಿ ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಹೇರಲಾಗಿದ್ದು ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆಪಿಸಿಕೊಂಡರು.
‘ನನಗೆ ನೆನಪಿದೆ. ಅದು ಜೂನ್ ತಿಂಗಳು. ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು. ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ಸಂವಿಧಾನ ನೀಡಿರುವ ಜೀವಿಸುವ ಹಕ್ಕು ಕೂಡ ಕಸಿದುಕೊಳ್ಳಲಾಗಿತ್ತು. ಭಾರತದ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಪ್ರಯತ್ನ ನಡೆದಿತ್ತು’ ಎಂದು ಹೇಳಿದ ಪ್ರಧಾನಿ, ಎವರ್​ಗ್ರೀನ್​ ತಾರೆ, ಅಂದಿನ ಜನಪ್ರಿಯ ಗಾಯಕ ಕಿಶೋರ್ ಕುಮಾರ್ ಅವರನ್ನೂ ಹೇಗೆ ಬ್ಯಾನ್​ ಮಾಡಲಾಯಿತು ಎಂದು ವಿವರಿಸಿದರು.
ಅಂದಿನ ದಿನಗಳಲ್ಲಿ ಸರ್ಕಾರವನ್ನು ಹಾಡಿ ಹೊಗಳಬೇಕಿತ್ತು. ಯಾರೇ ಆಗಲಿ ಅದರ ವಿರುದ್ಧ ದನಿ ಎತ್ತಿದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿತ್ತು. ಸರ್ಕಾರವನ್ನು ಹೊಗಳಲು ನಿರಾಕರಿಸಿದ ಜನಪ್ರಿಯ ಗಾಯಕ ಕಿಶೋರ್ ಕುಮಾರ್ ಅವರ ಮೇಲೆಯೂ ನಿಷೇಧ ಹೇರಲಾಯಿತು. ಅವರಿಗೆ ಎಲ್ಲಿಯೂ ಅವಕಾಶ ಕೊಟ್ಟಿರಲಿಲ್ಲ. ಇಂಥ ಪರಿಸ್ಥಿತಿ ಅಂದು ನಿರ್ಮಾಣವಾಗಿತ್ತು. ಇವೆಲ್ಲವುಗಳ ಪರಿಣಾಮ, ತುರ್ತುಪರಿಸ್ಥಿತಿ ಹಿಂತೆಗೆದುಕೊಂಡ ನಂತರ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್​ ಆದ ಸೋಲು. ಅಂತಿಮವಾಗಿ ನಮ್ಮ ಪ್ರಜಾಸತ್ತಾತ್ಮಕ ಮನಸ್ಥಿತಿಯೇ ಮೇಲುಗೈ ಸಾಧಿಸಿತು’ ಎಂದು ಹೇಳಿದರು.
ತುರ್ತು ಪರಿಸ್ಥಿತಿಯ ನಂತರವೂ ದೇಶದಲ್ಲಿ ಜನರು ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಕಳೆದುಕೊಳ್ಳಲಿಲ್ಲ. ದೇಶವು ಸ್ವಾತಂತ್ರ್ಯ ಗಳಿಸಿದ ಅಮೃತ ಮಹೋತ್ಸವ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯ ಸಂಕಷ್ಟಗಳನ್ನು ನಾವು ಮರೆಯಬಾರದು ಎಂದು ಮೋದಿ ಹೇಳಿದರು. ತುರ್ತು ಪರಿಸ್ಥಿತಿ ವಿರುದ್ಧ ನಡೆದ ಹೋರಾಟಗಳನ್ನು ನೆನಪಿಸಿಕೊಂಡರು.
ಇದೇ ಸಂದರ್ಭದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹಲವು ಸ್ಟಾರ್ಟ್​ಅಪ್​ಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಎಲ್ಲರ ಸಹಯೋಗದಿಂದ ಭಾರತವು ಬಾಹ್ಯಾಕಾಶ ಕ್ಷೇತ್ರದ ಮಹಾನ್ ಶಕ್ತಿಯಾಗಿ ಹೊರಹೊಮ್ಮಲಿದೆ. 2019ಕ್ಕೆ ಮೊದಲು ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ಟಾರ್ಟ್​ಅಪ್​ಗಳು ಹೆಚ್ಚಾಗಿ ಕಂಡು ಬರುತ್ತಿರಲಿಲ್ಲ. ಆದರೆ ಕಳೆದ ಮೂರು ವರ್ಷಗಳಲ್ಲಿ ದೇಶದ ಯುವಜನರು ಬಾಹ್ಯಾಕಾಶ ಕ್ಷೇತ್ರದ ಸಾಧ್ಯತೆಗಳ ಬಗ್ಗೆ ಆಸಕ್ತಿ ತೋರಿದ್ದು, ಹೊಸ ಆವಿಷ್ಕಾರಗಳನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಹೇಳಿದರು. ಅಜಾದಿ ಕಾ ಅಮೃತ ಮಹೋತ್ಸವ ವಿಶೇಷ ಕಾರ್ಯಕ್ರಮದ ಪ್ರಯುಕ್ತ ಹಲವು ವಿದ್ಯಾರ್ಥಿಗಳು ಸಣ್ಣಸಣ್ಣ ಉಪಗ್ರಹಗಳನ್ನು ರೂಪಿಸುತ್ತಿದ್ದಾರೆ. ಈ ವಿದ್ಯಾರ್ಥಿಗಳು ಸಣ್ಣ ಪಟ್ಟಣಗಳ ಮೂಲದವರು. ಭಾರತದ ಯುವಜನರು ಆಗಸ ಮುಟ್ಟಲು ತಯಾರಾಗಿದ್ದಾರೆ ಎಂದರು.
“ನಾನು ಜಿ7 ದೇಶಗಳು, ಜಿ7 ಪಾಲುದಾರ ರಾಷ್ಟ್ರಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಪರಿಸರ, ಶಕ್ತಿ, ಹವಾಮಾನ, ಆಹಾರ ಭದ್ರತೆ, ಆರೋಗ್ಯ, ಭಯೋತ್ಪಾದನೆ ನಿಗ್ರಹ, ಲಿಂಗ ಸಮಾನತೆ ಮತ್ತು ಪ್ರಜಾಪ್ರಭುತ್ವದಂತಹ ಸಾಮಾಜಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತೇನೆ. ಶೃಂಗಸಭೆಯಲ್ಲಿ ಭಾಗವಹಿಸುವ ಕೆಲವು ಜಿ7 ಮತ್ತು ಅತಿಥಿ ರಾಷ್ಟ್ರಗಳು ನಾಯಕರನ್ನು ಭೇಟಿ ಮಾಡಲು ಎದುರು ನೋಡುತ್ತಿದ್ದೇನೆ. ಜರ್ಮನ್ ಪ್ರೆಸಿಡೆನ್ಸಿಯ ಅಡಿಯಲ್ಲಿ ಜಿ7 ಶೃಂಗಸಭೆಗಾಗಿ ನಾನು ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಆಹ್ವಾನದ ಮೇರೆಗೆ ಜರ್ಮನಿಯ ಸ್ಕ್ಲೋಸ್ ಎಲ್ಮೌಗೆ ಭೇಟಿ ನೀಡಲಿದ್ದೇನೆ. ಕಳೆದ ತಿಂಗಳು ಸರ್ಕಾರಿ ಸಮಾಲೋಚನೆಗಳಲ್ಲಿ ಭೇಟಿಯಾದ ನಂತರ ಮತ್ತೊಮ್ಮೆ ಚಾನ್ಸೆಲರ್ ಸ್ಕೋಲ್ಜ್ ಅವರನ್ನು ಭೇಟಿಯಾಗಲು ಸಂತೋಷವಾಗುತ್ತದೆ” ಎಂದರು (ಜೂನ್ 26-27ರವರೆಗೆ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜರ್ಮನಿಗೆ ತೆರಳಿದ್ದು, ಅಲ್ಲಿ ಜಿ7 ಮತ್ತು ಅತಿಥಿ ರಾಷ್ಟ್ರಗಳೊಂದಿಗೆ ಸಭೆ ನಡೆಸಲಿದ್ದಾರೆ ಮತ್ತು ಸಮಕಾಲೀನ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.)
ಕ್ರೀಡಾ ಕ್ಷೇತ್ರದ ಕುರಿತೂ ಮಾತನಾಡಿದ ಪ್ರಧಾನಿ, ಜಾವಲಿನ್ ಎಸೆತದಲ್ಲಿ ಒಲಿಂಪಿಕ್ಸ್​ನಲ್ಲಿ ಉತ್ತಮ ಸಾಧನೆ ಮೆರೆದ ನೀರಜ್ ಛೋಪ್ರಾ ಇದೀಗ ಪಾವೊ ನುರ್​ಮಿ ಗೇಮ್ಸ್​ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಇತ್ತೀಚೆಗಷ್ಟೇ ನಿವೃತ್ತರಾದ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್, ಹಲವರಿಗೆ ಸ್ಫೂರ್ತಿಯ ಸೆಲೆಯಾಗಿದ್ದರು ಎಂದು ತಿಳಿಸಿದರು. ಕರೊನಾ ನಿರ್ವಹಣೆ ವಿಚಾರದಲ್ಲಿ ದೇಶದ ಉತ್ತಮ ಸಾಧನೆ ಮಾಡಿದೆ. ಆದರೆ ಈ ವಿಚಾರದಲ್ಲಿ ನಾವು ಎಚ್ಚರ ತಪ್ಪುವಂತಿಲ್ಲ. ಕೈಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವುದರೊಂದಿಗೆ ಬೂಸ್ಟರ್ ಡೋಸ್ ಪಡೆದುಕೊಳ್ಳಲು ಗಮನ ನೀಡಬೇಕು ಎಂದು ಮೋದಿ ಹೇಳಿದರು.
ಅಗ್ನಿಪಥ್​ v/s ಕಾಂಗ್ರೆಸ್​- ಎಲ್ಲಿದ್ದೆ ಇಲ್ಲೀ ತನಕ…ಈಗ್ಯಾಕೆ ಬಂದ್ಯಯ್ಯ: ವಿಂಗ್​ ಕಮಾಂಡರ್​ ಹೇಳಿದ್ದೇನು ನೋಡಿ…

ಮದ್ವೆಯಾಗಿ ಪತ್ನಿಯರನ್ನು ಮಾರಾಟ ಮಾಡುತ್ತಿದ್ದ ಭಯಾನಕ ಕ್ರಿಮಿನಲ್! 12 ಮಂದಿಗೆ ಮೋಸ ಮಾಡಿದ್ದವ ಕೊನೆಗೂ ಸಿಕ್ಕಿಬಿದ್ದ

ಗೌರಿಬಿದನೂರಿನ ಪೊಲೀಸರ ನಿದ್ದೆಗೆಡಿಸಿದ್ದ ‘ಖದೀಮರ’ ಮಟ್ಟ ಹಾಕಿದ ಬೆಕ್ಕು! ಅಧಿಕಾರಿಗಳು ಫುಲ್​ ಖುಷ್​…

VIDEO: ಹಲೋ… ನನಗೀಗ ಒಂದು ತಿಂಗಳು, ನನ್ನ ಪರಿಚಯ ಹೀಗಿದೆ… ಇನ್​ಸ್ಟಾಗ್ರಾಂನಲ್ಲಿ ಹೆಸರು ರಿವೀಲ್​ ಮಾಡಿದ ಸಂಜನಾ ಪುತ್ರ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
