ನವದೆಹಲಿ:ದೇಶದ ಸಮಸ್ಯೆಗಳು ಮಾತ್ರವಲ್ಲದೇ ಭಾರತದ ಪ್ರತಿ ರಾಜ್ಯದ, ಪ್ರತಿ ಊರುಗಳು, ಕೆಲವೊಮ್ಮೆ ಯಾರೂ ಗುರುತಿಸದ ವ್ಯಕ್ತಿಗಳ ಬಗ್ಗೆ ಶ್ಲಾಘನಾರ್ಹ ಮಾತುಗಳನ್ನಾಡಿ ಅವರನ್ನು ಹುರಿದುಂಬಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ‘ಮನ್‌ ಕೀ ಬಾತ್‌’ ಸರಣಿಗೆ ಇಲ್ಲಿಯವರೆಗೆ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ.
ಪ್ರತಿ ತಿಂಗಳೂ ಇವರ ಮನ್‌ ಕೀ ಬಾತ್‌ ಸರಣಿಯನ್ನು ಕೇಳಲು ಲಕ್ಷಾಂತರ ಮಂದಿ ಉತ್ಸುಕತೆಯಿಂದ ಕಾಯುತ್ತಿರುತ್ತಾರೆ. ವಿರೋಧ ಪಕ್ಷಗಳು ಟೀಕೆ ಮಾಡಲು ಕಾಯುತ್ತಿದ್ದರೆ, ಈ ಬಾರಿ ಪ್ರಧಾನಿಯವರು ಏನೋ ಒಂದು ಹೊಸ ವಿಷಯವನ್ನು ಹೇಳುತ್ತಾರೆ ಎಂದು ವಿದ್ಯಾರ್ಥಿಗಳಿಂದ ಹಿಡಿದು ಎಲ್ಲಾ ವರ್ಗದವರೂ ಈ ಸರಣಿಗಾಗಿ ಕಾಯುತ್ತಿರುತ್ತಾರೆ. ಇದೇ ಕಾರಣಕ್ಕೆ ಮನ್‌ ಕೀ ಬಾತ್‌ ಅತ್ಯದ್ಭುತ ಸರಣಿ ಎಂದು ವಿದೇಶಗಳಲ್ಲಿಯೂ ಮನೆಮಾತಾಗಿದೆ.
ಆದರೆ ನಿನ್ನೆ ನಡೆದ ಮನ್‌ ಕೀ ಬಾತ್‌ನ 58ನೇ ಸರಣಿಯ ಬಗ್ಗೆ ಮಾತ್ರ ಏಕೋ ಲಕ್ಷಾಂತರ ಮಂದಿ ಪ್ರಧಾನಿಯವರ ಮೇಲೆ ಮುನಿಸು ತೋರಿಸಿದ್ದಾರೆ. ಆಗಸ್ಟ್‌ ಸಂಚಿಕೆಯನ್ನು ನಿನ್ನೆ (ಆಗಸ್ಟ್‌ 30) ಭಾರತೀಯ ಜನತಾ ಪಾರ್ಟಿಯ ಅಧಿಕೃತ ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗಿತ್ತು. ಇದಕ್ಕೆ ಅತಿ ಹೆಚ್ಚು ಮಂದಿ ಡಿಸ್‌ಲೈಕ್‌ ಬಟನ್‌ ಒತ್ತುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಒಂದೇ ದಿನದಲ್ಲಿ 18 ಲಕ್ಷಕ್ಕೂ ಅಧಿಕ ಮಂದಿ ಯೂಟ್ಯೂಬ್‌ ವಿಡಿಯೋ ನೋಡುವ ಮೂಲಕ ಮನ್‌ ಕೀ ಬಾತ್‌ ಸರಣಿಗೆ ಇರುವ ಪ್ರಾಮುಖ್ಯವನ್ನು ತೋರಿಸಿದ್ದಾರೆ. ಆದರೆ ಕೇವಲ 75 ಸಾವಿರ ಮಂದಿ ಲೈಕ್‌ ಬಟನ್‌ ಒತ್ತಿದ್ದರೆ, ಐದು ಲಕ್ಷ ಮಂದಿ ಡಿಸ್‌ಲೈಕ್‌ ಬಟನ್‌ ಒತ್ತಿ ಪ್ರಧಾನಿ ಮೇಲೆ ಮುನಿಸು ತೋರಿಸಿದ್ದಾರೆ. ಸುಮಾರು 88 ಸಾವಿರ ಮಂದಿ ಈ ವಿಡಿಯೋಗೆ ಕಮೆಂಟ್‌ ಮಾಡಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಮೋದಿ ಮನ್​​ ಕೀ ಬಾತ್​​ನಲ್ಲಿ ‘ಚನ್ನಪಟ್ಟಣದ ಗೊಂಬೆ’
ಕೋಪಕ್ಕೆ ಕಾರಣವಿಷ್ಟೇ. ಈ ಬಾರಿಯ ಮನ್‌ ಕೀ ಬಾತ್‌ನಲ್ಲಿ ಮೋದಿಯವರು ದೇಶಿ ತಳಿಯ ನಾಯಿ, ಆಟಿಕೆ, ಚನ್ನಪಟ್ಟಣದ ಗೊಂಬೆ  ಇತ್ಯಾದಿಯ ಕುರಿತು ಮಾಹಿತಿ ನೀಡಿದ್ದರು. ದೇಶಿ ವಸ್ತುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯುವುದು ಹೇಗೆ ಎಂಬ ಬಗ್ಗೆ ವಿವರಿಸಿದ್ದರು. ಆದರೆ ದೇಶದ ಜ್ವಲಂತ ಸಮಸ್ಯೆಗಳು ನೂರೆಂಟು ಇರುವಾಗ ಈ ವಿಷಯಗಳನ್ನು ಮೋದಿಯವರು ಹೇಳಿಲ್ಲ ಎನ್ನುವುದು ಕಮೆಂಟಿಗರ ಆಕ್ರೋಶ. ದೇಶದಲ್ಲಿ ಕರೊನಾ ಹಾವಳಿ ಹೆಚ್ಚುತ್ತಿದೆ, ಅಂತಾರಾಷ್ಟ್ರೀಯ ಗಡಿ ಬಿಕ್ಕಟ್ಟು ಉಂಟಾಗಿದೆ, ಜಿಎಸ್‌ಟಿ, ಆರ್ಥಿಕ ಕುಸಿತ, ಉದ್ಯೋಗ ನಷ್ಟ ಮೊದಲಾದ ಸಾಲು ಸಾಲು ಸಮಸ್ಯೆಗಳು ಇರುವಾಗ ಪ್ರಧಾನಿಯವರು ಇದನ್ನು ಉಲ್ಲೇಖಿಸಿಲ್ಲ ಎನ್ನುವುದು ಈ ಪರಿಯ ಡಿಸ್‌ಲೈಕ್‌ಗೆ ಕಾರಣವಾಗಿದೆ.
ಮಾತ್ರವಲ್ಲದೇ, ನೀಟ್‌/ಜೀ ಪರೀಕ್ಷೆಗಳ ಕುರಿತಂತೆ ಗೊಂದಲಗಳಲ್ಲಿರುವ ವಿದ್ಯಾರ್ಥಿಗಳು ತಮ್ಮ ಗೊಂದಲಗಳಿಗೆ ಉತ್ತರವನ್ನು ನಿರೀಕ್ಷಿಸಿದ್ದರು. ಆದರೆ ಮೋದಿಯವರು ಈ ಬಗ್ಗೆ ಮಾತನಾಡಿಲ್ಲ ಎನ್ನುವ ಅಸಮಾಧಾನವೂ ಕಾರಣವಾಗಿದೆ. ಈ ಕುರಿತು ನಿನ್ನೆಯಷ್ಟೇ ರಾಹುಲ್‌ ಗಾಂಧಿ ವ್ಯಂಗ್ಯವಾಡಿದ್ದರು.
₹3.59 ಕೋಟಿಗೆ ಮಾರಾಟವಾಯ್ತು ಆರು ತಿಂಗಳ ಕುರಿಮರಿ!

ಆಂಟಿನೇ ಬೇಕೆಂದು ಐದು ಮದುವೆಯಾದವಳ 6ನೇ ಗಂಡನಾಗಿ ಹೋದ ಚಿಕ್ಕಮಗಳೂರು ಯುವಕ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine + 7 =
Remember me
