ಕಾಬುಲ್‌:ಅಪ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಅಟ್ಟಹಾಸ ಮೆರೆಯುತ್ತಿದ್ದು ನಾಲ್ಕು ತಿಂಗಳುಗಳೇ ಕಳೆದಿವೆ. ಭಾರತದಲ್ಲಿ ಆಗಸ್ಟ್‌ 15ರಂದು ಸ್ವಾತಂತ್ರ್ಯೋತ್ಸವದ ಸಂಭ್ರಮ, ಆದರೆ  ಅತ್ತ ಅಪ್ಘನ್‌ ಪ್ರಜೆಗಳು ತಮ್ಮ ಸಂಪೂರ್ಣ ಸ್ವಾತಂತ್ರ್ಯವನ್ನು ಕಳೆದುಕೊಂಡ ದಿನ. ತಾಲಿಬಾನಿಗಳು ಇಡೀ ಅಪ್ಘಾನಿಸ್ತಾನವನ್ನು ವಶಕ್ಕೆ ಪಡೆದು ಅಲ್ಲಿಯ ಜನರ ಬದುಕನ್ನು ಅಕ್ಷರಶಃ ನರಕ ಮಾಡಿದ ದಿನವದು.ವಿಶ್ವದ ಬಹುತೇಕ ದೇಶಗಳು ತಾಲಿಬಾನ್ ಆಡಳಿತಕ್ಕೆ ಮಾನ್ಯತೆ ನೀಡಲು ನಿರಾಕರಿಸಿದ್ದು, ಹಣಕಾಸಿನ ನೆರವನ್ನೂ ನಿಲ್ಲಿಸಿವೆ. ಪರಿಣಾಮ, ಅಫ್ಘಾನಿಸ್ತಾನ ಬೊಕ್ಕಸ ಖಾಲಿಯಾಗುತ್ತಿದ್ದು, ಜನರು ಆಹಾರಕ್ಕಾಗಿಯೂ ಪರದಾಡುವಂತಾಗಿದೆ. ಇವುಗಳ ನಡುವೆಯೂ, ತಾಲಿಬಾನಿಗಳು ದಿನಕ್ಕೊಂದು ನಿಯಮ, ದಿನಕ್ಕೊಂದು ಕಾನೂನು ಮಾಡುತ್ತಿದ್ದು, ಜನರ ಅದರಲ್ಲಿಯೂ ಮಹಿಳೆಯರ ಪಾಡಂತೂ ಹೇಳತೀರದು. ಇದಾಗಲೇ ಮಹಿಳೆಯರ ಮೇಲೆ ನಡೆದ ಅತ್ಯಾಚಾರ, ಅನಾಚಾರಕ್ಕೆ ಲೆಕ್ಕವೇ ಇಲ್ಲ.  ಜೀವಂತ ಹೆಣ್ಣುಮಕ್ಕಳ ಬದುಕನ್ನು ಛಿದ್ರ ಮಾಡಿದ್ದು ಸಾಲದು ಎಂಬಂತೆ ತಾಲಿಬಾನಿಗಳ ನೋಟವೀಗ ಬಟ್ಟೆ ಅಂಗಡಿಗಳ ಮುಂದೆ ಇಟ್ಟಿರುವ ಹೆಣ್ಣುಗೊಂಬೆಗಳತ್ತ ನೆಟ್ಟಿದೆ.ತಮ್ಮ ಅಂಗಡಿಗಳಲ್ಲಿ ಸಿಗುವ ಬಟ್ಟೆಗಳ ಡಿಸ್‌ಪ್ಲೇಗಳನ್ನು ಗೊಂಬೆಗಳಿಗೆ ಹಾಕಿ ಅವುಗಳನ್ನು ಅಂಗಡಿಗಳ ಮುಂದೆ ಇಡುವುದು ಮಾಮೂಲು. ಅದರಂತೆ ಅಪ್ಘಾನಿಸ್ತಾನದಲ್ಲಿಯೂ ಚೂಡಿದಾರ್‌, ಬುರ್ಖಾ, ಸೀರೆಗಳನ್ನು ಗೊಂಬೆಗಳಿಗೆ ಹಾಕಿ ಇಡಲಾಗುತ್ತಿತ್ತು. ಗ್ರಾಹಕರನ್ನು ಆಕರ್ಷಿಸಲು ಅಂಗಡಿ ಮಾಲೀಕರು ಹೀಗೆ ಮಾಡುತ್ತಾರೆ. ಆದರೆ ಆ ಗೊಂಬೆಗಳು ಹೆಣ್ಣು ಎನ್ನುವ ಕಾರಣಕ್ಕೆ ಅವುಗಳ ಶಿರಚ್ಛೇದನಕ್ಕೆ ಆದೇಶ ಹೊರಡಿಸಲಾಗಿದೆ.ಮಾನವ ಆಕೃತಿಗಳು ಅದರಲ್ಲೂ ಮಹಿಳೆಯರ ಮಾನವ ಆಕೃತಿಗಳು ಇಸ್ಲಾಂನಲ್ಲಿ ನಿಷೇಧ. ಆದ್ದರಿಂದ ಈ ಗೊಂಬೆಗಳು ಕೂಡ ಮಾನವ ಆಕೃತಿಯಲ್ಲಿ ಇರುವ ಕಾರಣ, ಅವುಗಳನ್ನು ಇಡುವಂತಿಲ್ಲ. ಆದ್ದರಿಂದ ಅವುಗಳ ತಲೆಗಳನ್ನು ಕತ್ತರಿಸಿ ಬೀಸಾಕಿ. ಇಲ್ಲದಿದ್ದರೆ ಅಂಥ ಅಂಗಡಿ ಮಾಲೀಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆದೇಶ ಹೊರಡಿಸಲಾಗಿದೆ. ತಾಲಿಬಾನಿಗಳ ಕಠಿಣ ಕ್ರಮ ಎಂದರೆ ಗೊತ್ತಲ್ಲ, ಹಿಂದು-ಮುಂದು ನೋಡದೇ ಗುಂಡು ಹಾರಿಸಿ ಹತ್ಯೆ ಮಾಡುವುದೊಂದೇ ಅವರಿಗೆ ಗೊತ್ತಿರುವ ಕಲೆ.ಆದ್ದರಿಂದ ಈಗ ಅಪ್ಘಾನಿಸ್ತಾನದ ಎಲ್ಲೆಡೆ ಪ್ಲಾಸ್ಟಿಕ್‌ ಗೊಂಬೆಗಳ ತಲೆಯನ್ನು ಕಚಕಚ ಕತ್ತರಿಸಿ ಹಾಕಲಾಗುತ್ತಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಇದು ಗೊಂಬೆಗಳೇ ಆಗಿದ್ದರೂ, ಕಚಕಚ ಕತ್ತರಿಸುವುದನ್ನು ನೋಡುವಾಗ ಮೈ ಝುಂ ಎನ್ನಿಸುವುದು ಸುಳ್ಳಲ್ಲ..ಅದರ ವಿಡಿಯೋ ಇಲ್ಲಿದೆ ನೋಡಿ:
The level of backwardness & barberism of#TalibanTerroristsis astonishing. If massacring of our people for past 25 years was not enough, Taliban 2.0 are now also beheading mannequins because they "offend#Islam."#DoNotRecogniseTalibanpic.twitter.com/4y2nCy5T6D@natiqmalikzada— 🇦🇫Afghanistan Fact Checks🔎 (@AfgFactChecks)January 3, 2022
The level of backwardness & barberism of#TalibanTerroristsis astonishing. If massacring of our people for past 25 years was not enough, Taliban 2.0 are now also beheading mannequins because they "offend#Islam."#DoNotRecogniseTalibanpic.twitter.com/4y2nCy5T6D@natiqmalikzada
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − 11 =
Remember me
