ಚೆನ್ನೈ:ಬೆಕ್ಕಿನ ಮರಿಗಳನ್ನು ಮಾರಾಟಕ್ಕಿಟ್ಟು ವ್ಯಕ್ತಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ! ಏಕೆಂದರೆ ಈತ ಬೆಕ್ಕನ್ನು ಹುಲಿಮರಿಯನ್ನಾಗಿ ಪರಿವರ್ತಿಸಿ ಅದನ್ನು ಮಾರಾಟಕ್ಕಿಟ್ಟಿದ್ದ!
ಬೆಕ್ಕಿಗೆ ಹುಲಿಮರಿಯ ಬಣ್ಣ ಬಳಿದು ಅದನ್ನು ಮಾರಾಟ ಮಾಡಲು ಹೋದ ಖತರ್ನಾಕ್​ ಐಡಿಯಾ ಮಾಡಿದವನು ತಮಿಳುನಾಡಿನ ತಿರುವಣ್ಣಾಮಲೈ ಗ್ರಾಮದ ಅರ್ನಿ ನಿವಾಸಿ ಪಾರ್ಥಿಬನ್ (24). ತನ್ನ ಬಳಿ ಇದ್ದ ಬೆಕ್ಕಿನ ಮರಿಗಳಿಗೆ ಬಣ್ಣ ಬಳಿದ ಈತ ಅದನ್ನು ಹುಲಿಮರಿಗಳಂತೆಯೇ ಕಾಣಿಸುವಂತೆ ಮಾಡಿದ್ದ.
ಮೂರು ತಿಂಗಳ ಮೂರು ಹುಲಿಮರಿಗಳು ಮಾರಾಟಕ್ಕಿವೆ ಎಂದು ಪಾರ್ಥಿಬನ್ ವಾಟ್ಸ್​ಆ್ಯಪ್​ನಲ್ಲಿ ಸ್ಟೇಟಸ್ ಹಾಕಿದ್ದ. ಅದನ್ನು ಪಕ್ಕದ ಆಂಧ್ರಪ್ರದೇಶಕ್ಕೆ ಮಾರಲು ಯತ್ನಿಸುತ್ತಿದ್ದ. ಪ್ರತಿ ಮರಿಗೆ 25 ಲಕ್ಷ ರೂಪಾಯಿ ಬೆಲೆ ನಿಗದಿ ಮಾಡಿದ್ದ. ಹುಲಿಮರಿಗಳು ಬೇಕೆಂದರೆ ತನಗೆ ಸಂಪರ್ಕಿಸುವಂತೆ ಆತ ಅದರಲ್ಲಿ ಹೇಳಿದ್ದ. ಖುದ್ದಾಗಿ ಬಂದು ಹುಲಿಮರಿಗಳನ್ನು ಖರೀದಿಸುವವರ ಮನೆಗೆ ತಲುಪಿಸುವುದಾಗಿ ತಿಳಿಸಿದ್ದ. ಸ್ಟೀಲ್​ಬೌಲ್​ನಲ್ಲಿ ಹುಲಿ ಮರಿಗಳಿಗೆ ಆಹಾರ ನೀಡುತ್ತಿರುವ ಚಿತ್ರವನ್ನೂ ಹಾಕಿದ್ದ.
ಹುಲಿಮರಿಗಳನ್ನು ಮಾರಾಟ ಮಾಡುವುದು ಕಾನೂನುಬಾಹಿರವಾಗಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈತನ ಮೇಲೆ ಕಣ್ಣು ಇಟ್ಟಿತ್ತು. ಇದು ತಿಳಿಯುತ್ತಲೇ ಪಾರ್ಥಿಬನ್ ತಲೆಮರೆಸಿಕೊಂಡಿದ್ದ. ನಂತರ ಅರಣ್ಯಾಧಿಕಾರಿಗಳು ಇವರ ಮನೆಯಲ್ಲಿ ಹುಡುಕಾಟ ನಡೆಸಿದ್ದರೂ ಹುಲಿ ಮರಿಗಳು ಮಾತ್ರ ಸಿಗಲಿಲ್ಲ. ನಂತರ ಸ್ಥಳೀಯ ಪೊಲೀಸರ ನೆರವಿನಿಂದ ಆತನನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ.
ಇದೇ ವ್ಯಕ್ತಿ ಈ ಹಿಂದೆ ನಕ್ಷತ್ರ ಆಮೆಗಳನ್ನು ಅಕ್ರಮವಾಗಿ ಮಾರಾಟ ಮಾಡಿರುವುದೂ ತಿಳಿದಿದೆ. ಸದ್ಯ ಈತ ಪೊಲೀಸರ ಅತಿಥಿ. (ಏಜೆನ್ಸೀಸ್​)
ನೀಚಂಗೆ ದೊರೆತನವು, ಹೇಡಿಂಗೆ ಹಿರಿತನವೂ… ಮಂಡ್ಯದಲ್ಲಿ ಕೋಡಿಶ್ರೀ ಭಯಾನಕ ಭವಿಷ್ಯ…

ಆತ್ಮಹತ್ಯೆಗೆ ಮುಂದಾದ ಯುವಕನ ಕಾಪಾಡಿದ ಫೇಸ್​ಬುಕ್​! ಉತ್ತರ ಪ್ರದೇಶ ಸರ್ಕಾರದ ಚಮತ್ಕಾರ…

ಕನ್ನಡದಲ್ಲಿ ಬರೆದ ಚೆಕ್​ ಅಮಾನ್ಯ: ಎಸ್​ಬಿಐಗೆ ಧಾರವಾಡದ ಗ್ರಾಹಕರ ಕೋರ್ಟ್​ನಿಂದ ದಂಡ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 + eight =
Remember me
