ಪ್ರತಾಪಗಢ (ಉತ್ತರ ಪ್ರದೇಶ):ಹುಟ್ಟುಹಬ್ಬ ಸೇರಿದಂತೆ ಕೆಲವು ಶುಭ ಕಾರ್ಯಕ್ರಮಗಳಲ್ಲಿ ಈಗ ಹೊಸದೊಂದು ಟ್ರೆಂಡ್‌ ಶುರುವಾಗಿದೆ. ಅದೇನೆಂದರೆ ಖುಷಿಯನ್ನು ಹಂಚಿಕೊಳ್ಳಲು ಗಾಳಿಯಲ್ಲಿ ಗುಂಡುಹಾರಿಸುವುದು. ರಾಜಕಾರಣಿಗಳ ಮಕ್ಕಳು, ಕೆಲವು ಸೆಲೆಬ್ರಿಟಿಗಳು ಸೇರಿದಂತೆ ದುಡ್ಡು ಹೆಚ್ಚಿದ್ದವರೆಲ್ಲರೂ ಮೋಜಿಗಾಗಿ ಮಾಡುವ ಟ್ರೆಂಡ್ ಇದಾಗಿದೆ.
ಇದೇ ರೀತಿ ಇಲ್ಲೊಬ್ಬ ಮದುಮಗಳು ಮದುಮಗ ಕೊರಳಿಗೆ ಹಾರ ಹಾಕುತ್ತಿದ್ದಂತೆಯೇ ಖುಷಿಯಿಂದ ಕೈಯನ್ನು ಮೇಲಕ್ಕೆತ್ತಿ ಗುಂಡು ಹಾರಿಸಿದ್ದಾಳೆ. ಇಂಥದ್ದೊಂದು ವಿಚಿತ್ರ ಘಟನೆ ನಡೆದಿರುವುದು ಉತ್ತರ ಪ್ರದೇಶದ ಪ್ರತಾಪಗಢದಲ್ಲಿ.
ರೂಪಾ ಎಂಬಾಕೆಯ ಮದುವೆ ನಡೆಯುತ್ತಿತ್ತು. ಅವಳು ಮೊದಲೇ ಈ ರೀತಿ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದಳು. ತನ್ನ ಮದುವೆಯನ್ನು ಭಿನ್ನವಾಗಿ ಆಚರಿಸಬೇಕು ಎಂದುಕೊಂಡಿದ್ದ ಇವಳು ಮದುವೆಯ ವೇಳೆ ಗುಂಡು ಹಾರಿಸಿದ್ದಾಳೆ. ಅಷ್ಟರಲ್ಲಿ ಅಲ್ಲಿ ಹರ್ಷೋದ್ಗಾರ ಕೇಳಿಬಂದಿದೆ. ಇದರ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.
सोशल मीडिया पर 30 मई का वीडियो वायरल है. प्रतापगढ़ के जेठवारा थाना क्षेत्र के लक्ष्मण का पुरवा में दुल्हन ने स्टेज पर चढ़ने के पहले अपने चाचा की लाइसेंसी रिवॉल्वर से हर्ष फायर किया. पुलिस ने नई दुल्हन रूपा पांडेय और चाचा रामनिवास पांडेय के खिलाफ मामला दर्ज कर जांच शुरू कर दी है.pic.twitter.com/lWYkL7vlVK
— The Lallantop (@TheLallantop)June 1, 2021

ಈ ವೈರಲ್‌ ವಿಡಿಯೋ ನೋಡಿದ ಜನರು ರೊಚ್ಚಿಗೆದ್ದಿದ್ದು, ಈ ಸಂಬಂಧ ಮದುಮಗಳ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಮದುವೆಯಾಗಿ ಮುಂದಿನ ಕಾರ್ಯಕ್ಕೆ ಸಜ್ಜಾಗಿದ್ದ ಮದುಮಗಳ ಮನೆಯ ಬಾಗಿಲಿಗೆ ಪೊಲೀಸರು ಹೋಗಿದ್ದು, ಆಕೆಯನ್ನು ವಿಚಾರಣೆ ಮಾಡಿದ್ದಾರೆ. ತನ್ನ ಸಂಬಂಧಿ ರಾಮವಾಸ್ ಪಾಂಡೆ ಎಂಬುವವರ ಪರವಾನಗಿ ಪಡೆದ ಬಂದೂಕಿನಿಂದ ಗುಂಡನ್ನು ಹಾರಿಸಿದ್ದು, ಇದು ಕೇವಲ ಸಂತೋಷಕ್ಕಾಗಿ ಎಂದಿದ್ದಾಳೆ ಆಕೆ.
ಆದರೆ ನಿಯಮದ ಪ್ರಕಾರ ಈ ರೀತಿ ಮಾಡುವುದು ಕಾನೂನುಬಾಹಿರ ಎಂದಿರುವ ಪೊಲೀಸರು ರೂಪಾ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಮದುವೆಯ ಖುಷಿಯಲ್ಲಿ ತೇಲಾಡುತ್ತಿದ್ದ ದಂಪತಿ ಈಗ ಪೊಲೀಸ್‌ ಠಾಣೆ ಅಲೆಯುವಂತಾಗಿದೆ.
ಲೈಂಗಿಕ ತೃಷೆ ತೀರಿಸಿಕೊಳ್ಳಲು ವಿದ್ಯಾರ್ಥಿನಿಯರ ಬಳಕೆ! ಜೈಲು ಸೇರಿದ ಶಿಕ್ಷಕಿಯ ದುರಂತ ಅಂತ್ಯ

ನನ್ನ ಪತಿ ಬೇರೆಯವರಿಗೆ ದೇವರು, ನನಗೆ ಮಾತ್ರ ರಾಕ್ಷಸ! ಪ್ಲೀಸ್‌ ಸಲಹೆ ನೀಡಿ ಮುಕ್ತಿ ಕೊಡಿಸಿ

ಜನಸಂಖ್ಯೆಯಲ್ಲಿ ಟಾಪ್‌ 1ನಲ್ಲಿರೋ ಚೀನಾದಲ್ಲಿ ಇನ್ಮುಂದೆ ಒಂದಲ್ಲ, ಎರಡಲ್ಲ…. ಮೂರು ಮಕ್ಕಳಾಗ್ಬೋದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + eighteen =
Remember me
