ಕೊಟ್ವಾಲಿ (ರಾಜಸ್ಥಾನ):ಕರೊನಾ ಎರಡನೆಯ ಅಲೆಯ ಹಿನ್ನೆಲೆಯಲ್ಲಿ ಲಾಕ್‌ಡೌನ್‌, ಕರ್ಫ್ಯೂ ಎಲ್ಲವೂ ಬಹುತೇಕ ಎಲ್ಲಾ ರಾಜ್ಯಗಳಲ್ಲಿಯೂ ಘೋಷಿಸಿಯಾಗಿದೆ. ಮದುವೆ ಸೇರಿದಂತೆ ಹಲವಾರು ಸಮಾರಂಭಗಳಿಗೆ ಷರತ್ತು ವಿಧಿಸಲಾಗಿದೆ. ಒಂದೆಡೆ ಅದ್ಧೂರಿ ಮದುವೆಯಾಗಲು ಸಾಧ್ಯವಿಲ್ಲ ಎಂದು ಹಲವು ಕುಟುಂಬಗಳು ಚಿಂತಿತರಾಗಿರುವ ನಡುವೆಯೇ, ತನ್ನದೇ ಮದುವೆಗೆ ರಜೆ ಸಿಗದ ಕಾರಣ, ಕಾನ್ಸ್‌ಟೆಬಲ್‌ ಒಬ್ಬರು ಪೊಲೀಸ್‌ ಠಾಣೆ ಎದುರೇ ಅರಿಶಿಣ (ಹಲ್ದಿ) ಕಾರ್ಯಕ್ರಮ ನೆರವೇರಿಸಿಕೊಂಡ ನೋವಿನ ಘಟನೆ ರಾಜಸ್ಥಾನದ ಡುಂಗರಪುರ ಕೊಟ್ವಾಲಿಯಲ್ಲಿ ನಡೆದಿದೆ.
ಇಲ್ಲಿ ಮದುಮಗಳಾಗಿರುವವರ ಹೆಸರು ಆಶಾ. ಇವರು ಕೊಟ್ವಾಲಿ ಪೊಲೀಸ್‌ ಠಾಣೆಯಲ್ಲಿ ಕಾನ್ಸ್‌ಟೆಬಲ್‌ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ರಾಜಸ್ಥಾನದಲ್ಲಿ ಕೂಡ ಕರೊನಾ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪೊಲೀಸರಿಗೆ ರಜೆ ಸಿಗುತ್ತಿಲ್ಲ. ಲಾಕ್‌ಡೌನ್‌, ಕರ್ಫ್ಯೂ ಹಿನ್ನೆಲೆಯಲ್ಲಿ ಕರೊನಾ ವಾರಿಯರ್ಸ್‌ ಆಗಿರುವ ಪೊಲೀಸರ ಕರ್ತವ್ಯ ಹೆಚ್ಚಿರುವ ಕಾರಣ ರಜೆ ಸಿಗುತ್ತಿಲ್ಲ.
ಕಳೆದ ವರ್ಷವೇ ಆಶಾ ಅವರ ಮದುವೆ ನಿಶ್ಚಯವಾಗಿತ್ತು. ಆದರೆ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಇದ್ದ ಹಿನ್ನೆಲೆಯಲ್ಲಿ ಅದನ್ನು ಮಾಡಲು ಆಗಿರಲಿಲ್ಲ. ನಂತರ ಅವರಿಗೆ ಮುಹೂರ್ತ ಸಿಕ್ಕಿದ್ದು ಈ ವರ್ಷದ ಏಪ್ರಿಲ್‌ 30ರಂದು. ಮದುವೆಯ ಹಿಂದಿನ ಶಾಸ್ತ್ರವಾದ ಹಲ್ದಿ ಕಾರ್ಯಕ್ರಮಕ್ಕೆ ಏಪ್ರಿಲ್‌ 23 ಮುಹೂರ್ತ ನಿಗದಿಯಾಗಿತ್ತು.

ಆದರೆ ದುರದೃಷ್ಟ ಎಂದರೆ, ಈಗ ಎರಡನೆಯ ಅಲೆಯಿಂದಾಗಿ ಮತ್ತೆ ಲಾಕ್‌ಡೌನ್‌, ಕರ್ಫ್ಯೂ ಘೋಷಣೆಯಾಗಿದೆ. ಈ ಬಾರಿ ಮತ್ತೆ ಮದುವೆ ಮುಂದೂಡಲು ಇಷ್ಟವಿಲ್ಲದ ಆಶಾ ಮನೆಯವರು ಮದುವೆಗೆ ಮುಂದಾಗಿದ್ದಾರೆ. ಆದರೆ ಹಲ್ದಿ ಕಾರ್ಯಕ್ರಮಕ್ಕೇ ಅವರಿಗೆ ರಜೆ ಸಿಗಲಿಲ್ಲ. ಆದ್ದರಿಂದ ಪೊಲೀಸ್‌ ಇಲಾಖೆ ಸಿಬ್ಬಂದಿ ಸೇರಿದಂತೆ ಕುಟುಂಬಸ್ಥರು ಠಾಣೆಯ ಎದುರೇ ಈ ಕಾರ್ಯಕ್ರಮ ನೆರವೇರಿಸಿದ್ದಾರೆ. ಠಾಣೆಯ ಸಿಬ್ಬಂದಿ ಹೃದಯಸ್ಪರ್ಶಿಯಾಗಿ ಈಕೆಯ ಹಲ್ದಿ ಕಾರ್ಯಕ್ರಮ ನೆರವೇರಿಸಿದ್ದಾರೆ.
ಈ ಘಟನೆಯ ನಂತರ ಆಶಾ ಅವರಿಗೆ ಮದುವೆಗೆ ರಜೆ ಸಿಕ್ಕಿದ್ದು, ಎಲ್ಲರೂ ಸಂತಸದಿಂದ ಇದ್ದಾರೆ.
ನಾನು ಆಫೀಸ್‌ಗೆ ಹೋಗ್ತಿದ್ದಂತೆಯೇ ಅವಳೂ ಎಂಗೇಜು, ನನ್ನ ಗಂಡನೂ ಬಿಜಿ… ಸಂಸಾರ ಹೇಗೆ ಸರಿಪಡಿಸಲಿ?

ಮೊದಲ ರಾತ್ರಿ ರಕ್ತ ಕಾಣಿಸಿಲ್ಲ ಎಂದು ಡಿವೋರ್ಸ್​ ನೀಡಿದ ಪತಿ ಮಹಾಶಯ ₹10 ಲಕ್ಷ ಬೇಡಿಕೆ ಇಟ್ಟ!

ಅವಳ ಜತೆ ಮೊದಲು ಸಿಕ್ತಿದ್ದ ಸುಖ ಈಗ ಸಿಕ್ತಿಲ್ಲ, ಅವಳೂ ಇಂಟರೆಸ್ಟ್‌ ತೋರಿಸ್ತಿಲ್ಲ… ಮದುವೆ ಮುರಿದುಬಿಡಲೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
