ಜಲೋರ್​ (ರಾಜಸ್ಥಾನ):ಯಾವುದೋ ಹುಡುಗಿಯ ಫೋಟೋ ತೋರಿಸಿ ಇನ್ನಾವುದೋ ಹುಡುಗಿಯ ಜತೆ ಯುವಕನ ಮದುವೆ ಮಾಡಿಸಿ ಮೋಸ ಮಾಡಿರುವ ಘಟನೆಯೊಂದು ರಾಜಸ್ಥಾನದ ಜಲೋರ್​ನಲ್ಲಿ ನಡೆದಿದ್ದು, ಇದೀಗ ಈ ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿ, ಇದೀಗ ಮೋಸಗಾರರು ಜೈಲು ಸೇರುವಂತಾಗಿದೆ.
ರಾಜಸ್ಥಾನದ ಜಲೋರ್ ಜಿಲ್ಲೆಯ ಸರವಣ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗೂಂಗಟ್​ನಲ್ಲಿ ಮದುವೆಯಾದ ಕಾರಣ, ವಧುವಿನ ಮುಖ ಮದುವೆಯ ವೇಳೆ ವರನ ಕಡೆಯವರು ನೋಡಿಯೇ ಇರಲಿಲ್ಲ. ಮದುವೆ ಮುಗಿದ ಮರುದಿನ ವಾಸ್ತವಾಂಶ ತಿಳಿದು ತಾವು ಮೋಸ ಹೋಗಿರುವುದು ವರನ ಕುಟುಂಬದವರಿಗೆ ತಿಳಿದಿದೆ. ಫೋಟೋದಲ್ಲಿ ಇರುವ ಸುಂದರ ಹುಡುಗಿಯ ಜತೆ ತಮ್ಮ ಮಗನ ಮದುವೆ ನಡೆಯುವುದು ಎಂದು ಐದು ಲಕ್ಷ ರೂಪಾಯಿ ವಧುದಕ್ಷಿಣೆ, ಚಿನ್ನಾಭರಣ ಎಲ್ಲಾ ನೀಡಿ ಮೋಸ ಹೋಗಿರುವ ವರನ ಕಡೆಯವರು ಈಗ ಕೇಸ್​ ದಾಖಲಿಸಿದ್ದಾರೆ. ಒಮ್ಮೆ ಮದುವೆಯಾಗಿ ಬಿಟ್ಟರೆ ಸರಿಯಾಗುತ್ತೆ ಎಂದು ಮೋಸ ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ ಗುಜರಾತ್​ನ ಕುಟುಂಬಸ್ಥರು.
ಆಗಿದ್ದೇನು?ಸೋಹನ್ ಸಿಂಗ್ ಎಂಬ ಯುವಕ ಮದುವೆಗಾಗಿ ಹುಡುಕಾಟ ನಡೆಸಿದ್ದ. ಈ ಸಮಯದಲ್ಲಿ ಮುರಾದ್ ಖಾನ್ ಎಂಬಾತ, ಗುಜರಾತಿನ ಗಣಪತ್​ ಸಿಂಗ್​ ಎಂಬುವವರ ಸಂಬಂಧಿಕರ ಹುಡುಗಿಯೊಬ್ಬಳು ಮದುವೆಗೆ ಇರುವುದಾಗಿ ಹೇಳಿದ್ದ. ಅದರಂತೆ ಸೋಹನ್​ ಸಿಂಗ್​ ಮತ್ತು ಕುಟುಂಬದವರು ಗಣಪತ್​ ಸಿಂಗ್​ ಮನೆಗೆ ಹೋಗಿದ್ದರು. ಅಲ್ಲಿ ಗಣಪತ್​ ಸಿಂಗ್​ 20 ವರ್ಷದ ಸುಂದರ ಯುವತಿಯ ಫೋಟೋ ತೋರಿಸಿದ್ದ. ಈಕೆ ತುಂಬಾ ಸುಂದರವಾಗಿದ್ದರಿಂದ ಸೋಹನ್​ ಸಿಂಗ್​ ಹಾಗೂ ಕುಟುಂಬದವರು ಮದುವೆಗೆ ಒಪ್ಪಿಕೊಂಡರು. ಈಕೆಯನ್ನು ಮದುವೆಯಾಗಬೇಕು ಎಂದರೆ ಐದು ಲಕ್ಷ ರೂಪಾಯಿ ವಧು ದಕ್ಷಿಣೆ ಕೊಡಬೇಕು ಎಂದು ಸಿಂಗ್ ಹೇಳಿದ್ದರಿಂದ ಅದನ್ನೂ ಒಪ್ಪಿಕೊಂಡಿದ್ದರು ಸೋಹನ್​ ಸಿಂಗ್​ ಮತ್ತು ಕುಟುಂಬದವರು. ಮೊದಲ ಕಂತಿನಲ್ಲಿ ಎರಡು ಲಕ್ಷ ರೂಪಾಯಿಯನ್ನೂ ನೀಡಿಯಾಗಿತ್ತು.
ನಂತರ ಮದುವೆಯನ್ನು ನಿಶ್ಚಯ ಮಾಡಲಾಗಿತ್ತು. ಗಣಪತ್​ ಸಿಂಗ್​ ಮನೆಯಲ್ಲಿ ಯಾರೋ ಮೃತಪಟ್ಟಿದ್ದು, ಮದುವೆಗೆ ಬರಲು ಸಾಧ್ಯವಿಲ್ಲ ಎಂದು ಹೇಳಿ ಕೆಲವು ಜನರನ್ನು ಮದುವೆಯ ದಿನ ಕಳಿಸಿಕೊಟ್ಟಿದ್ದ. ಮದುಮಗಳೂ ಗೂಂಗಟ್​ನಲ್ಲಿ​ (ಪರದೆ) ಇದ್ದಳು. ಇಡೀ ಮದುವೆಯ ಸಮಯದಲ್ಲಿ ಅಲ್ಲಿಯ ಪದ್ಧತಿಯಂತೆ ಮದುಮಗಳು ಗೂಂಗಟ್​ನಲ್ಲಿಯೇ ಇದ್ದುದರಿಂದ ಯಾರೂ ಮದುಮಗಳ ಮುಖ ನೋಡಲೇ ಇಲ್ಲ. ರಾತ್ರಿಯ ಮುಹೂರ್ತ ಇದೆ ಎಂದು ಬೇರೆ ಹೇಳಿದ್ದರಿಂದ ಅಲ್ಲಿ ಮದುಮಗಳ ಮುಖ ಕೂಡ ಸರಿಯಾಗಿ ಯಾರಿಗೂ ಕಾಣಿಸಲಿಲ್ಲ.
ರಾತ್ರಿ ಮದುವೆ ಮುಗಿಸಿ, ಬೆಳಗಿನ ಜಾವ ಮದುಮಕ್ಕಳ ಫೋಟೋಗಾಗಿ ಸಿದ್ಧತೆ ನಡೆದಿತ್ತು. ಆಗಲೇ ಗೊತ್ತಾದದ್ದು ಮದುಮಗಳ ಅಸಲಿಯತ್ತು! ಸೋಹನ್​ ಸಿಂಗ್​ ಮತ್ತು ಕುಟುಂಬಸ್ಥರು ಈ ಮದುಮಗಳ ಮುಖ ನೋಡಿ ಹೌಹಾರಿ ಹೋದರು. ತಮಗೆ ಕಳಿಸಿರುವ ಫೋಟೋ ಮತ್ತೊಮ್ಮೆ ನೋಡಿದಾಗ ತಾವು ಮೋಸ ಹೋಗಿರುವುದು ತಿಳಿದಿದೆ. ಈ ಮದುಮಗಳನ್ನು ವಿಚಾರಿಸಿದಾಗ ಆಕೆ ತನಗೆ ಏನೂ ಗೊತ್ತಿಲ್ಲ. ಈ ಮದುವೆಯಾಗಲು ಐದು ಸಾವಿರ ರೂಪಾಯಿ ಕೊಟ್ಟರು. ಆದ್ದರಿಂದ ಮದುವೆಯಾದೆ ಎಂದಿದ್ದಾಳೆ.
ಇದರಿಂದ ರೊಚ್ಚಿಗೆದ್ದ ಮದುಮಗನ ಕುಟುಂಬಸ್ಥರು ವಧು ಸೇರಿದಂತೆ ಎಲ್ಲರ ವಿರುದ್ಧ ವಂಚನೆ ಕೇಸ್​ ದಾಖಲಿಸಿದ್ದು, ಪೊಲೀಸರು ಎಲ್ಲರನ್ನೂ ಜೈಲುಗಟ್ಟಿದ್ದಾರೆ, ತನಿಖೆ ನಡೆಯುತ್ತಿದೆ.
ಶಾಪವಾದ ಮದುವೆ, ಅತ್ತೆ-ಗಂಡನ ಕಿರುಕುಳವೇ ನನಗೆ ಸ್ಫೂರ್ತಿ: ಯುಪಿಎಸ್​ಸಿ ಗೆದ್ದಾಕೆಯ ಮನದ ಮಾತು
ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ: ಇಂದಿನ ದರ ಎಷ್ಟಿದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 6 =
Remember me
