ಗಾಂಧಿನಗರ (ಗುಜರಾತ್):ತಾನು ಪ್ರೀತಿಸಿದ ಹುಡುಗಿ ಕೈಕೊಟ್ಟಳು ಎನ್ನುವ ಕಾರಣಕ್ಕೆ ಸಿಟ್ಟುಗೊಂಡ ಭಗ್ನಪ್ರೇಮಿಯೊಬ್ಬ ಆಕೆಯ ತಂಗಿಯ ಮೇಲೆ ಸೇಡು ತೀರಿಸಿಕೊಂಡಿದ್ದಾನೆ! ತಂಗಿಯ ಮದುವೆಗೆ ಸ್ಫೋಟಕ ಉಡುಗೊರೆ ನೀಡಿರುವ ಮೂಲಕ ನೂತನ ವಧು-ವರರು ಆಸ್ಪತ್ರೆ ಸೇರುವಂತೆ ಮಾಡಿದ್ದಾನೆ.
ದಕ್ಷಿಣ ಗುಜರಾತ್‌ನ ನವಸಾರಿ ಜಿಲ್ಲೆಯ ಮಿಂಧಬರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲತೀಶ್​ ಗವೀತ್​ ಹಾಗೂ ಸಲ್ಮಾ ಎನ್ನುವವರ ಮದುವೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಸಲ್ಮಾಳ ಅಕ್ಕನ ಮಾಜಿ ಪ್ರೇಮಿ ರಾಜು ಪಟೇಲ್​ ಎಂಬಾತ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಮದುವೆಗೆ ಬಂದಿದ್ದ ಈತ ಒಂದು ಗಿಫ್ಟ್​ ಕೊಟ್ಟು ಹೋಗಿದ್ದ. ಮದುವೆಯ ನಂತರ ಎಲ್ಲಾ ಗಿಫ್ಟ್​ಗಳನ್ನು ವಧು-ವರರು ಮತ್ತು ಕುಟುಂಬಸ್ಥರು ತೆರೆಯುತ್ತಿದ್ದರು. ರಾಜು ಕೊಟ್ಟ ಗಿಫ್ಟ್​ ಅನ್ನು ಮದುಮಗ ತೆರೆಯುತ್ತಿದ್ದ. ಅದರಲ್ಲಿ ರೀಚಾರ್ಜ್​ ರೀತಿಯ ಒಂದು ವಸ್ತು ಕಾಣಿಸಿತು. ಅದನ್ನು ಪರಿಶೀಲನೆ ಮಾಡುತ್ತಿದ್ದಾಗಲೇ ಅದು ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ವರನ ಕಣ್ಣಿಗೆ ಭಾರಿ ಹಾನಿಯಾಗಿದೆ, ಮಾತ್ರವಲ್ಲದೇ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಮದುಮಗಳು ಸಲ್ಮಾ ಕೂಡ ಆತನ ಪಕ್ಕದಲ್ಲಿಯೇ ಇದ್ದಳು. ಆಕೆ ಸೇರಿದಂತೆ ಅಲ್ಲಿದ್ದ ಸಂಬಂಧಿಕರಿಗೂ ಗಾಯಗಳಾಗಿವೆ. ಎಲ್ಲರನ್ನೂ ಈಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪೈಕಿ ವರ ಲತೀಶ್​ ಗವೀತ್​ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಪೊಲೀಸರಲ್ಲಿ ಈ ಕುರಿತು ದೂರು ದಾಖಲು ಮಾಡಲಾಗಿತ್ತು. ಪೊಲೀಸರು ತನಿಖೆ ಕೈಗೊಂಡಾಗ ಈ ಉಡುಗೊರೆ ರಾಜು ನೀಡಿರುವುದು ಬೆಳಕಿಗೆ ಬಂದಿದೆ. ತನಿಖೆ ನಡೆಸಿದಾಗ ಆತ ವಧುವಿನ ಅಕ್ಕನ ಮಾಜಿ ಬಾಯ್​ ಫ್ರೆಂಡ್​ ಎನ್ನುವುದು ತಿಳಿದುಬಂದಿದೆ. ಯಾರದ್ದೋ ಸಂಬಂಧಕ್ಕೆ ಇನ್ನಾರೋ ಆಸ್ಪತ್ರೆ ಸೇರುವಂತಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
15 ಮಂದಿ ಅಕೌಂಟ್‌ಗೆ ಎಸ್‌ಬಿಐನಿಂದ 1.5 ಕೋಟಿ ರೂ: ಮೋದಿ ಕೊಟ್ಟರೆಂದು ಕುಣಿದಾಡಿದ ಗ್ರಾಹಕರು- ಆಗಿದ್ದೇನು?

ಬಾಲಿವುಡ್​ ಬೆಡಗಿಯರ ಬುಟ್ಟಿಗೆ ಬೀಳಿಸಿ ಕಂಬಿ ಎಣಿಸ್ತಿರೋ ಈತನಿಗೆ ನೆನಪಾಗ್ತಿದ್ದಾಳಂತೆ ಪತ್ನಿ! ಜೈಲಲ್ಲೇ ಉಪವಾಸ

ಮೈಸೂರಿನ ನಾಟಿ ವೈದ್ಯನ ಬರ್ಬರ ಕೊಲೆ ರಹಸ್ಯ ಬಯಲು! ದರೋಡೆ ಕೇಸ್ ದಾಖಲಿಸಲು ಬಂದು ಸಿಕ್ಕಿಬಿದ್ದ ಕೊಲೆಗಾರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen − eleven =
Remember me
