ಕೀವ್‌:ಯೂಕ್ರೇನ್​ ಮೇಲೆ ರಷ್ಯಾ ದಾಳಿ ಮಾಡಿದ ನಂತರ ಅಲ್ಲಿಯ ಪ್ರಜೆಗಳು ಅಕ್ಷರಶಃ ನಲುಗಿಹೋಗಿದ್ದಾರೆ. ಯಾವಾಗ ಬಾಂಬ್​ ಯಾರ ಮೇಲೆ ಬೀಳುವುದೋ ಎಂದು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಯೂಕ್ರೇನ್​ ನಿವಾಸಿಗಳು ಇದ್ದರೆ ಅದೇ ಇನ್ನೊಂದೆಡೆ ಈ ಬಾಂಬ್​ ದಾಳಿಯ ಭೀತಿಯ ನಡುವೆಯೇ ಜೋಡಿಯೊಂದು ಮದುವೆಯಾಗಿರುವ ಘಟನೆ ನಡೆದಿದೆ.
ಉಕ್ರೇನ್‌ ರಾಜಧಾನಿ ಕೀವ್‌ನ ಕಲ್ಯಾಣ ಮಂಟಪದಲ್ಲಿ ಯುದ್ಧದ ಭೀತಿಯ ಜತೆಗೇ ಜೋಡಿ ಮದುವೆಯಾಗಿದ್ದು, ಇವರೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈರಲ್​ ಆಗಿದ್ದಾರೆ. ಕೀವ್‌ ಸಿಟಿ ಕೌನ್ಸಿಲ್‌ನ ಡೆಪ್ಯೂಟಿ ಆಗಿರುವ 21 ವರ್ಷದ ಅರಿವಾ, ಸಾಫ್ಟ್‌ವೇರ್‌ ಇಂಜಿನಿಯರ್ ಆಗಿರುವ ಫರ್ಸಿನ್‌ ಅವರ ವಿವಾಹ ಇದಾಗಿದೆ.
ಇವರ ಮದುವೆ ಬರುವ ಮೇ ತಿಂಗಳಲ್ಲಿ ಫಿಕ್ಸ್​ ಆಗಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ಮುಂದೆ ಏನಾಗುವುದೋ ಎಂದು ಅರಿಯದೇ ಮೊದಲೇ ಮದುವೆಗೆ ನಿರ್ಧರಿಸಿದ್ದಾರೆ. ಮದುವೆ ಸಮಾರಂಭದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ.
ಯೂಕ್ರೇನ್​ನಲ್ಲಿ ಉದ್ವಿಗ್ನ ವಾತಾವರಣ ಇದೆ. ಭವಿಷ್ಯ ಹೇಗಿರುತ್ತದೋ ಗೊತ್ತಿಲ್ಲ. ಅದಕ್ಕಾಗಿ ಈಗಲೇ ಮದುವೆಯಾಗೋಣ ಎಂದು ನಿರ್ಧರಿಸಿರುವುದಾಗಿ ಜೋಡಿ ಹೇಳಿದೆ.
ಎಂಬಿಬಿಎಸ್‌ ಕಲಿಯಲು ಯೂಕ್ರೇನ್‌, ರಷ್ಯಕ್ಕೆ ಹೋಗುವುದೇಕೆ? ಭಾರತದಲ್ಲಿ ಇಲ್ಲದ್ದು ಅಂಥದ್ದೇನಿದೆ ಅಲ್ಲಿ ಗೊತ್ತಾ?

ದಮ್ಮಯ್ಯ ನಮ್ಮನ್ನು ಕಾಪಾಡಿ… ಎಂದು ಭಾರತದ ಕಾಲಿಗೆ ಬಿದ್ದಿರೋ ಇದೇ ಯೂಕ್ರೇನ್‌ ಈ ಹಿಂದೆ ಮಾಡಿದ್ದೇನು?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × five =
Remember me
