ಚೆನ್ನೈ:ಮದ್ವೆಗೆ ಹೆಚ್ಚು ಮಂದಿಯನ್ನು ಕರೆಯೋ ಹಾಗಿಲ್ಲ, ಅಂತರ ಕಾಪಾಡಿಕೊಳ್ಳಬೇಕು, ಮಾಸ್ಕ್‌ ಹಾಕಬೇಕು, ಸ್ಯಾನಿಟೈಸರ್‌ ಹಚ್ಕೋಬೇಕು… ಇವೆಲ್ಲಾ ಮದುವೆಯ ನಿಯಮಗಳೇ ಬೇಡ ಎಂದುಕೊಂಡ ಚೆನ್ನೈನ ಜೋಡಿಯೊಂದು ಆಕಾಶದಲ್ಲಿ ಮದುವೆಯಾಗುವ ಮೂಲಕ ಭಾರಿ ಪ್ರಚಾರ ಪಡೆಯುತ್ತಿದ್ದಾರೆ.
ಭೂಮಿಯ ಮೇಲೆ ಕರೊನಾ ಇದೆ, ರೂಲ್ಸ್‌ ಇದೆ, ಅದಕ್ಕೇ ಭೂಮಿಯ ಸಹವಾಸವೇ ಬೇಡ ಎಂದು ಆಕಾಶದಲ್ಲಿ ಮದುವೆಯಾಗುವ ಪ್ಲ್ಯಾನ್‌ ಮಾಡಿದೆವು ಎನ್ನುವ ಈ ಜೋಡಿ ಮಧುರೈ ನಿವಾಸಿಗಳಾದ ರಾಕೇಶ್-ದಕ್ಷಿಣಾ. ಅದಕ್ಕೆ ಇವರು ವಿಮಾನವನ್ನು ಕಾಯ್ದಿರಿಸಿ ಅದರಲ್ಲಿ ಮದುವೆಯಾಗಿದ್ದಾರೆ!
Rakesh-Dakshina from Madurai, who rented a plane for two hours and got married in the wedding sky. Family members who flew from Madurai to Bangalore after getting married by SpiceJet flight from Bangalore to Madurai.#COVID19India#lockdown@TV9Telugu#weddingrestrictionspic.twitter.com/9nDyn3MM4n
— DONTHU RAMESH (@DonthuRamesh)May 23, 2021

ಮಧುರೈ-ಬೆಂಗಳೂರಿನಿಂದ ಸಂಪೂರ್ಣ ವಿಮಾನವನ್ನು ಕಾಯ್ದಿರಿಸಿದ ಇವರ ಕುಟುಂಬಸ್ಥರು ವಿಮಾನದಲ್ಲಿ 161 ಮಂದಿ ಉಪಸ್ಥಿತಿಯಲ್ಲಿ ಮಧುರೈ ಮೀನಾಕ್ಷಿ ಅಮ್ಮನ್ ದೇವಾಲಯದ ಮೇಲೆ ತಮ್ಮ ವಿಮಾನ ಸುಳಿದಾಡುವಾಗ ಮದುವೆಯಾಗಿದ್ದಾರೆ. ಈ ಮುಹೂರ್ತದಲ್ಲಿ ಅಲ್ಲಿದ್ದ ಬಂಧುಗಳು ಹೂವಿನ ಅರ್ಪಣೆ ಮಾಡುತ್ತಿದ್ದಂತೆ ವರ ವಧುವಿನ ಕುತ್ತಿಗೆಗೆ ತಾಳಿ ಕಟ್ಟಿದ್ದಾನೆ, ವಿಡಿಯೋದಲ್ಲಿ ಗಟ್ಟಿಮೇಳ ರೆಕಾರ್ಡ್ ಕೂಡ ಕೇಳಬಹುದಾಗಿದೆ.
ಎರಡು ಗಂಟೆಗಳ ಕಾಲ ವಿಮಾನವನ್ನು ಬಾಡಿಗೆಗೆ ತೆಗೆದುಕೊಂಡು ಆಕಾಶದಲ್ಲಿ ಮದುವೆಯಾಗಿರುವ ಇವರ ವಿವಾಹದ ವಿಡಿಯೋ ಅನ್ನು ಸ್ನೇಹಿತರೊಬ್ಬರು ಶೇರ್‌ ಮಾಡಿದ್ದು, ಇದೀಗ ಭಾರಿ ವೈರಲ್‌ ಆಗಿದೆ.
ಪ್ರೀತಿಯಲ್ಲಿ ಸಿಲುಕಿಬಿಟ್ಟ ಅಣ್ಣ-ತಂಗಿ! ಮುಂದಿನ ಜನ್ಮದಲ್ಲಿ ಪ್ರೇಮಿಗಳಾಗೋಣ ಎಂದು ಬರೆದಿಟ್ಟು ಆತ್ಮಹತ್ಯೆ

ಲಾಕ್‌ಡೌನ್‌ ವೇಳೆ ಮಂಗಳೂರಿನಲ್ಲಿ ಪ್ರತ್ಯಕ್ಷವಾದ ‘ಮತ್ಸ್ಯಕನ್ಯೆ‘! ಜಾಲತಾಣದ ತುಂಬ ಈಕೆಯದ್ದೇ ಹವಾ..

ಇಂಜಿನಿಯರಿಂಗ್‌ ಪದವೀಧರರಿಗೆ ಭರ್ಜರಿ ಅವಕಾಶ: ಎನ್​ಟಿಪಿಸಿಯಲ್ಲಿ 280 ಹುದ್ದೆಗಳಿಗೆ ಆಹ್ವಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
