ಜೈಪುರ:ಕರೊನಾ ಸದ್ಯ ನಮ್ಮನ್ನು ಬಿಟ್ಟು ಹೋಗುವಂತೆ ಕಾಣಿಸುವುದಿಲ್ಲ. ಆದ್ದರಿಂದ ಇತರ ಜ್ವರ, ರೋಗಗಳಂತೆಯೇ ಕರೊನಾದ ಜತೆಯೇ ಬಾಳುವುದನ್ನು ಕಲಿಯಬೇಕಿದೆ ಎಂದು ಇದಾಗಲೇ ಹಲವಾರು ಮಂದಿ ಹೇಳಿಯಾಗಿದೆ. ಇಲ್ಲದಿದ್ದರೆ ನಮ್ಮ ಬಾಳ್ವೆಯೇ ಕಷ್ಟವಾಗಿದೆ.
ಕರೊನಾ ಕಾಲದಿಂದಾಗಿ ಅದೆಷ್ಟೋ ಮದುವೆಗಳು ಮುಂದಕ್ಕೆ ಹೋಗಿವೆ, ಕೆಲವು ಮದುವೆಗಳಂತೂ ಮುರಿದೇ ಬಿದ್ದಿವೆ. ಕರೊನಾ ಹೋಗುತ್ತೆ, ಆಗ ಮದುವೆಯಾದರಾಯಿತು ಅಂದುಕೊಂಡ ಜೋಡಿಗಳು ಅದರಲ್ಲಿಯೂ ಭರ್ಜರಿ ಮದುವೆಯ ಕನಸು ಕಾಣುತ್ತಿದ್ದವರೂ ಕರೊನಾದೆದುರು ಸೋತು ಚಿಕ್ಕಪ್ರಮಾಣದಲ್ಲಿ ಮದುವೆಯನ್ನೂ ಮಾಡಿಕೊಂಡುಬಿಟ್ಟಿದ್ದಾರೆ.
#WATCHRajasthan: A couple gets married at Kelwara Covid Centre in Bara, Shahbad wearing PPE kits as bride's#COVID19report came positive on the wedding day.
The marriage ceremony was conducted following the govt's Covid protocols.pic.twitter.com/6cSPrJzWjR
— ANI (@ANI)December 6, 2020

ಅಂಥದ್ದೇ ಒಂದು ಮದುವೆ ರಾಜಸ್ಥಾನದ ಬಾರ ಎಂಬಲ್ಲಿ ನಡೆದಿದೆ. ಆದರೆ ಇದು ಒಂದು ಸ್ವಲ್ಪ ಡಿಫರೆಂಟ್​ ಮದುವೆ. ಏಕೆಂದರೆ ಇಲ್ಲಿ ವಧು ಕರೊನಾ ಸೋಂಕಿತೆ. ಹಾಗೆಂದು ಮದುವೆ ಮುಂದಕ್ಕೆ ಹಾಕುವ ಉಸಾಬರಿಗೆ ವಧು-ವರನ ಮನೆಯವರು ಹೋಗಲೇ ಇಲ್ಲ.
ಅದಕ್ಕಾಗಿಯೇ ಪಿಪಿಯ ಕಿಟ್ ಧರಿಸಿಯೇ ಮದುವೆ ನಡೆದಿದೆ. ಈ ಮದುವೆ ವಿಡಿಯೋ ಇದೀಗ ಭಾರಿ ವೈರಲ್​ ಆಗಿದ್ದು, ಅನೇಕ ಮಂದಿ ಖುಷಿ ಪಟ್ಟುಕೊಂಡಿದ್ದಾರೆ.
#WATCHRajasthan: A couple gets married at Kelwara Covid Centre in Bara, Shahbad wearing PPE kits as bride's#COVID19report came positive on the wedding day.
The marriage ceremony was conducted following the govt's Covid protocols.pic.twitter.com/6cSPrJzWjR
— ANI (@ANI)December 6, 2020

ಆಗಿದ್ದೇನೆಂದರೆ, ನಿನ್ನೆ ಮದುವೆ ಮುಹೂರ್ತ ಫಿಕ್ಸ್​ ಆಗಿದೆ. ಆದರೆ ದುರದೃಷ್ಟವಶಾತ್​ ಮದುಮಗಳಿಗೆ ಕರೊನಾ ಪಾಸಿಟಿವ್​ ಎನ್ನುವುದೂ ನಿನ್ನೆಯೇ ತಿಳಿದುಬಂತು. ಆದರೆ ಎಲ್ಲಾ ಸಿದ್ಧತೆ ಆಗಿದ್ದರಿಂದ ಮದುವೆ ಮುಂದೆ ಹಾಕುವುದು ಬೇಡ ಎಂದುಕೊಂಡ ಎರಡೂ ಕಡೆಯವರು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಧು-ವರರು ಪಿಪಿಇ ಕಿಟ್ ಧರಿಸಿ ಸಪ್ತಪದಿ ತುಳಿದಿದ್ದಾರೆ.
ಕಾರ್ಯಕ್ರಮದಲ್ಲಿ ಕೊರೊನಾ ನಿಯಮವನ್ನು ಪಾಲಿಸಲಾಗಿದೆ. ಅಗ್ನಿ ಕುಂಡದ ಮುಂದೆ ವಧು-ವರರು ಪಿಪಿಇ ಕಿಟ್ ಧರಿಸಿ ಕುಳಿತಿದ್ದಾರೆ. ಅರ್ಚಕರು ಮಂತ್ರ ಹೇಳುವುದನ್ನು ಕೂಡ ಈ ವಿಡಿಯೋದಲ್ಲಿ ನೋಡಬಹುದು.
ಪತಿ ಯುವಕರಂತೆ ಕಾಣಿಸ್ತಾರೆ, ನಾನೋ ವಯಸ್ಸಾದವಳಂತೆ ಕಾಣಿಸ್ತೇನೆ- ಪರಿಹಾರ ಹೇಳಿ…

ತೃತೀಯ ಲಿಂಗಿ ಅಪ್ಪನಿಗೆ ಅಂಡಾಣು ನೀಡಿ ಮಗು ನೀಡ ಹೊರಟಿದ್ದಾಳೆ ಸಲಿಂಗಿ ಮಗಳು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − 6 =
Remember me
