ಕೊಟ್ಟಾಯಂ:ಕೇರಳದ ಕೊಟ್ಟಾಯಂನ ವೈಕೋಮ್ ಎಂಬಲ್ಲಿ ಕುತೂಹಲದ ಮದುವೆಯೊಂದು ನಡೆದಿದೆ. ಇಲ್ಲಿ ಮದುವೆಯಾಗ ಯುವತಿ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ಲಾವಣ್ಯ. ಮತದಾರನನ್ನೇ ಮದುವೆಯಾಗುತ್ತಿರುವ ಈ ಯುವತಿ, ಮತಯಾಚಿಸುತ್ತಲೇ ಮದುವೆಯಾಗುವ ಮೂಲಕ ಕುತೂಹಲ ಮೂಡಿಸಿದ್ದಾರೆ.
15ನೇ ವಾರ್ಡಿನಿಂದ ಎಲ್‍ಡಿಎಫ್ ಅಭ್ಯರ್ಥಿಯಾಗಿ ಕಣಕ್ಕಿಳಿರುವ ಲಾವಣ್ಯ, ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇದರ ನಡುವೆಯೇ ಶರತ್ ಎನ್ನುವವ ಜತೆ ಹಸಮಣೆ ಏರಿರುವ ಇವರು, ಬಂದವರ ಬಳಿಯೆಲ್ಲಾ ಮತಯಾಚಿಸಿದ್ದಾರೆ.
ಉಡುಗೊರೆಯೇ ಆಶೀರ್ವಾದ ಎಂದು ಲಗ್ನಪತ್ರಿಕೆಯಲ್ಲಿ ಬರೆಯುವುದು ಸಾಮಾನ್ಯ. ಆದರೆ ಈಕೆ ನಿಮ್ಮ ಮತವೇ ನನಗೆ ನೀಡುವ ಆಶೀರ್ವಾದ ಎಂದು ಹೇಳುತ್ತಲೇ ಮದುವೆ ಮನೆಯಲ್ಲಿಯೂ ಮತಯಾಚಿಸಿದ್ದಾರೆ.
ಇದನ್ನೂ ಓದಿ:VIDEO: ಅತ್ತೆಗೊಂದು ಕಾಲ… ಸೊಸೆಗೊಂದು ಕಾಲ ಅಂದ್ರೆ ಇದೇನಾ?
ಇನ್ನೊಂದು ಇಂಟರೆಸ್ಟಿಂಗ್​ ವಿಷಯ ಎಂದರೆ, ಈಕೆಯ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿರುವವರೆಲ್ಲರೂ, ರಾಜಕೀಯವಾಗಿ ವಿರೋಧಿಗಳಾಗಿದ್ದರೂ, ಮದುವೆಗೆ ಬಂದು ಶುಭ ಹಾರೈಸಿ ಹೋಗಿದ್ದಾರೆ. ಯುಡಿಎಫ್ ಅಭ್ಯರ್ಥಿ ಮಜಿತಾ ಲಾಲ್ಜಿ ಮತ್ತು ಎನ್‍ಡಿಎ ಅಭ್ಯರ್ಥಿ ಪಿ.ಕೆ ಬಿನು ಸೇರಿದಂತೆ ಚುನಾವಣಾ ಕಣಕ್ಕಿಳಿದವರು ಭಾಗವಹಿಸಿ ನೂತನ ವಧು-ವರರಿಗೆ ಆಶೀರ್ವಾದ ಮಾಡಿದ್ದಾರೆ. ಅವರ ಬಳಿಯೂ ಮತಯಾಚಿಸುವ ತಮಾಷೆ ಘಟನೆಯೂ ಅಲ್ಲಿ ನಡೆದಿದೆ.
ಫೆಬ್ರವರಿ 2 ರಂದು ಲಾವಣ್ಯ ನಿಶ್ಚಿತಾರ್ಥ ನೆರವೇರಿತ್ತು. ಮದುವೆಯನ್ನು ಮೇ 10 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದುವೆ ದಿನಾಂಕವನ್ನು ಮುಂದೂಡಲಾಯಿತು. ಈ ಮಧ್ಯೆ ಲಾವಣ್ಯ ಅವರನ್ನು ವಾರ್ಡ್‍ನಲ್ಲಿ ಎಲ್‍ಡಿಎಫ್ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಯಿತು. ಆದರೆ ವಧು-ವರರಿಬ್ಬರ ಕುಟುಂಬಗಳು ಮದುವೆಯನ್ನು ಮತ್ತಷ್ಟು ಮುಂದೂಡದಿರಲು ನಿರ್ಧರಿಸಿದರು.
ಲಾವಣ್ಯ ಕುಲಶೇಖರಮಂಗಲಂ ಮೂಲದ ಕಮಲಾಸನನ್ ಮತ್ತು ಕಾಂಚನ ದಂಪತಿಯ ಪುತ್ರಿ. ಶರತ್ ಅವರು ಚೆಮ್ಮನಕರಿ ಮೂಲದ ಚಂದ್ರನ್ ಮತ್ತು ಸಂತ ಅವರ ಪುತ್ರ.
ಪ್ರಧಾನಿ ಮೋದಿ ವಿರುದ್ಧ ಕೋರ್ಟ್​ಗೆ ಹೋಗಿದ್ದ ಯೋಧ: ಹೊರಬಿತ್ತು ತೀರ್ಪು

ಚಳಿಗಾಲ ಕಾಲಿಟ್ಟರೆ ಈ ಗ್ರಾಮದ ಬಣ್ಣವೇ ಬದಲಾಗುತ್ತೆ!

‘ಊಟ ಮಾಡಿದ್ದು ದಲಿತರ ಮನೆಯಲ್ಲೇ… ಆದ್ರೆ ಅಡುಗೆ ಮಾಡಿದ್ದು ಮಾತ್ರ ಬ್ರಾಹ್ಮಣರು’

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen + 10 =
Remember me
