ನವದೆಹಲಿ:ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲೂ ಪ್ರಸಾದ್ ಅವರ ಕೊನೆಯ ಪುತ್ರ ತೇಜಸ್ವಿ ಯಾದವ್ ಅವರು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಬಾಲ್ಯದ ಗೆಳತಿ ರಾಜೇಶ್ವರಿ ಎಕೆಎ ರೇಚೆಲ್ ಅವರೊಂದಿಗೆ ಮದುವೆ ಅದ್ಧೂರಿಯಾಗಿ ನಡೆದಿದೆ.
ಇವರು ಗುರುವಾರ (ಡಿ.9) ಬೆಳಗ್ಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ದೆಹಲಿಯ ಸೈನಿಕ್ ಫಾರ್ಮಸ್‌ನಲ್ಲಿ ಮದುವೆ ಏರ್ಪಡಿಸಲಾಗಿತ್ತು. ಆದರೆ ಮದುವೆಯ ಬಗ್ಗೆ ಎಲ್ಲಿಯೂ ಬಾಯಿಬಿಟ್ಟಿರಲಿಲ್ಲ. ಇದಕ್ಕೆ ಕಾರಣವೂ ತಿಳಿದಿಲ್ಲ. ಇವರ ಮದುವೆಯ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತೇ ಇರಲಿಲ್ಲ. ಆದರೆ ವಧು ರಾಜೇಶ್ವರಿ ಅವರ ಸಹೋದರಿ ರೋಹಿಣಿ ಆಚಾರ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ವಿವಾಹದ ಫೋಟೋ ಹಂಚಿಕೊಂಡು ಶುಭಾಶಯ ಕೋರಿದ್ದರು. ಆಗಲೇ ಮದುವೆ ವಿಷಯ ಜಗಜ್ಜಾಹೀರವಾಗಿದೆ.
ಅಷ್ಟಕ್ಕೂ ಅವರ ಸಹೋದರಿ ಕೂಡ ಮದುವೆಗೆ ಹೋಗಲಿಲ್ಲ ಎನ್ನುವುದು ವಿಶೇಷ. ಟ್ವಿಟರ್‌ನಲ್ಲಿ ಅವರು, ನಾನು ನಿನ್ನ ಮದುವೆಗೆ ಬರಲು ಆಗಲಿಲ್ಲ. ಆದರೆ ನನ್ನ ಆಶೀರ್ವಾದ ನಿಮ್ಮಿಬ್ಬರ ಮೇಲಿದೆ. ಟುಟು ಮತ್ತು ರೇಚೆಲ್‍ಗೆ ಮದುವೆಯ ಶುಭಾಶಯಗಳು, ನಿಮ್ಮಿಬ್ಬರ ಜೀವನ ಉಸಿರಿರುವವರೆಗೂ ಸಂತೋಷವಾಗಿರಲೆಂದು ಆಶಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಈ ಜೋಡಿ ದೆಹಲಿಯ ‘ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ’ ಒಟ್ಟಿಗೇ ಓದುತ್ತಿದ್ದರು. ಈಗ 6-7 ವರ್ಷಗಳಿಂದ ಸ್ನೇಹಿತರಾಗಿದ್ದರು. ಮದುವೆಗೆ ಕೇವಲ 50 ಮಂದಿ ಭಾಗಿಯಾಗಿದ್ದರು ಎನ್ನಲಾಗಿದೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಅವರ ಪತ್ನಿ ಡಿಂಪಲ್, ರಾಜ್ಯಸಭಾ ಸಂಸದೆ ಮಿಸಾ ಭಾರತಿ ಇತರರು ಸೇರಿದಂತೆ ಉನ್ನತ ರಾಜಕೀಯ ನಾಯಕರು ಉಪಸ್ಥಿತರಿದ್ದರು.
ಅಡ್ಡಾದಿಡ್ಡಿ ಕಾರು ಚಲಾಯಿಸಿ ಬೈಕ್‌ಗೆ ಗುದ್ದಿದ ನಟಿ: ಕುಡಿದ ಮತ್ತಿನಲ್ಲಿದ್ದಳಾ ಬೆಡಗಿ? ತನಿಖೆ ಶುರು

ನೀರು ಬೇಕು ಎಂದರು… ಕೊಡಲು ಆಗ್ಲೇ ಇಲ್ಲ ಸರ್‌.. ಇಷ್ಟು ದೊಡ್ಡ ವ್ಯಕ್ತಿ ಎಂದು ಆಮೇಲೆ ಗೊತ್ತಾಯ್ತು… ಪ್ರತ್ಯಕ್ಷದರ್ಶಿಯ ಕಣ್ಣೀರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 5 =
Remember me
