ಲಖನೌ: ಸುಮಾರು 53 ವರ್ಷದ ಅಮ್ಮ ಹಾಗೂ 27 ವರ್ಷದ ಮಗಳು ಒಂದೇ ಮಂಟಪದಲ್ಲಿ ವಧುಗಳಾಗಿ ಮಿಂಚಿದ ಅಪರೂಪದ ಘಟನೆ ಉತ್ತರಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ.
ಗೋರಖ್‌ಪುರದ ಪಿಪ್ರೌಲಿ ಬ್ಲಾಕ್‌ನಲ್ಲಿ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ ಅಡಿಯಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ತಾಯಿ ಮತ್ತು ಮಗಳು ಮದುವೆ ಮಾಡಿಕೊಂಡಿರುವ ಕುತೂಹಲದ ಘಟನೆ ನಡೆದಿದೆ. ವಿಧವಾ ವಿವಾಹ ಹಾಗೂ ಎಲ್ಲಾ ಧರ್ಮಿಯರಿಗೂ ಸಾಮೂಹಿಕ ವಿವಾಹ ಯೋಜನೆ ಅಡಿ ಉತ್ತೇಜನ ನೀಡಿರುವುದು ಈ ಸಾಮೂಹಿಕ ವಿವಾಹ ಕಾರ್ಯಕ್ರಮ ಸಾಕ್ಷಿಯಾಯಿತು.
ಬೇಲಿದೇವಿ ಎನ್ನುವ ಮಹಿಳೆ 25 ವರ್ಷಗಳ ಹಿಂದೆಯೇ ತಮ್ಮ ಯೌವನ ಕಾಲದಲ್ಲಿಯೇ ಪತಿಯನ್ನು ಕಳೆದುಕೊಂಡಿದ್ದಾರೆ. ಅದಾಗಲೇ ಮೂವರು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಇವರ ಮೇಲಿತ್ತು. ತಮ್ಮ ಮೂವರೂ ಪುತ್ರಿಯರನ್ನು ಬೆಳೆಸಿ ಇಬ್ಬರನ್ನೂ ಮದುವೆ ಮಾಡಿಕೊಟ್ಟಿದ್ದಾರೆ ಬೇಲಿದೇವಿ.

ಕೊನೆಯಲ್ಲಿ ಇದ್ದುದು ಕಿರಿಯ ಪುತ್ರಿ ಇಂದೂ ಮಾತ್ರ. ಆಕೆಯೂ ಮದುವೆಯಾಗಿ ಹೋದರೆ ಇವರದ್ದು ಒಂಟಿತನದ ಬದುಕು. ಆದ್ದರಿಂದ ಮಗಳಿಗೂ ತಮ್ಮ ಅಮ್ಮನ ಮದುವೆ ಮಾಡುವ ಆಸೆಯಾಗಿತ್ತು. ವರನನ್ನು ಬೇರೆಲ್ಲೂ ಹುಡುಕುವ ಅವಶ್ಯಕತೆಯೇ ಇರಲಿಲ್ಲ. ಏಕೆಂದರೆ ಬೇಲಿದೇವಿ ಅವರ ಮೈದುನ ಅಂದರೆ ಗಂಡನ ತಮ್ಮ ರೈತರಾಗಿರುವ 55 ವರ್ಷದ ಜಗದೀಶ್ ​ ಅವರಿಗೆ ಇನ್ನೂ ವಿವಾಹವಾಗಿರಲಿಲ್ಲ.
ಆದ್ದರಿಂದ ಎಲ್ಲಾ ಕುಟುಂಬಸ್ಥರು ಒಟ್ಟಿಗೇ ಸೇರಿ ಇವರ ವಿವಾಹ ಮಾಡುವ ಯೋಚನೆ ಮಾಡಿದ್ದಾರೆ. ಇದಕ್ಕೆ ಮಕ್ಕಳೂ ಒಪ್ಪಿಗೆ ಸೂಚಿಸಿದ್ದಾರೆ.
ಆದ್ದರಿಂದ ಕಿರಿಯ ಮಗಳ ಮದುವೆಯ ಜತೆಗೆ ತಾಯಿಯ ಮದುವೆಯೂ ಆಗಿದೆ. ಹಲವು ಮುಸ್ಲಿಂ ಜೋಡಿ ಸೇರಿದಂತೆ ಒಟ್ಟು 63 ಜೋಡಿಯ ಮದುವೆ ಇಲ್ಲಿ ನಡೆದಿದೆ. ನನ್ನ ತಾಯಿಯ ಮದುವೆ ವಿಚಾರವಾಗಿ ನನ್ನ ಒಡಹುಟ್ಟಿದವರಲ್ಲಿ ಯಾರಿಗೂ ತಿರಸ್ಕಾರವಿಲ್ಲ. ನನ್ನ ತಾಯಿ ಮತ್ತು ಚಿಕ್ಕಪ್ಪ ನಮ್ಮನ್ನು ನೋಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಆಸರೆಯಾಗಿ ಒಟ್ಟಾಗಿರುವುದಕ್ಕೆ ನಮಗೆ ಈಗ ತುಂಬಾ ಸಂತೋಷವಾಗಿದೆ ಎಂದು ಮಗಳು ಇಂದೂ ಹೇಳಿದ್ದಾಳೆ.
ಕಾರ್ಯಕ್ರಮದಲ್ಲಿ ಈ ಸಂದರ್ಭದಲ್ಲಿ ಬಿಡಿಒ ಡಾ ಸಿ.ಎಸ್ ಕುಶ್ವಾಹ ಸತ್ಯಪಾಲ್ ಸಿಂಗ್ ಮತ್ತು ಇನ್ನೊಬ್ಬ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮದುವೆ ಮನೆಯಲ್ಲಿಯೇ ವರನ ಬ್ಯಾಟಿಂಗ್​- ವಧುವಿನ ಬೌಲಿಂಗ್​: ವಿಡಿಯೋ ವೈರಲ್​

ನಿಗೂಢವಾಗಿ ಮೃತಪಟ್ಟ’ಡರ್ಟಿ ಪಿಕ್ಚರ್’ ನಟಿ ಆರ್ಯಾ ಬ್ಯಾನರ್ಜಿ ಮರಣೋತ್ತರ ಪರೀಕ್ಷೆಯಲ್ಲಿ ಅಸಲಿಯತ್ತು ಬಯಲು…

ಕೋರ್ಟ್​ನಿಂದ ಛೀಮಾರಿ ಹಾಕಿಸಿಕೊಂಡ ಠಾಕ್ರೆ ಸರ್ಕಾರದಿಂದ ಇನ್ನೊಂದು ನಡೆ- ರಿಪಬ್ಲಿಕನ್​ ಟಿವಿ ಸಿಇಒ ಅರೆಸ್ಟ್​

ಸರ್ಕಾರಿ ನೌಕರರಾಗಬೇಕೆಂದು ಮುಷ್ಕರಕ್ಕೆ ಹೋದವರಿಗೆ ಬಿಎಂಟಿಸಿಯಿಂದ ಬಿಗ್​ ಶಾಕ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × one =
Remember me
