ರೋಮ್​:ಈಗ ಮದುವೆ ಮಾಡಿಸುವುದು ಎಂದರೆ ಅಷ್ಟು ಸುಲಭವಲ್ಲ. ಅತ್ಯಂತ ಕಡಿಮೆ ಖರ್ಚಿನಲ್ಲಿ ಮದುವೆ ಮಾಡಿಸುವುದಿದ್ದರೂ ಲಕ್ಷಾಂತರ ರೂಪಾಯಿ ಬೇಕೇ ಬೇಕು. ಇನ್ನು ನಗರ ಪ್ರದೇಶಗಳ ಮಾತಂತೂ ಕೇಳಲೇಬೇಡಿ. ಪರಿಸ್ಥಿತಿ ಹೀಗಿರುವಾಗ ನೀವು ಮದುವೆಯಾಗಲು ಗೊತ್ತು ಮಾಡಿದ ಜಾಗದವರೇ ಹಣವನ್ನು ನಿಮಗೇ ಕೊಡುವುದಿದ್ದರೆ?
ಹೀಗೂ ಇರುತ್ತಾ ಎಂದು ಅಚ್ಚರಿ ಪಡಬೇಡಿ. ಅಂಥದ್ದೊಂದು ಜಾಲ ಇದೆ. ಇಲ್ಲಿ ಮದುವೆಗೆ ಜಾಗ ನೀಡುವುದೂ ಅಲ್ಲದೇ, ಇಲ್ಲಿ ಮದುವೆಯಾದರೆ 1.67 ಲಕ್ಷ ರೂಪಾಯಿ ನಿಮಗೇ ಸಿಗುತ್ತೆ ಎಂದರೆ ನಂಬುವುದು ಕಷ್ಟವೇ ಅಲ್ಲವೆ?
ಅಂಥದ್ದೊಂದು ಜಾಗ ಇರುವುದು ಮಧ್ಯ ಇಟಲಿಯ ಲಾಜಿಯೊದಲ್ಲಿ. ಜಗತ್ತಿನ ಅತ್ಯಂತ ಸುಂದರ ತಾಣಗಳಲ್ಲಿ ಒಂದು ಎನಿಸಿರುವ ರೋಮ್​ನ ಬಳಿ ಈ ಲಾಜಿಯೊ ಇದೆ. 2017ರ ಡಿಸೆಂಬರ್​ 11ರಂದು ಕ್ರಿಕೆಟ್​ ತಾರೆ ವಿರಾಟ್​ ಕೊಹ್ಲಿ ಅವರು ನಟಿ ಅನುಷ್ಕಾ ಶರ್ಮಾರನ್ನು ಮದುವೆಯಾಗಿದ್ದು ಇದೇ ಜಾಗದಲ್ಲಿ.
ಈ ಪ್ರದೇಶವನ್ನು ಇನ್ನಷ್ಟು ಪ್ರಸಿದ್ಧಗೊಳಿಸುವ ಸಲುವಾಗಿ ಸರ್ಕಾರ 83 ಕೋಟಿ ರೂಪಾಯಿಗಳನ್ನು ಮೀಸಲು ಇರಿಸಿದೆ. ಇದೇ ಕಾರಣಕ್ಕೆ ಇಲ್ಲಿ ಮದುವೆಯಾಷ್ಟೇ ಅಲ್ಲದೇ ಯಾವುದೇ ಸಭೆ ಸಮಾರಂಭ ನಡೆಸಿದರೂ ಹಣವನ್ನು ನೀಡಲಾಗುತ್ತದೆ. ಇಲ್ಲಿ ರೋಮ್‌ನ ಸಾಂಪ್ರದಾಯಿಕ ಕೊಲಿಸಿಯಂ ಅವಶೇಷಗಳು ಮತ್ತು ಕ್ಲಾಸಿಕ್ ಪುರಾತನ ರೋಮನ್ ವಾಸ್ತುಶಿಲ್ಪದ ಸ್ಮಾರಕಗಳೂ ಇವೆ.
ಆರ್ಥಿಕ ಬಿಕ್ಕಟ್ಟಿನಿಂದ ಕೆಟ್ಟದಾಗಿ ಬಳಲುತ್ತಿರುವ ವಲಯವನ್ನು ಬೆಂಬಲಿಸಲು ಈ ಯೋಜನೆ ಅಗತ್ಯವಿದೆ ಎಂದು ಲಾಜಿಯೊ ಅಧ್ಯಕ್ಷ ನಿಕೋಲಾ ಜಿಂಗಾರೆಟ್ಟಿ ಹೇಳಿದ್ದಾರೆ.
ಅಂದಹಾಗೆ ಈ ಆಫರ್​ ಕಳೆದ ಜನವರಿಯಿಂದ ಶುರುವಾಗಿದ್ದು ಈ ವರ್ಷದ ಅಂದರೆ 2022ರ ಡಿಸೆಂಬರ್​ವರೆಗೂ ಇದೆ. ಭಾರತದಿಂದ ಇಟಲಿಯವರೆಗಿನ ಪ್ರಯಾಣ ದುಬಾರಿಯಾದರೂ ಹಣವಿದ್ದವರು ಇಲ್ಲಿ ಟ್ರೈ ಮಾಡಬಹುದು.
ತುಂಡು ತುಂಡು ಕತ್ತರಿಸೋದಾಗಿ ಹೇಳಿ ಎಸ್ಕೇಪ್​ ಆಗಿದ್ದ ಕೈ ಮುಖಂಡ ಹೈದರಾಬಾದ್​ನಲ್ಲಿ ಸಿಕ್ಕಿಬಿದ್ದ! ಈಗೇನಾಯ್ತು ನೋಡಿ…

188 ಮಕ್ಕಳನ್ನು ಸೃಷ್ಟಿಸಿ ಸರ್ಕಾರಕ್ಕೆ 19 ಕೋಟಿ ರೂಪಾಯಿ ಪಂಗನಾಮ! ಈತನ ಭಯಾನಕ ಕಥೆ ಕೇಳಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 12 =
Remember me
