ಪಣಜಿ:ವಿಚ್ಛೇದನ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವ ವಿಷಯ ಹಳೆಯದಾಗಿದೆ. ಈ ಪ್ರಕರಣಗಳು ಎಷ್ಟರಮಟ್ಟಿಗೆ ಏರುತ್ತಿವೆ ಎಂದು ಹಲವು ರಾಜ್ಯಗಳಲ್ಲಿ ಕೌಂಟುಬಿಕ ಕೋರ್ಟ್‌ಗಳ ಸಂಖ್ಯೆ 2-3 ಪಟ್ಟು ಹೆಚ್ಚು ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.
ಇದೇ ರೀತಿ ಮುಂದುವರೆದರೆ ಭವಿಷ್ಯದಲ್ಲಿ ಭಾರಿ ಅನಾಹುತ ಆಗಬಹುದು ಎನ್ನುವ ಕಾರಣಕ್ಕೆ ಗೋವಾ ಸರ್ಕಾರ ಹೊಸದೊಂದು ಕಾನೂನು ತರಲು ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಕಲ ಸಿದ್ಧತೆ ನಡೆಸಲಾಗಿದೆ. ದಂಪತಿ ನಡುವೆ ಸಾಮರಸ್ಯದ ಕೊರತೆ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿರುವುದು ಮದುವೆ ಮುರಿದು ಬೀಳಲು ಕಾರಣ ಎಂಬ ಅಂಶವನ್ನು ಮನಗಂಡಿರುವ ಗೋವಾ ಸರ್ಕಾರ, ಮದುವೆ ನಿಗದಿಯಾಗುತ್ತಿದ್ದಂತೆಯೇ ಭಾವಿ ದಂಪತಿಗೆ ಕೌನ್ಸಿಲಿಂಗ್‌ ಕಡ್ಡಾಯಗೊಳಿಸಲಿದೆ.
ಗೋವಾ ಕಾನೂನು ಸಚಿವ ನಿಲೇಶ್ ಕ್ಯಾಬ್ರಾಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಗೋವಾ ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಆ್ಯಂಡ್ ರೂರಲ್ ಡೆವಲಪ್‍ಮೆಂಟ್ (ಜಿಐಪಿಎಆರ್ ಡಿ) ಕೌನ್ಸೆಲಿಂಗ್ ಕೋರ್ಸ್ ಹಾಗೂ ಇದರ ಸ್ವರೂಪವನ್ನು ಅಂತಿಮಗೊಳಿಸಲಿದ, ಇದನ್ನು ಕಡ್ಡಾಯಗೊಳಿಸಿದರೆ ವಿಚ್ಛೇದನ ಪ್ರಕರಣಗಳನ್ನು ಸಾಕಷ್ಟು ಮಟ್ಟಿಗೆ ತಡೆಗಟ್ಟಬಹುದು ಎಂದು ಅವರು ಹೇಳಿದ್ದಾರೆ.
ವಿವಾಹವಾಗಿ 6 ತಿಂಗಳಿಂದ 1 ವರ್ಷದ ಅವಧಿಯಲ್ಲಿ ಹೆಚ್ಚು ಜನ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ಹೀಗಾಗಿ ವಿವಾಹಕ್ಕೂ ಮೊದಲು ಕೌನ್ಸಲಿಂಗ್ ನಡೆಸುವುದು ಅನಿವಾರ್ಯವಾಗಿದೆ ಎಂದಿದ್ದಾರೆ.
ಬೆಚ್ಚಿಬೀಳಿಸಿದ್ದ ಬಾಂಗ್ಲಾ ಯುವತಿ ಗ್ಯಾಂಗ್‌ ರೇಪ್‌: ಗುಪ್ತಾಂಗಕ್ಕೆ ಬಾಟ್ಲಿ ತುರುಕಿ ವಿಕೃತಿ ಮೆರೆದಿದ್ದವ ಇವನೇ…

VIDEO: ಮದುಮಗ ಹಾರ ಹಾಕ್ತಿದ್ದಂತೆಯೇ ಖುಷಿತಾಳದೇ ಗುಂಡು ಹಾರಿಸಿದ ಮದುಮಗಳು- ಮುಂದಾದದ್ದೆಲ್ಲಾ ಅನಾಹುತ!

ಲೈಂಗಿಕ ತೃಷೆ ತೀರಿಸಿಕೊಳ್ಳಲು ವಿದ್ಯಾರ್ಥಿನಿಯರ ಬಳಕೆ! ಜೈಲು ಸೇರಿದ ಶಿಕ್ಷಕಿಯ ದುರಂತ ಅಂತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
