ಸಾಂಗ್ಲಿ (ಮಹಾರಾಷ್ಟ್ರ):ಮದುವೆ ಎನ್ನುವುದು ಎಲ್ಲರಿಗೂ ದೇಹ ಸುಖವೇ ಆಗಬೇಕೆಂದಿಲ್ಲ. ಬಾಳಿನ ಇಳಿ ಸಂಜೆಯಲ್ಲಿ ಬದುಕಿಗೆ ಆಧಾರವಾಗಿ ಇರಲು ಸಾಧ್ಯವಾಗುವುದು ಗಂಡ-ಹೆಂಡತಿ ಎಂಬ ಜೋಡಿ ಇದ್ದಾಗಲೇ. ಆದರೆ ಪತಿ- ಪತ್ನಿ ತೀರಿ ಹೋದಾಗ ಅಥವಾ ವಿಚ್ಛೇದನ ಪಡೆದಾಗ ಮತ್ತೊಮ್ಮೆ ಮದುವೆಯಾಗುವವರಿಗೆ ಸ್ವಲ್ಪ ವಯಸ್ಸಾಗಿದ್ದರೆ ಎಷ್ಟೋ ಮಂದಿ ಅಂಥವರನ್ನು ವಿಚಿತ್ರ ದೃಷ್ಟಿಯಿಂದ ನೋಡುವುದು ಇಂದಿಗೂ ಉಂಟು.
ಆದರೆ ಇವನ್ನೆಲ್ಲಾ ಮೀರಿ ಖುದ್ದು ಮಗನೇ ಮುಂದೆ ನಿಂತು 79 ವರ್ಷ ವಯಸ್ಸಿನ ತಮ್ಮ ತಂದೆಗೆ ಮದುವೆ ಮಾಡಿಸಿದ್ದಾರೆ. ಇದು ನಡೆದಿರುವುದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ. 79 ವರ್ಷದ ನಿವೃತ್ತ ಶಿಕ್ಷಕ ದಾದಾಸಾಹೇಬ್​​ ಸಾಲುಂಖೆ ಹಾಗೂ 66 ವರ್ಷದ ವಿಧವೆ ಶಾಲಿನಿ ಮದುವೆಯಾದವರು.
ವೃದ್ಧದಾದಾಸಾಹೇಬ್​ ಸಾಲುಂಖೆ ಪತ್ನಿ ಕಳೆದುಕೊಂಡು ಹಲವು ವರ್ಷಗಳೇ ಕಳೆದಿದ್ದವು. ಅವರ ಮಗ ಬೇರೆಡೆ ವಾಸವಾಗಿದ್ದರು. ಒಂಟಿಯಾಗಿ ವಾಸವಿಗಿದ್ದರಿಂದ ಇಳಿ ವಯಸ್ಸಲ್ಲಿ ಜೋಡಿಯ ಅವಶ್ಯಕತೆ ಎನ್ನಿಸಿತು. ಮಗನಿಗೆ ಈ ವಿಷಯ ತಿಳಿಸಿದಾಗ ಅದಕ್ಕೆ ಒಪ್ಪಿದ ಅವರು, ವಧುವಿಗಾಗಿ ಹಲವೆಡೆ ವಿಚಾರಿಸಿದ್ದಾರೆ. ಆದರೆ ಎಲ್ಲಿಯೂ ಸಿಗಲಿಲ್ಲ. ನಂತರ ಮೀರಜ್ ಮುನ್ಸಿಪಲ್ ಕಾರ್ಪೊರೇಷನ್ ನಡೆಸುತ್ತಿರುವ ಅಸ್ತಾ ಬೇಗಾರ್ ಕೇಂದ್ರದ ( ನಿರ್ಗತಿಕ ಮಹಿಳೆಯರ ಕೇಂದ್ರ) ಇಲ್ಲಿ ಹೋದಾಗ ಅಲ್ಲಿ ಅವರಿಗೆ ಶಾಲಿನಿ ಎಂಬುವರರ ಬಗ್ಗೆ ತಿಳಿಯುತ್ತದೆ.
ಅವರು ಕೂಡ ವಿಧವೆಯಾಗಿದ್ದು, ಮದುವೆಗೆ ಒಪ್ಪಿಕೊಳ್ಳುತ್ತಾರೆ. ಹೀಗೆ ಇವರಿಬ್ಬರ ಮದುವೆಯನ್ನು ಮಗ ಮಾಡಿಸಿದ್ದಾನೆ.
VIDEO: ಲೋ ಮಂಟಪದಲ್ಲೇ ಗುಟ್ಕಾ ತಿಂತ್ಯಾ? ಮದುಮಗನಿಗೆ ಟಪಾರ್‌ ಬಾರಿಸಿದ ವಧು; ವರ ಎಸ್ಕೇಪ್‌!

VIDEO: ಸೀರೆ ಉಟ್ಟಿದ್ದೀರಿ, ನಿಮ್ಮಂಥವರಿಗೆ ಪ್ರವೇಶವಿಲ್ಲ- ದೆಹಲಿ ಹೋಟೆಲ್‌ ಸಿಬ್ಬಂದಿ ಧಮ್ಕಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
