ರೇಲಾ (ಗುಜರಾತ್​):ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡುವವರ ಬಗ್ಗೆ ಅನೇಕ ಸುದ್ದಿಗಳು ಬರುತ್ತಲೇ ಇರುತ್ತವೆ. ಆದರೆ ಗುಜರಾತ್​ನ ರೇಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನಂದ್​ ಎಂಬ ಗ್ರಾಮದಲ್ಲಿ ಮಾತ್ರ ಮದುವೆಯ ಹೆಸರಿನಲ್ಲಿ ಬೇರೊಂದು ರೀತಿಯ ವಂಚನೆ ನಡೀತಿದೆ.
ಅದೇನೆಂದರೆ ಈ ಗ್ರಾಮದಲ್ಲಿ ಇರೋರೆ ಒಂದೂವರೆ ಸಾವಿರದಷ್ಟು ಮಂದಿ. ಆದರೆ ಗ್ರಾಮದಲ್ಲಿ ವಿತರಣೆಯಾದ ಒಟ್ಟಾರೆ ಮದುವೆ ಪ್ರಮಾಣಪತ್ರಗಳ ಸಂಖ್ಯೆ 1,470! ಅಂದರೆ ಮದುವೆ ಪ್ರಮಾಣ ಪತ್ರದ ಹೆಸರಿನಲ್ಲಿ ಭಾರಿ ದಂಧೆ ಈ ಗ್ರಾಮದಲ್ಲಿ ನಡೆಯುತ್ತಿದೆ.
ದುಡ್ಡಿನ ಆಸೆಗಾಗಿ ಕೇಳಿದವರಿಗೆಲ್ಲಾ ಮದುವೆ ಪ್ರಮಾಣ ಪತ್ರ ನೀಡಲಾಗುತ್ತಿದೆ. ನಿಜವಾಗಿಯೂ ಯಾರು ಯಾರ ಹೆಂಡತಿ, ಯಾರು ಯಾರ ಗಂಡ ಎಂಬುದು ಇಲ್ಲಿಯವರು ಪಡೆಯುತ್ತಿರುವ ಪ್ರಮಾಣ ಪತ್ರದಿಂದ ತಿಳಿಯುತ್ತಲೇ ಇಲ್ಲ. ಒಂದರಿಂದ ಒಂದೂವರೆ ಲಕ್ಷ ರೂಪಾಯಿ ಪಡೆದು ಬೇಕಾದವರ ಹೆಸರನ್ನು ಈ ಮದುವೆ ಪ್ರಮಾಣ ಪತ್ರದಲ್ಲಿ ಸೇರಿಸಲಾಗುತ್ತಿದೆ!
ಮದುವೆ ಪ್ರಮಾಣಪತ್ರಗಳನ್ನು ಆಯಾ ಗ್ರಾಮದ ನಿವಾಸಿಗಳಿಗೆ ಮಾತ್ರವೇ ವಿತರಿಸಲು ಪಂಚಾಯಿತಿ ಕಾರ್ಯದರ್ಶಿಗೆ ಅವಕಾಶವಿದೆ. ಆದರೆ, ಹಣ ಪಡೆದು ಯಾರಿಗೆ ಬೇಕಾದರೂ ಪ್ರಮಾಣ ಪತ್ರ ಕೊಡುತ್ತಿರುವ ಕಾರಣ, ಇಂಥದ್ದೊಂದು ದಂಧೆ ಈಗ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಾಥಮಿಕ ತನಿಖೆ ಆಧಾರದ ಮೇಲೆ ಈಗಾಗಲೇ ಪಂಚಾಯಿತಿಯ ಕಾರ್ಯದರ್ಶಿ ಅರವಿಂದ್ ಮಾಕ್ವಾನ ಎಂಬವವರನ್ನು ಅಮಾನತುಗೊಳಿಸಲಾಗಿದೆ.
ಒಂದರಿಂದ ಒಂದೂವರೆ ಲಕ್ಷ ರೂಪಾಯಿ ಪಡೆದು ಮೊಬೈಲ್​ಗೆ ಮದುವೆ ಪ್ರಮಾಣಪತ್ರ ಕಳಿಸುತ್ತಿರುವುದು ಬೆಳಕಿಗೆ ಬಂದಿದೆ. ಏಜೆಂಟ್‌ಗಳ ಮೂಲಕ ಅಂತಹ ಪ್ರಮಾಣಪತ್ರಗಳನ್ನು ಪಂಚಾಯಿತಿಯ ಕಾರ್ಯದರ್ಶಿ ವಿತರಿಸುತ್ತಿದ್ದರು. ಯಾವುದೇ ವಿವಾಹದ ಪುರಾವೆ ಅಥವಾ ದಂಪತಿ ಮಾಹಿತಿಯ ದಾಖಲೆಗಳಿಲ್ಲದೆ ಇದ್ದರೂ ಪ್ರಮಾಣಪತ್ರ ಕೊಡಲಾಗುತ್ತಿತ್ತು. ಮೆಹ್ಸಾನಾ, ಅಹಮದಾಬಾದ್ ಮತ್ತು ಮುಂಬೈಯಂತಹ ಜಿಲ್ಲೆಗಳಲ್ಲಿ ವಾಸಿಸುವ ಅಪ್ರಾಪ್ತರ ಹೆಸರಿನಲ್ಲೂ ಮದುವೆ ಪ್ರಮಾಣಪತ್ರಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ.
ಕಳೆದ ಜುಲೈನಲ್ಲಿ ಸಭೆಯಲ್ಲಿ ನಕಲಿ ಪ್ರಮಾಣಪತ್ರಗಳ ದಂಧೆ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ರೇಲಾ ಗ್ರಾಮ ಪಂಚಾಯಿತಿಯಲ್ಲಿ 1,470 ಮದುವೆ ಪ್ರಮಾಣಪತ್ರಗಳ ವಿತರಣೆಯಾಗಿವೆ. ಈ ಗ್ರಾಮದಲ್ಲಿರುವ ಜನಸಂಖ್ಯೆ ಕೇವಲ 1,500 ಎಂದು ಜಿಲ್ಲಾ ಅಭಿವೃದ್ಧಿ ಅಧಿಕಾರಿ (ಡಿಡಿಒ) ಗಮನಕ್ಕೂ ಆಗಲೇ ತರಲಾಗಿತ್ತು. ಆಗ ಈ ಅಧಿಕಾರಿ ಪಂಚಾಯಿತಿಯ ಕಾರ್ಯದರ್ಶಿ ವಿರುದ್ಧ ತನಿಖೆಗೆ ಕೈಗೊಂಡಿದ್ದರು ಎಂದು ಸೋಜಿತ್ರಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಪುನಂಭಾಯ್​ ಪರ್ಮಾರ್ ತಿಳಿಸಿದ್ದಾರೆ.(ಏಜೆನ್ಸೀಸ್​)
ವಿದ್ಯುತ್​ ಬಿಲ್​ ಕಟ್ಟಿಲ್ಲವೆಂದು ಎಸ್​ಎಂಎಸ್​, ಕರೆ ಬಂದರೆ ಎಚ್ಚರ: ದುಡ್ಡು ಕಳೆದುಕೊಳ್ಳಬೇಕಾದೀತು ಜೋಕೆ!

ಸಚಿವ ಮನ್ಸೂರ್​ ದೇಗುಲ ಪ್ರವೇಶಿಸಿದ ಹಿಂದಿದ್ಯಾ ಬೇರೆ ಉದ್ದೇಶ? ಅರ್ಚಕರಿಗೆ ಸಂದೇಹ ಶುರುವಾಗಿದ್ದೇಕೆ?

ಬಿಗ್​ಬಾಸ್​ ಸ್ಪರ್ಧಿ, ಖ್ಯಾತ ನೃತ್ಯಗಾತಿ ಸಪ್ನಾಗೆ ಬಂಧನದ ಭೀತಿ: ಕೋರ್ಟ್​ನಿಂದ ವಾರೆಂಟ್​ ಜಾರಿ​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × five =
Remember me
