ನ್ಯೂಯಾರ್ಕ್​:ಈ ಚಿತ್ರದಲ್ಲಿ ಕಾಣಿಸುವ ಅಜ್ಜಿಯ ಹೆಸರು ಮಾರ್ಥಾ ಮಾ ಓಫೇಲಿಯ. ಅಮರಿಕದ ಈ ಅಜ್ಜಿಗೀಗ 90 ವರ್ಷ ವಯಸ್ಸು. ಆದರೆ 70 ವರ್ಷಗಳಿಂದ ಈ ಅಜ್ಜಿಗೆ ಮದುಮಗಳಂತೆ ಬಿಳಿಯ ಗೌನ್​ ಧರಿಸಬೇಕು ಎಂಬ ಆಸೆ ಇತ್ತು. 20ನೇ ವಯಸ್ಸಿನಲ್ಲಿ ಉಂಟಾಗಿರುವ ಈ ಆಸೆ ಏಳು ದಶಕಗಳ ಬಳಿಕ ಈಡೇರಿದೆ.
ಅಜ್ಜಿ ಬಿಳಿಯ ಗೌನ್​ ಧರಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದ್ದು, ಅಪಾರ ಮೆಚ್ಚುಗೆ ಗಳಿಸಿದೆ. ಅಷ್ಟಕ್ಕೂ ಒಂದು ಗೌನ್​ಗಾಗಿ 70 ವರ್ಷ ಅಜ್ಜಿ ಕಾಯಬೇಕಿತ್ತಾ ಎಂದು ಕೇಳಬಹುದು.
ಹೌದು. ಈ ಅಜ್ಜಿಯದ್ದು ಕಣ್ಣೀರ ಕಥೆ. ಏಕೆಂದರೆ ಈಕೆ ಕರಿಯಳು. ಎಂದರೆ ಆಫ್ರಿಕನ್​ ಮೂಲದವರು ಈ ಅಜ್ಜಿ ಯೌವನಾವಸ್ಥೆಯಲ್ಲಿ ಇರುವಾಗ ಬಿಳಿ ಬಣ್ಣದ ಗೌನ್ ತೊಡಬೇಕೆಂಬ ಆಸೆಯಿತ್ತು. ಆದರೆ ಆ ಸಮಯದಲ್ಲಿ ಆಫ್ರಿಕನ್-ಅಮೆರಿಕನ್ ಸಮುದಾಯದ ಹೋರಾಟ ತೀವ್ರವಾಗಿತ್ತು. ಬಿಳಿ ಜನರು ಕಪ್ಪು ಜನಾಂಗದವರನ್ನು ದೂರವಿಡುತ್ತಿದ್ದರು.
ಆ ಸಮಯದಲ್ಲಿ ಎರಡೂ ಗುಂಪುಗಳು ಅವರಿಗೆ ಬೇರೆ-ಬೇರೆಯದಾದ ಅಂಗಡಿಗಳನ್ನು ಹೊಂದಿತ್ತು. ಆದರೆ, ಬಿಳಿ ಬಣ್ಣದ ಉಡುಪು ತೆಗೆದುಕೊಳ್ಳಲು ಕಪ್ಪು ವರ್ಣೀಯರಿಗೆ ಅಂಗಡಿ ಪ್ರವೇಶವಿರಲಿಲ್ಲ. ಹಾಗಾಗಿ ನೀಲಿ ಬಣ್ಣದ ಉಡುಪನ್ನು ಧರಿಸಿ ಮದುವೆಯಾಗಿದ್ದರು. ಬಿಳಿಯ ಬಣ್ಣ ಮಾತ್ರ ಕನಸಾಗಿಯೇ ಉಳಿದಿತ್ತು. ಆ ಆಸೆಯನ್ನು ಒಳಗೆ ಹುದುಗಿಸಿಕೊಂಡಿದ್ದರು ಅಜ್ಜಿ. ಆದರೆ ಈಗ ಅವರ ಈ ಆಸೆ ಮೊಮ್ಮಗಳಿಗೆ ತಿಳಿದು ಬಿಳಿಯ ಗೌನ್​ ತರಿಸಿಕೊಟ್ಟಿದ್ದಾರೆ. ಅಲ್ಲಿ ನೆರೆದಿದ್ದವರ ಕಣ್ಣಂಚು ಒದ್ದೆಯಾಗಿತ್ತು. ವಧುವಿನ ಬಟ್ಟೆಯಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಾ ಎಂದು ಹೇಳಿದಾಗ ಅವರ ಕಣ್ಣಲ್ಲಿ ಆನಂದಭಾಷ್ಪ ಸುರಿಯಿತು.
ಅಜ್ಜಿ ಸಂಭ್ರಮಿಸಿದ ಕ್ಷಣವಿದು:
Martha Mae Ophelia Moon Tucker, who was married in 1952, always wanted to wear a wedding dress. But at the time Black women weren’t allowed in bridal shops.
Now 94, her dream is coming true.https://t.co/hwaA5v9T9Bpic.twitter.com/qlJ84ejemX
— ABC News (@ABC)July 10, 2021

ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಕನಸು ನುಚ್ಚುನೂರು: 8500 ಹುದ್ದೆ ರದ್ದು ಮಾಡಿದ ಎಸ್​ಬಿಐ

ಫೋಟೋದಲ್ಲಿದ್ದ ಚಿನ್ನದ ಸರವೇ ಮಹಿಳೆ ಪ್ರಾಣ ಕಸಿದುಕೊಂಡಿತು! ಭೀಕರ ಪ್ರಕರಣವನ್ನು ಭೇದಿಸಿದ ಪೊಲೀಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − five =
Remember me
