ಇಟವಾ (ಉತ್ತರ ಪ್ರದೇಶ):ಮದುವೆ ಮನೆಯಲ್ಲಿ ಮದುಮಗಳು ಮುಖಕ್ಕೆ ಧರಿಸಿದ್ದ ಮುಸುಕನ್ನು ತೆಗೆದು ವರನೊಬ್ಬ ಬೆಚ್ಚಿ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಇಟವಾದಲ್ಲಿ ನಡೆದಿದೆ. ಮದುಮಗಳನ್ನು ನೋಡುತ್ತಿದ್ದಂತೆಯೇ ಓಡಿ ಹೋಗಿ ಪೊಲೀಸ್‌ ಠಾಣೆಗೆ ದೂರು ನೀಡಲು ಬಯಸಿದ ವರನಿಗೆ ಈ ಮದುಮಗಳು ಶಾಕ್ ಕೊಟ್ಟಿದ್ದು, ಆತ ತೊಟ್ಟಿದ್ದ ಧೋತಿಯನ್ನೇ ಬಿಚ್ಚಿದ್ದಾಳೆ!
ಅಷ್ಟಕ್ಕೂ ಆಗಿದ್ದೇನೆಂದರೆ ಶತ್ರುಘ್ನ ಸಿಂಗ್ ಎಂಬ ಯುವಕನಿಗಾಗಿ ಮನೆಯವರು ಹುಡುಗಿಯನ್ನು ನೋಡುತ್ತಿದ್ದರು. ಆ ಸಂದರ್ಭದಲ್ಲಿ 20 ವರ್ಷದ ಹುಡುಗಿಯ ಫೋಟೋ ಅನ್ನು ಮದುವೆ ಬ್ರೋಕರ್‌ ಒಬ್ಬ ತೋರಿಸಿದ. ವಧು-ವರರು ಇಬ್ಬರೂ ನೋಡಿಕೊಂಡು ಜತೆಗೆ ಕುಟುಂಬದವರೂ ಮಾತುಕತೆ ನಡೆಸಿ ಮದುವೆಯನ್ನೂ ನಿಗದಿ ಮಾಡಲಾಯಿತು.
ಇಲ್ಲಿಯ ಪದ್ಧತಿಯಂತೆ ಮದುಮಗಳ ಮುಖವನ್ನು ಮುಸುಕಿನಿಂದ ಮುಚ್ಚಲಾಗುತ್ತದೆ. ಅದೇ ರೀತಿ ಮದುಮಗಳ ಮುಖವನ್ನೂ ಮುಚ್ಚಲಾಗಿತ್ತು. ನಂತರ ಮದುವೆ ಮಾಡುತ್ತಿರುವ ಸಂದರ್ಭದಲ್ಲಿ ವಧುವಿನ ಕೈಯನ್ನು ನೋಡಿ ವರನಿಗೆ ಏನೋ ಸಂದೇಹ ಬಂದಿದೆ. ಆತನ ಪಾಲಕರಿಗೂ ಸಂದೇಹ ಬಂದಿದೆ. ಇದು ಚಿಕ್ಕ ವಯಸ್ಸಿನ ಹುಡುಗಿಯ ಕೈ ಇದ್ದಂತಿಲ್ಲ ಎನ್ನಿಸಿದೆ. ಇದೇ ವೇಳೆ ವರ ಹಿಂದೆ ಮುಂದೆ ನೋಡದೆ ವಧುವಿನ ಮುಖದ ಮೇಲಿದ್ದ ಪರದೆ ತೆಗೆದು ಹೌಹಾರಿ ಹೋಗಿದ್ದಾನೆ. ಏಕೆಂದರೆ ಅಲ್ಲಿ ಇದ್ದುದು ಸುಮಾರು 45 ವರ್ಷದ ಮಹಿಳೆ.
ಆಕೆಯನ್ನು ನೋಡಿ ವರನ ಪಾಲಕರಿಗೂ ತಲೆ ಸುತ್ತಿತು. ನಂತರ ಮದುವೆಯನ್ನು ಅಲ್ಲಿಯೇ ನಿಲ್ಲಿಸಲಾಯಿತು. ತಮಗೆ ಮೋಸ ಮಾಡಿರುವುದಾಗಿ ತಿಳಿದ ಯುವಕ ಕೂಡಲೇ ಪೊಲೀಸ್‌ ಠಾಣೆಗೆ ದೂರು ನೀಡಲು ಮಂಟಪದಿಂದಲೇ ಓಡಿಹೋಗುವ ಪ್ರಯತ್ನ ಮಾಡಿದ. ಆಗ ಮಹಿಳೆ ಮತ್ತು ಆಕೆಯ ಕಡೆಯವರು ಆತನ ಧೋತಿ ಬಿಚ್ಚಿದರು. ನಂತರ ಬಲವಂತದಿಂದ ಈ ಮದುವೆಯನ್ನು ಮಾಡಿಸುವ ಪ್ರಯತ್ನ ಮಾಡಿದರು. ನಂತರ ತಿಳಿದದ್ದು ಈ ಮಹಿಳೆ ಗಂಡ ಬಿಟ್ಟವಳು ಹಾಗೂ ಇಬ್ಬರು ದೊಡ್ಡ ಮಕ್ಕಳ ತಾಯಿ ಎಂದು.
ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವಕನ ಮೇಲೆ ಹಲ್ಲೆ ಕೂಡ ಮಾಡಲಾಯಿತು. ಆದರೂ ಆತ ಬಿಡದೇ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಮಹಿಳೆ ಮತ್ತು ಮೋಸ ಮಾಡಿದ ಬ್ರೋಕರ್‌ ಮೇಲೆ ದೂರು ದಾಖಲು ಮಾಡಿದ್ದಾನೆ.
ತಾಲಿಬಾನಿಗಳ ಬೆವರಿಳಿಸುತ್ತಿರುವ ಪಂಜ್‌ಶೀರ್‌ ಸೈನಿಕರು: 41 ಮಂದಿಯ ಹೊಡೆದುರುಳಿಸಿದರು!

ಹನಕೆರೆಯಲ್ಲಿ ಸುಮಲತಾ ಸ್ವಂತ ಮನೆ- ರಾಜಕೀಯ ವಲಯದಲ್ಲಿ ಶುರುವಾಯ್ತು ಗುಸುಗುಸು ಚರ್ಚೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 7 =
Remember me
