ಬರ್ಲಿನ್‌:ಮದುವೆಗೆ ಉಡುಗೊರೆಯಾಗಿ ವಿಭಿನ್ನ ರೀತಿಯ ಗಿಫ್ಟ್‌ಗಳನ್ನು ನೀಡಬೇಕೆಂದು ಮದುಮಕ್ಕಳ ಸ್ನೇಹಿತರು, ಸಹೊದ್ಯೋಗಿಗಳು ಎಲ್ಲರೂ ಯೋಚಿಸುವುದು ಸಹಜ.
ಹಾಗೆಯೇ ಇಲ್ಲೊಂದು ಪ್ರಕರಣದಲ್ಲಿ ಜರ್ಮನಿಯ ಮಹಿಳೆಯೊಬ್ಬಳ ಮದುವೆಗೆ ಆಕೆಯ ಸಹೋದ್ಯೋಗಿಗಳು ವಿಭಿನ್ನ ಗಿಫ್ಟ್‌ ನೀಡಿದ್ದರು. ಅದೇ ಎಕೆ-47! ಕೆಲ ವರ್ಷಗಳ ಹಿಂದೆ ನೀಡಿದ್ದ ಈ ಉಡುಗೊರೆ ಇದೀಗ ಭಾರಿ ಸದ್ದು ಮಾಡುತ್ತಿದೆ.
ಎಕೆ-47 ಹೆಸರು ಕೇಳಿದರೇನೇ ಭಯಬೀಳುವುವರು ಹಲವರು. ಆದರೂ ಈ ಜರ್ಮನಿ ಮಹಿಳೆಗೆ ಇಂಥದ್ದೊಂದು ಗಿಫ್ಟ್‌ ಬಂದದ್ದು ಹೇಗೆ? ಅದನ್ನೇ ಆಕೆಯ ಜತೆ ಕೆಲಸ ಮಾಡುವವರು ನೀಡಿದ್ದು ಏಕೆ? ಅನೇಕ ವರ್ಷಗಳ ಹಿಂದೆ ನೀಡಿದ್ದ ಈ ಗಿಫ್ಟ್‌ ಈಗ ಬೆಳಕಿಗೆ ಬಂದದ್ದು ಹೇಗೆ ಇತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ ನೋಡಿ.. ಅಷ್ಟೇ ಅಲ್ಲದೇ ಇದೇ ಗಿಫ್ಟ್‌ನಿಂದ ಪೊಲೀಸರು ಈಕೆಯ ಜನ್ಮವನ್ನೂ ಜಾಲಾಡಿ ಬಿಟ್ಟಿದ್ದಾರೆ.
ಜರ್ಮನಿಯ ಈ ಮಹಿಳೆಯ ಹೆಸರು ಜೆನೆಪ್‌ ಜಿ. ಈಕೆ 2014ರಲ್ಲಿ ಮುಸ್ಲಿಂ ವ್ಯಕ್ತಿಯ ಜತೆ ಸ್ನೇಹಕ್ಕೆ ಬಿದ್ದು ಸಿರಿಯಾಕ್ಕೆ ಹೋಗಿದ್ದಳು. ಅಲ್ಲಿಯೇ ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆಗೆ ಸೇರಿದ್ದಳು. ಅದೇ ವ್ಯಕ್ತಿಯನ್ನು ಅವಳು ಮದುವೆಯಾದಳು. ಆಗಲೇ ಸಿಕ್ಕಿದ್ದು ಈ ಎಕೆ 47 ಉಡುಗೊರೆ.
ಇದನ್ನೂ ಓದಿ:ಎಸ್‌ಡಿಪಿಐ, ಪಿಎಫ್‌ಐ ನಿಷೇಧ- ಸಚಿವಸಂಪುಟದಲ್ಲಿ ಬಂದ ಚರ್ಚೆ ಏನು?
ಇದಿಷ್ಟು ಹಿಂದಿನ ಕಥೆಯಾದರೆ, ಈಗ ಈ ‘ಉಡುಗೊರೆ’ ಬೆಳಕಿಗೆ ಬಂದ ಹಿನ್ನೆಲೆಯೂ ಕುತೂಹಲವೇ ಆಗಿದೆ. ಮದುವೆಯಾದ ಮರುವರ್ಷವೇ ಈಕೆಯ ಉಗ್ರ ಪತಿ ಸತ್ತುಹೋದ. ನಂತರ ಅಲ್ಲಿಯೇ ಇದ್ದ ಇನ್ನೊಬ್ಬನನ್ನೂ ಈಕೆ ವರಿಸಿದಳು. ಆದರೂ ಆತನ ಜತೆ ಬಾಳಲು ಆಗಲಿಲ್ಲ.
ಎಕೆ 47 ತೆಗೆದುಕೊಂಡು ತನ್ನೂರಿಗೆ ವಾಪಸಾದಳು. ಹಾಗೂ ಹೀಗೂ ಮಾಡಿ ತನ್ನ ಜೀವನ ಸಾಗಿಸುತ್ತಿದ್ದ ಈಕೆಗೆ ಈಗ ಹಣಕಾಸು ತೊಂದರೆ ಎದುರಾಗಿದೆ. ಕರೊನಾ ವೈರಸ್‌, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಈಕೆ ನಡೆಸುತ್ತಿದ್ದ ಉಗ್ರ ಚಟುವಟಿಕೆಗಳಿಗೆ ಏಟು ಬಿದ್ದಿರುವ ಹಿನ್ನೆಲೆಯಲ್ಲಿ, ಎಕೆ 47 ಮಾರಲು ಮುಂದಾಗಿದ್ದಾಳೆ.
ಆದರೆ ಗ್ರಹಚಾರ ನೆಟ್ಟಗಿರಲಿಲ್ಲ. ಯಾರ ಬಳಿ ಮಾರಲು ಹೋಗಿದ್ದಳೋ ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ, ಬಂದ ಪೊಲೀಸರು ಆಕೆಯ ಜನ್ಮ ಜಾಲಾಡಿ ಕೇಸು ದಾಖಲು ಮಾಡಿಕೊಂಡಿದ್ದಾರೆ.
ವಿದೇಶಿ ಉಗ್ರ ಸಂಘಟನೆಯ ಚಟುವಟಿಕೆಯಲ್ಲಿ ಭಾಗಿ, ಶಸ್ತ್ರಾಸ್ತ್ರ ನಿಯಂತ್ರಣ ಕಾನೂನು ಉಲ್ಲಂಘನೆ ಮತ್ತು ಯುದ್ಧ ಅಪರಾಧಗಳಲ್ಲಿ ಭಾಗಿ ಇತ್ಯಾದಿ ಆರೋಪಗಳ ಅಡಿ ಇದೀಗ ಕೇಸ್‌ ದಾಖಲಾಗಿದೆ. ಸದ್ಯ ಜೈಲಿನಲ್ಲಿರುವ ಈಕೆ, ತನ್ನ ವಿಧಿಯನ್ನು ಹಳಿದುಕೊಳ್ಳುತ್ತಿದ್ದಾಳೆ.
ಬಾಡಿಗೆ ಗಂಡನಿಂದಾಗಿ ಗಲ್ಲುಶಿಕ್ಷೆಗೆ ಗುರಿಯಾದ ನರ್ಸ್‌ ಒಬ್ಬಳ ಕಣ್ಣೀರ ಕಥೆಯಿದು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − 13 =
Remember me
