ರಾಜಮಂಡ್ರಿ (ಆಂಧ್ರಪ್ರದೇಶ):ಅತ್ಯಂತ ಅಚ್ಚರಿ ಹಾಗೂ ಪಾಲಕರಿಗೆ ಗಾಬರಿ ಹುಟ್ಟಿಸುವಂಥ ಘಟನೆಯೊಂದು ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ನಡೆದಿದೆ. ಅದೇನೆಂದರೆ ಶಾಲೆಯ ಒಳಗೇ ವಿದ್ಯಾರ್ಥಿಯೊಬ್ಬ, ತನ್ನ ಕ್ಲಾಸ್​ಮೇಟ್​ ವಿದ್ಯಾರ್ಥಿನಿಗೆ ತಾಳಿ ಕಟ್ಟಿ ಮದುವೆ ಮಾಡಿಕೊಂಡಿದ್ದಾನೆ!
ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ರಾಜಮಂಡ್ರಿ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕಳೆದ ತಿಂಗಳು 17 ರಂದು ಈ ವಿವಾಹ ನಡೆದಿದ್ದು, ಅದರ ಫೋಟೋ ಇದೀಗ ವೈರಲ್​ ಆಗಿದೆ.
ಇದನ್ನೂ ಓದಿ:ಡಿವೋರ್ಸ್​ ಕೊಟ್ಟಿಲ್ಲ ಎಂದು ತಾಯಿಯನ್ನೇ ಕೊಲೆ ಮಾಡಿದ ಬಾಲಕ!
ತಮ್ಮ ಮಕ್ಕಳು ಈ ರೀತಿ ಮಾಡಿದ್ದಾರೆ ಎಂದು ಪಾಲಕರಿಗೆ ಅರಿವೇ ಇರಲಿಲ್ಲ. ಯಾವಾಗ ಈ ಫೋಟೋ ವೈರಲ್​ ಆಗಿ ಅವರ ಕಣ್ಣಿಗೂ ಬಿತ್ತೋ, ವಿದ್ಯಾರ್ಥಿಗಳ ಪಾಲಕರು ದಂಗಾಗಿಹೋಗಿದ್ದಾರೆ. ವಿವಾಹವು ವಿನೋದಕ್ಕಾಗಿ ನಡೆದಿದೆಯೆ, ಯಾರಿಗಾದರೂ ಚಾಲೆಂಜ್​ ಮಾಡಿರುವುದಕ್ಕೆ ನಡೆದಿದೆಯೇ ಅಥವಾ ನಿಜವಾಗಿಯೂ ಇವರಿಬ್ಬರು ಪ್ರೇಮಿಗಳಾಗಿದ್ದು, ನಿಜವಾಗಿಯೂ ಮದುವೆ ಮಾಡಿಕೊಂಡಿದ್ದಾರೆಯ? ಈ ಫೋಟೋದ ಅಸಲಿಯತ್ತೇನು ಎಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸದ್ಯ ವಿಷಯ ಕಾಲೇಜು ಪ್ರಾಂಶುಪಾಲರಿಗೆ ತಿಳಿದಿದ್ದು, ಇಬ್ಬರನ್ನೂ ಶಾಲೆಯಿಂದ ಹೊರಹಾಕಲಾಗಿದೆ. ಟಿ.ಸಿ ಕೊಟ್ಟು ಕಳುಹಿಸಿರುವುದಾಗಿ ತಿಳಿದುಬಂದಿದೆ.
ಶಾಲೆಯಲ್ಲಿ ‘ಭೂತ’- ಬಡಿದುಕೊಳ್ಳುತ್ತಲೇ ಇದ್ದ ಬಾಗಿಲು: ಲಾಕ್​ ತೆಗೆದಾಗ ಏನಾಯ್ತು? ನೀವೇ ನೋಡಿ…

ಡ್ರಗ್ಸ್​ ಪ್ರಕರಣ: ಭಾರ್ತಿ, ಕರಿಷ್ಮಾಗೆ ಬೇಲ್​- ಇಬ್ಬರು ತನಿಖಾಧಿಕಾರಿಗಳು ಸಸ್ಪೆಂಡ್​!

ಮಥುರಾದಲ್ಲಿ ಶ್ರೀಕೃಷ್ಣ ದೇಗುಲ ನಿರ್ಮಿಸಲು ಮರಗಳು ಕಟ್​- ಯೋಗಿ ಸರ್ಕಾರಕ್ಕೆ ‘ಸುಪ್ರೀಂ’ ಹೇಳಿದ್ದೇನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 5 =
Remember me
