ಮುಂಬೈ:ಕಳೆದ ವಾರ ಸೌದಿ ಅರೇಬಿಯಾದ ರಾಯಭಾರಿ ಕಚೇರಿಗೊಂದು ಅಂಚೆಯಲ್ಲಿ ಪತ್ರ ಬಂದಿತ್ತು. ಅದರಲ್ಲಿ ರಾಯಭಾರಿ ಕಚೇರಿಯ ಕಟ್ಟಡವನ್ನು ಸ್ಫೋಟಿಸಲಾಗುವುದು ಎಂದು ಬರೆಯಲಾಗಿತ್ತು. ಅದನ್ನು ನೋಡಿದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಎಲ್ಲೆಡೆ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ನಂತರ ಇಂಥದ್ದೇ ಒಂದು ಬೆದರಿಕೆ ಪತ್ರ ವರ್ಸೋವಾದಲ್ಲಿನ ಶಾಲೆಗೂ ಬಂದಿತ್ತು.
ಅದನ್ನು ಪರಿಶೀಲಿಸಿದಾಗ ಓರ್ವ ಮಹಿಳೆಯ ಹೆಸರಿನಲ್ಲಿ ಈ ಪತ್ರಗಳು ಬಂದಿದ್ದವು. ಆ ಪತ್ರವನ್ನೇ ಆಧಾರವಾಗಿಟ್ಟುಕೊಂಡು ಮಹಿಳೆಯ ಮನೆಯನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದ ಪೊಲೀಸರು, ಆ ಪತ್ರದಲ್ಲಿ ಹೆಸರು ಇರುವ ಮಹಿಳೆಯನ್ನೂ ಗುರುತಿಸಿ, ಆಕೆಯ ಬಳಿ ಮಾತನಾಡಿದಾಗ ಅಸಲಿಯತ್ತು ಗೊತ್ತಾಗಿ ಸುಸ್ತಾಗಿ ಹೋದರು.ಏಕೆಂದರೆ ಈ ಪತ್ರದಲ್ಲಿ ಉಲ್ಲೇಖವಾಗಿರುವ ಮಹಿಳೆ ಆಕೆಯೇ ಆಗಿದ್ದರೂ ಪತ್ರ ಬರೆದಿದ್ದು ಅವಳಲ್ಲ!
ಇದನ್ನೂ ಓದಿ:ಏಳು ಜಿಲ್ಲೆ ದಾಟಿ ಬಂದ.. 3 ಸಾವಿರ ಕಿ.ಮೀ. ಸುತ್ತಿ ಬಂದ.. ಚೆಲುವ ಹುಲಿರಾಯ…
ಹಾಗಿದ್ದರೆ ಆಗಿದ್ದೇನು?
ಈ ಡ್ರಾಮಾ ಶುರುವಾಗುವುದು ಲೋಖಂಡ್ವಾಲಾ ನಿವಾಸಿ 47 ವರ್ಷದ ಸುಜಿತ್ ರಾಮ್ ಗಿಡ್ವಾನಿ ಎಂಬಾತನಿಂದ. ಸುಜಿತ್ ಲೋಖಂಡ್ವಾಲಾ ನಿವಾಸಿ. ತಾಯಿಯ ಜತೆ ವಾಸವಾಗಿದ್ದ ಈತನಿಗೆ ವರ್ಷ 47 ಆದ್ರೂ ಮದುವೆಯಾಗಿರಲಿಲ್ಲ. ಹೆಣ್ಣು ಸಿಕ್ಕಿರಲಿಲ್ಲ.
ಇದರಿಂದ ಬೇಸರಗೊಂಡಿದ್ದ ಆತ ಕೊನೆಗೆ ಡೇಟಿಂಗ್ ಆ್ಯಪ್​ನಲ್ಲಿ ಹುಡುಕಾಟ ಶುರು ಮಾಡಿದ್ದ. ಅದರಲ್ಲಿ ಮಹಿಳೆಯೊಬ್ಬಳ ಪರಿಚಯವಾಗಿತ್ತು. ಆಕೆ ಈತನ ಜತೆ ಚೆನ್ನಾಗಿಯೇ ಮಾತನಾಡುತ್ತಿದ್ದಳು. ಅದೊಮ್ಮೆ ಸುಜಿತ್​ ಮದುವೆಯ ಪ್ರಸ್ತಾಪವಿಟ್ಟ.
ಇದನ್ನು ಕೇಳಿದಾಗ ಮಹಿಳೆ ಪ್ರಸ್ತಾಪ ನಿರಾಕರಿಸಿದಳು, ಜತೆಗೆ ಈತನ ಬಳಿ ಮಾತನಾಡುವುದನ್ನೂ ನಿಲ್ಲಿಸಿದಳು. ಇದೇ ಸಿಟ್ಟಿನಿಂದ ಪಾಠ ಕಲಿಸಲು ನಿರ್ಧರಿಸಿದ ಸುಜಿತ್​ ಅವಳ ಹೆಸರಿನಲ್ಲಿ ಬೆದರಿಕೆ ಪತ್ರಗಳನ್ನು ಬರೆದಿದ್ದಾನೆ!ರಾಯಭಾರಿ ಕಚೇರಿ ಹಾಗೂ ಶಾಲೆಯ ಕಟ್ಟಡಗಳನ್ನು ಧ್ವಂಸ ಮಾಡುವುದಾಗಿ ಪತ್ರ ಬರೆದು ಮಹಿಳೆಯನ್ನು ಸಿಕ್ಕಿಸಲು ಯೋಜನೆ ರೂಪಿಸಿದ್ದ. ನಂತರ ತನಿಖೆ ಕೈಗೊಂಡ ಪೊಲೀಸರ ಕೈಗೆ ಸಿಕ್ಕಿಬಿದ್ದು ತಪ್ಪು ಒಪ್ಪಿಕೊಂಡಿದ್ದಾನೆ.
ಕಾಂಗ್ರೆಸ್‌ ಮುಖಂಡನ ಪತ್ನಿ ಜತೆ ಇನ್ನೋರ್ವ ಕಾಂಗ್ರೆಸ್‌ ಮುಖಂಡ ಪರಾರಿ! ಬಯಲಾಯ್ತು ಸತ್ಯ…

ಈತನೇ ನೋಡಿ ಜಗತ್ತಿನ ಅತಿ ಎತ್ತರದ ಟೀನೇಜರ್…​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × three =
Remember me
