ಇತ್ವಾಹ್‌:ನೂರು ಸುಳ್ಳು ಹೇಳಿ ಒಂದು ಮದ್ವೆ ಮಾಡಿಸ್ತಾರೆ ಎನ್ನೋ ಗಾದೆ ಇದೆ. ಆದರೆ ವರ ಮಹಾಶಯನೊಬ್ಬ ಸುಳ್ಳು ಹೇಳದಿದ್ದರೂ ಸತ್ಯ ಮುಚ್ಚಿಟ್ಟು ಹಸೆಮಣೆ ಏರಿದ್ದರೂ ಮದುವೆಯಾಗದೇ ಬರಿಗೈನಲ್ಲಿ ವಾಪಸಾಗಬೇಕಾದ ಘಟನೆ ಉತ್ತರಪ್ರದೇಶದ ಇತ್ವಾಹ್‌ನಲ್ಲಿ ನಡೆದಿದೆ.
ಮದುಮಗನ ಸುಂದರವಾದ ಕೂದಲನ್ನು ನೋಡಿ ಮದುಮಗಳು ಬಹಳ ಖುಷಿಪಟ್ಟಿದ್ದಳು. ತನ್ನ ಭಾವಿ ಪತಿಯ ಕೂದಲು ಇಷ್ಟೊಂದು ಚೆನ್ನಾಗಿದೆ ಎಂದುಕೊಂಡಿದ್ದಳು. ಆದರೆ ಮದುವೆಯಾಗುವಾಗ ವರನಿಗೆ ಮದುವೆಗಿಂತ ಹೆಚ್ಚಾಗಿ ತಲೆಯ ಮೇಲೆಯೇ ಗಮನ ಇತ್ತು. ಪದೇ ಪದೇ ತಲೆ ಮುಟ್ಟಿಕೊಳ್ಳುತ್ತಿದ್ದ. ಇದನ್ನು ವಧು ಗಮನಿಸಿದರೂ ಅಷ್ಟು ತಲೆಕೆಡಿಸಿಕೊಂಡಿರಲಿಲ್ಲ. ಆದರೂ ಯಾಕೋ ಅನುಮಾನ ಕಾಡತೊಡಗಿತ್ತು.
ಮದುವೆಯ ಸಂಪ್ರದಾಯಗಳು ಬಹುತೇಕ ಮುಗಿದು, ಇನ್ನೇನು ಹಾರ ಬದಲಾಯಿಸಿಕೊಳ್ಳಬೇಕಿತ್ತು. ಆಗಲೂ ವರ ಪದೇ ಪದೇ ಕೂದಲು ಮುಟ್ಟಿಕೊಳ್ಳುತ್ತಿದ್ದ. ಆಗ ವಧುವಿನ ಹಿಂದೆ ನಿಂತವರು ಗುಟ್ಟಾಗಿ ಆಕೆಯ ಕಿವಿಯಲ್ಲಿ ಏನೋ ಹೇಳಿದರು. ಅದನ್ನು ಕೇಳಿದಾಕೆಯೇ ಮೂರ್ಛೆ ಹೋದಳು. ಎದ್ದು ಮದುವೆ ಬೇಡವೇ ಬೇಡ ಎಂದು ಪಟ್ಟು ಹಿಡಿದು ಅದನ್ನು ಕ್ಯಾನ್ಸಲ್‌ ಮಾಡಿದಳು. ಬಂದವರೆಲ್ಲರೂ ಮದುವೆ ಊಟವನ್ನೂ ಮಾಡದೇ ವಾಪಸ್‌ ಹೋದರು.
ಅಷ್ಟಕ್ಕೂ ಆಗಿದ್ದೇನೆಂದರೆ, ಮದುಮಗನದ್ದು ಬೋಳುತಲೆಯಾಗಿತ್ತು. ಆದ ವಿಗ್‌ ಧರಿಸುತ್ತಿದ್ದ. ಮದುವೆಯಾಗುವಾಗಲೂ ವಿಗ್‌ ಧರಿಸಿ ಬಂದಿದ್ದ. ಅದೆಲ್ಲೆ ಬಿದ್ದು ಹೋಗುತ್ತದೋ ಎಂದು ಅದರ ಮೇಲೆಯೇ ಅವನ ಗಮನವಿತ್ತು. ಅವನ ಈ ರಹಸ್ಯವನ್ನು ಮೊದಲೇ ಅರಿತಿದ್ದವರು ಹಾರ ಬದಲಾಯಿಸುವ ವೇಳೆ ವಧುವಿಗೆ ವಿಷಯ ತಿಳಿಸಿದ್ದಾರೆ. ಇದನ್ನು ಅರಗಿಸಿಕೊಳ್ಳಲಾಗದ ವಧು ತಲೆತಿರುಗಿ ಬಿದ್ದಿದ್ದಾಳೆ. ಕೊನೆಗೆ ಆಕೆಗೆ ಎಚ್ಚರವಾದಾಗ ಮದುವೆ ಸಾಧ್ಯವೇ ಇಲ್ಲವೆಂದು ಹೇಳಿ ಕ್ಯಾನ್ಸಲ್‌ ಮಾಡಿದ್ದಾಳೆ.
ಈ ನೈಜ ಘಟನೆ ನಿಮಗೆ ಆಯುಷ್ಮಾನ್‌ ಖುರಾನ  ನಟನೆಯ  2019ರಲ್ಲಿ ತೆರೆ ಕಂಡ ಸಿನಿಮಾ ’ಬಾಲಾ’ವನ್ನು ನೆನಪು ಮಾಡುತ್ತದೆ. ಇದರಲ್ಲಿ ನಾಯಕನಿಗೆ ತನ್ನ ವಯಸ್ಸಿಗೂ ಮೊದಲೇ ಕೂದಲೆಲ್ಲಾ ಉದುರಿ ತಲೆ ಬೋಳಾಗಿರುತ್ತದೆ. ಆದರೆ ಆತ ವಿವಾಹವಾಗುವ ಸಲುವಾಗಿ ಈ ಬೋಳು ತಲೆಯನ್ನು ತನ್ನ ವಿಗ್‌ನಿಂದ ಮುಚ್ಚಿರುತ್ತಾನೆ. ಈ ಘಟನೆ ಕೂಡ ಇದೇ ರೀತಿ ನಡೆಸಿರುವ ಕಾರಣ, ಮತ್ತೆ ‘ಬಾಲಾ’ವನ್ನು ಎಲ್ಲರೂ ನೆನಪು ಮಾಡಿಕೊಳ್ಳುತ್ತಿದ್ದಾರೆ.
ಕೊನೆಯ ಬಾರಿ ತಬ್ಬಿಕೊಳ್ಳುವೆ, ಮತ್ತೆ ತೊಂದ್ರೆ ಕೊಡಲ್ಲ ಎಂದ ಪತಿ: ಇಬ್ಬರ ದೇಹವೂ ಛಿದ್ರ ಛಿದ್ರ…

ಒಂದೇ ಗೋತ್ರ, ಮದ್ವೆ ಬೇಡ ಎಂದದ್ದೇ ಬಾಲಕಿಯ ಜೀವಕ್ಕೆ ಮುಳುವಾಗಿ ಹೋಯ್ತಾ? ಮಸ್ಕಿ ವಿದ್ಯಾರ್ಥಿನಿಯ ಸಾವಿನ ರಹಸ್ಯ ಬಯಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
