ಲಂಡನ್​:ಮಂಗಳ ಗ್ರಹದ ಬಗೆಗಿನ ಸಂಶೋಧಕರ ಕುತೂಹಲ ಇಂದು, ನಿನ್ನೆಯದ್ದಲ್ಲ. ಎಲ್ಲಾ ಗ್ರಹಗಳಿಗಿಂತಲೂ ಭಿನ್ನವಾಗಿರುವ ಈ ಕೆಂಪು ಗ್ರಹ ಮೊದಲಿನಿಂದಲೂ ಬಾಹ್ಯಾಕಾಶ ಸಂಶೋಧಕರ ಕುತೂಹಲದ ತಾಣ. ಇದಾಗಲೇ ಮಂಗಳನ ಬಗ್ಗೆ ವಿಶ್ವದ ಬಹುತೇಕ ಸಂಶೋಧಕರು ಹೊಸ ಹೊಸ ಸಂಶೋಧನೆ ಮಾಡುತ್ತಲೇ ಇದ್ದಾರೆ.
ಎರಡು ವರ್ಷಗಳ ಹಿಂದೆ ಇಲ್ಲಿ ವಿಜ್ಞಾನಿಗಳು ಒಂದು ಉಪ್ಪುನೀರಿನ ಜಲಾಶಯ ಇರುವುದನ್ನು ಗುರುತಿಸಿದ್ದರು. ಆದರೆ ಈ ಬಗ್ಗೆ ಸಂಶೋಧನೆ ಮುಂದುವರೆದಿತ್ತು. ಇದು ಜಲಾಶಯ ಹೌದೋ ಅಲ್ಲವೋ ಎಂಬ ಜಿಜ್ಞಾಸೆ ಶುರುವಾಗಿತ್ತು. ಅದರೆ ಸಂಶೋಧನೆ ಕೈಗೊಂಡಿರುವ ಸಂಶೋಧಕರಿಗೆ ಇದೀಗ ಉಪ್ಪುನೀರಿನ ಜಲಾಶಯ ಇರುವುದು ನಿಜ ಎಂದು ತಿಳಿದುಬಂದಿದೆ. ಅದಷ್ಟೇ ಅಲ್ಲ. ಅದರ ಹೊರತಾಗಿಯೂ ಇನ್ನೂ ಮೂರು ಸರೋವರಗಳು ಮಂಗಳನ ಅಂಗಳದಲ್ಲಿ ಇರುವ ಬಗ್ಗೆ ಪತ್ತೆಹಚ್ಚಿದ್ದಾರೆ.
ಸರೋವರಗಳು ಸುಮಾರು 75 ಸಾವಿರ ಚದರ ಕಿಲೋಮೀಟರ್‌ಗಳಲ್ಲಿ ವ್ಯಾಪಿಸಿವೆ – ಇದು ಜರ್ಮನಿಯ ಐದನೇ ಒಂದು ಭಾಗದಷ್ಟು ಗಾತ್ರ. ‘ಅತಿದೊಡ್ಡ, ಕೇಂದ್ರ ಸರೋವರವು 30 ಕಿಲೋಮೀಟರ್ ಉದ್ದ ಹೊಂದಿದೆ ಮತ್ತು ಮೂರು ಸಣ್ಣ ಸರೋವರಗಳಿಂದ ಆವೃತವಾಗಿದೆ, ಪ್ರತಿಯೊಂದೂ ಕೆಲವು ಕಿಲೋಮೀಟರ್ ಅಗಲವಿದೆ!
ಎರಡು ವರ್ಷಗಳ ಹಿಂದೆ ಗ್ರಹ ವಿಜ್ಞಾನಿಗಳು ಕಂಡುಹಿಡಿದ ಒಂದು ಉಪ್ಪುನೀರಿನ ಸರೋವರ ಇರುವಿಕೆಯನ್ನು ಸಂಶೋಧಕರು ಖಚಿತಪಡಿಸಿದ್ದಾರೆ ಮತ್ತು ಮಂಗಳದ ಮೇಲ್ಮೈಯಲ್ಲಿ ಅಡಗಿರುವ ಇನ್ನೂ ಮೂರು ಸರೋವರಗಳನ್ನು ಸಹ ಕಂಡುಹಿಡಿದಿದ್ದಾರೆ ಎಂದು ನೇಚರ್ ಖಗೋಳವಿಜ್ಞಾನ ಜರ್ನಲ್​ನಲ್ಲಿ ವರದಿ ಪ್ರಕಟವಾಗಿದೆ. ರೋಮ್ ವಿಶ್ವವಿದ್ಯಾನಿಲಯದ ಗ್ರಹ ವಿಜ್ಞಾನಿ ಎಲೀನಾ ಪೆಟ್ಟಿನೇಲಿ ಈ ಬಗ್ಗೆ ಜರ್ನಲ್​ನಲ್ಲಿ ಉಲ್ಲೇಖ ಮಾಡಿದ್ದಾರೆ.
ಇದನ್ನೂ ಓದಿ:ಡ್ರಗ್ಸ್​ ದಂಧೆ ಪ್ರಕರಣ: ಡ್ಯಾನ್ಸರ್​ ಕಿಶೋರ್​ ಶೆಟ್ಟಿ ಸ್ನೇಹಿತೆ ಕುರಿತು ಸ್ಫೋಟಕ ಮಾಹಿತಿ ಬಹಿರಂಗ..!
‘ಮಂಗಳದಲ್ಲಿ ನಾವು ಒಂದೇ ನೀರಿನ ಅಂಶವನ್ನು ಗುರುತಿಸಿದ್ದೆವು. ಆದರೆ ಇದೀಗ ಇತರ ಮೂರು ನೀರಿನ ಅಂಶಗಳನ್ನು ಸಹ ಕಂಡುಕೊಂಡಿದ್ದೇವೆ ಎಂದು ಅವರು ವಿವರಣೆ ನೀಡಿದ್ದಾರೆ. ಮಾತ್ರವಲ್ಲದೇ ಇಲ್ಲಿ ಜೀವನ ಸಾಧ್ಯವೆ ಎಂಬ ಬಗ್ಗೆ ಸಂಶೋಧನೆ ಶುರುವಾಗಿತ್ತು. ಆದರೆ ಇದೀಗ ನೀರಿನ ಅಂಶ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಅಲ್ಲಿ ಜೀವನ ಮಾಡಲು ಸಾಧ್ಯವಿದೆ ಎಂದಿದ್ದಾರೆ ವಿಜ್ಞಾನಿಗಳು ಹೇಳುತ್ತಾರೆ. ಆದರೆ ಸರೋವರಗಳಲ್ಲಿನ ಉಪ್ಪಿನ ಪ್ರಮಾಣವು ಇಲ್ಲಿ ನಿಜವಾದ ಸಮಸ್ಯೆಯಾಗಿದೆ.
ಮಂಗಳ ಗ್ರಹದ ಯಾವುದೇ ಭೂಗತ ಸರೋವರಗಳು ನೀರು ದ್ರವವಾಗಿ ಉಳಿಯಲು ಸಮಂಜಸವಾಗಿ ಹೆಚ್ಚಿನ ಉಪ್ಪಿನಂಶವನ್ನು ಹೊಂದಿರಬೇಕು ಎಂದು ಹೇಳಲಾಗಿದೆ.
ಮಂಗಳನ ಒಳಭಾಗದಿಂದ ಅಲ್ಪ ಪ್ರಮಾಣದ ಶಾಖವಿರಬಹುದು. ಮಂಜುಗಡ್ಡೆಯನ್ನು ನೀರಿನಲ್ಲಿ ಕರಗಿಸಲು ಇದು ಮಾತ್ರ ಸಾಕಾಗುವುದಿಲ್ಲ, ಆದ್ದರಿಂದ ಇಲ್ಲಿ ವಾಸ ಮಾಡುವ ಮೊದಲು ಇವುಗಳ ಬಗ್ಗೆ ತನಿಖೆ ನಡೆಸುವುದು ಅವಶ್ಯಕತೆ ಇದೆ ಎಂದಿದ್ದಾರೆ ಎಲೀನಾ ಪೆಟ್ಟಿನೇಲಿ. ಒಂದು ವೇಳೆ ಹೀಗಾದಲ್ಲಿ ಮನುಷ್ಯ ಅಲ್ಲಿಯೂ ಮನೆ ಕಟ್ಟುವ ದಿನಗಳು ದೂರವಿಲ್ಲ ಎಂದೇ ಅಭಿಮತ ವ್ಯಕ್ತವಾಗಿದೆ!
ವಾಟ್ಸ್​ಆ್ಯಪ್​ನಿಂದಲೂ ಬ್ಯಾಂಕ್​ ಖಾತೆಗೆ ಕನ್ನ- ಎಸ್​ಬಿಐ ನೀಡಿರುವ ಎಚ್ಚರಿಕೆ ಇಲ್ಲಿದೆ ನೋಡಿ…

ಲತಾ ಮಂಗೇಶ್ಕರ್​ಗೆ ವಿಷ ನೀಡಲಾಗಿತ್ತು! ಅಪ್ರತಿಮ ಗಾಯಕಿ ಜೀವನದ ಘೋರ ಕಹಿಸತ್ಯ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve + eleven =
Remember me
