ಆ್ಯಮ್‌ಸ್ಟರ್‌ಡ್ಯಾಮ್‌:ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಇದೀಗ ಎಲ್ಲೆಡೆಗಳಲ್ಲಿ ಮಾಸ್ಕ್‌ಗಳದ್ದೇ ಕಾರುಬಾರು. ಮಾಸ್ಕ್ ಧರಿಸುವುದರಿಂದ ಕರೊನಾ ವೈರಸ್‌ ಹರಡುವಿಕೆಯನ್ನು ಸ್ವಲ್ಪ ಮಟ್ಟಿಗಾದರೂ ತಗ್ಗಿಸಬಹುದು ಎಂಬ ನಿಟ್ಟಿನಲ್ಲಿ ಈ ಒಂದು ನಿಯಮ ಜಾರಿ ಮಾಡಲಾಗಿದೆ.
ವಿಮಾನದಲ್ಲಿ ಹೋಗುವಾಗಲೂ ಮಾಸ್ಕ್‌ ಕಡ್ಡಾಯ ಮಾಡಲಾಗಿದೆ. ಆದರೆ ವಿಮಾನದಲ್ಲಿ ಸಂಚರಿಸುತ್ತಿದ್ದ ಕುಡುಕನೊಬ್ಬ ಮಾಸ್ಕ್‌ ಧರಿಸಲು ಹಿಂದೇಟು ಹಾಕಿದ ಕಾರಣ, ಸಹ ಪ್ರಮಾಣಿಕರು ಆತನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ನೆದರ್‌ಲ್ಯಾಂಡ್‌ನ ರಾಜಧಾನಿಯಾದ ಆ್ಯಮ್‌ಸ್ಟರ್‌ಡ್ಯಾಮ್‌ನಿಂದ ಸ್ಪ್ಯಾನಿಷ್ ದ್ವೀಪ ಇಬಿಝಾಕ್ಕೆ ಹೊರಟ ವಿಮಾನದಲ್ಲಿ ಮಾರಾಮಾರಿ ನಡೆದಿದ್ದು, ಇದರ ವಿಡಿಯೋ ಇದೀಗ ವೈರಲ್‌ ಆಗಿದೆ.
“Stoppen nu, er zijn kinderen hiero!”Knokpartij op@klmvlucht naar Ibiza. Dronken passagier weigert mondkapje te dragen ✈️
Panic and violent brawl! Unruly passenger on board KLM flight,he refused to wear face mask 😷#incident#klm#avgeek#aviation#planespotting@KLM_presspic.twitter.com/RPM0g1Kqh9
— The Mic High Club Luchtvaart Podcast (@MicHighClub)August 2, 2020

ಮದ್ಯಪಾನ ಮಾಡಿದ್ದ ಇಬ್ಬರು ಪ್ರಯಾಣಿಕರು ಮಾಸ್ಕ್‌ ಧರಿಸಿರಲಿಲ್ಲ. ಸಹ ಪ್ರಯಾಣಿಕರು ಮಾಸ್ಕ್‌ ಧರಿಸುವಂತೆ ವಿನಂತಿ ಮಾಡಿಕೊಂಡಿದ್ದಾರೆ. ಆದರೆ ಅವರು ಮಾತನ್ನು ಕೇಳಲಿಲ್ಲ.
ಎಷ್ಟೇ ಹೇಳಿದರೂ ಜಪ್ಪಯ್ಯ ಎಂದರೂ ತಾವು ಮಾಸ್ಕ್‌ ಧರಿಸುವುದಿಲ್ಲ ಎಂದು ವಾದ ಮಾಡಿದರು. ಈ ವಿಷಯವನ್ನು ಪೈಲಟ್‌ಗೂ ತಲುಪಿಸಲಾಯಿತು. ಅವರು ಕೂಡ ಮಾಸ್ಕ್‌ ಧರಿಸುವಂತೆ ಅನೌನ್ಸ್‌ ಮಾಡಿದರು. ಆದರೂ ಈ ಇಬ್ಬರು ಅದನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ.
ನಂತರ ತಾಳ್ಮೆ ಕಳೆದುಕೊಂಡ ಪ್ರಯಾಣಿಕರು ಈ ಇಬ್ಬರನ್ನೂ ಚೆನ್ನಾಗಿ ಹೊಡೆದರು. ಇಷ್ಟಾದ ಮೇಲೆ ಮಾಸ್ಕ್‌ ಧರಿಸಲು ಆ ವ್ಯಕ್ತಿಗಳು ಒಪ್ಪಿದರು. ವಿಮಾನ ಲ್ಯಾಂಡ್ ಆದ ಕೂಡಲೇ ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಲಾಯಿತು. . ಇವರಿಬ್ಬರೂ ಇಂಗ್ಲೆಂಡ್ ಮೂಲದವರಾಗಿದ್ದು ಕಂಠಪೂರ್ತಿ ಮದ್ಯಸೇವನೆ ಮಾಡಿದ್ದರು ಎನ್ನಲಾಗಿದೆ.
ಹಲ್ಲೆಯನ್ನು ಕಂಡು ಮಕ್ಕಳು ಹೆದರಿ ಚೀರಾಟ ನಡೆಸಿರುವ ಧ್ವನಿ ಕೂಡ ವಿಡಿಯೋದಲ್ಲಿ ದಾಖಲಾಗಿದೆ.
ಭಾರತದ ಟೆಕಿಗಳಿಗೆ ಬಿಗ್‌ ಶಾಕ್‌: ಅಮೆರಿಕದ ಅಧ್ಯಕ್ಷರಿಂದ ಮಹತ್ವದ ಆದೇಶಕ್ಕೆ ಸಹಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − eleven =
Remember me
