ಮುಂಬೈ:ಕ್ಷಣ ಕ್ಷಣಕ್ಕೂ ಆತಂಕ ಸೃಷ್ಟಿಸುತ್ತಿರುವ ಕರೊನಾದಿಂದ ತಕ್ಕಮಟ್ಟಿಗಾದರೂ ಪಾರಾಗಬಹುದು ಎನ್ನುವ ಕಾರಣಕ್ಕೆ ಮಾಸ್ಕ್​ ಕಡ್ಡಾಯ ಮಾಡಿ ಹಲವು ತಿಂಗಳುಗಳೇ ಕಳೆದಿವೆ. ಇದು ಕರ್ನಾಟಕ, ಭಾರತ ಮಾತ್ರವಲ್ಲದೇ ಇಡೀ ವಿಶ್ವದಲ್ಲಿಯೇ ಈ ನಿಯಮ ಜಾರಿಗೆ ಬಂದಿದೆ.
ಮಾಸ್ಕ್​ನಿಂದ ಕರೊನಾ ಹರಡುವಿಕೆಯನ್ನು ತಕ್ಕಮಟ್ಟಿಗೆ ನಿಯಂತ್ರಿಸಬಹುದು ಎನ್ನುವ ಕಾರಣಕ್ಕೆ ಈ ನಿಯಮ ಜಾರಿಗೆ ಬಂದಿದೆ.
ಆದರೆ ಕೆಲವರಿಗೆ ಮಾಸ್ಕ್​ ಧರಿಸುವುದು ಎಂದರೆ ಏನೋ ಅಸಡ್ಡೆ. ಯಾರು ಏನು ಮಾಡುತ್ತಾರೆ ನೋಡಿಯೇ ಬಿಡೋಣ ಎಂದುಕೊಂಡರೆ, ಇನ್ನು ಕೆಲವರಿಗೆ ಈ ಮಾಸ್ಕ್​ ಏನೋ ಕಿರಿಕಿರಿ ಎನ್ನಿಸುತ್ತದೆ. ಒಟ್ಟಿನಲ್ಲಿ ಕಾರಣ ಏನೇ ಇರಲಿ, ಮಾಸ್ಕ್​ ಧರಿಸದೇ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದರೆ 250 ರೂಪಾಯಿ ದಂಡ ತೆರಲೇಬೇಕು.
ಇದನ್ನೂ ಓದಿ:ವಿಲ್​ಗೆ ಸಾಕ್ಷಿಯೂ ಇಲ್ಲ, ನೋಂದಣಿಯೂ ಆಗಿಲ್ಲ… ಇದರಿಂದ ಸಮಸ್ಯೆ ಆಗತ್ತಾ?
ಇದೀಗ ಪೊಲೀಸರಿಗೆ ಭಾರಿ ಟಾರ್ಗೆಟ್​ ಕೂಡ ನೀಡಿರುವ ಹಿನ್ನೆಲೆಯಲ್ಲಿ ಹುಡುಕಿ ಹುಡುಕಿ ಫೈನ್​ ಹಾಕುತ್ತಾರೆ. ಆದರೆ ದಂಡ ಕಟ್ಟಲು ದುಡ್ಡಿಲ್ಲ ಎಂದು ನೆಪವೊಡ್ಡುವವರೇ ಹೆಚ್ಚು. ಇದಕ್ಕೇ ಇಲ್ಲೊಂದು ಕಡೆ ಹೊಸ ಪ್ಲ್ಯಾನ್​ ಹುಡುಕಿರುವ ಪೊಲೀಸರು ದಂಡ ಕಟ್ಟಲು ದುಡ್ಡಿಲ್ಲ ಎಂದರೆ ಪೊರಕೆಯನ್ನು ಕೈಗೆ ಕೊಡುತ್ತಾರೆ. ಏಕೆಂದರೆ ಅವರು ರಸ್ತೆಯ ಕಸವನ್ನು ಗುಡಿಸಬೇಕಾಗುತ್ತದೆ!
ಇಂಥದ್ದೊಂದು ನಿಯಮ ಸದ್ಯ ಮುಂಬೈನಲ್ಲಿ ಬಂದಿದೆ. ಅಲ್ಲಿ ಮಾಸ್ಕ್​ ಹಾಕದವರಿಗೆ 200 ರೂಪಾಯಿ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಕಟ್ಟಲು ಹಣ ಇಲ್ಲ ಎಂದು ನೆಪವೊಡ್ಡಿದರೆ ಕಡ್ಡಾಯವಾಗಿ ರಸ್ತೆಯನ್ನು ಗುಡಿಸಲೇಬೇಕು!
ಸದ್ಯ ಏನೋ ಈ ನಿಯಮ ಮುಂಬೈನಲ್ಲಿ ಇದೆ. ಅಲ್ಲಿ ಸಕ್ಸಸ್​ ಆದರೆ ನಮ್ಮಲ್ಲಿಯೂ ನಿಯಮ ಜಾರಿಯಾಗುವ ದಿನ ದೂರವಿಲ್ಲ!
ಇಡೀ ಗುಜರಾತ್​ ಕಾಂಗ್ರೆಸ್ಸನ್ನು 25 ಕೋಟಿಗೆ ಖರೀದಿಸಬಹುದು!

ಪ್ರವಾಸದಲ್ಲಿರುವ ಪ್ರಧಾನಿ ಭದ್ರತೆಗೆ ನಿಯೋಜನೆಗೊಂಡಿದ್ದ 23 ಮಂದಿಗೆ ಕರೊನಾ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:13 − 5 =
Remember me
