ವಾಷಿಂಗ್ಟನ್​:ರೊನಾದ ಈ ದಿನಗಳಲ್ಲಿ ಮಾಸ್ಕ್​ ಕಡ್ಡಾಯವಾಗಿ ಧರಿಸಲೇಬೇಕು. ಇದನ್ನು ಧರಿಸದೇ ಹೋದರೆ ದಂಡ ಕಟ್ಟಿಟ್ಟ ಬುತ್ತಿ. ಅದೇ ಕಾರಣಕ್ಕೆ ಇದೀಗ ಮಾಸ್ಕ್​ನಲ್ಲಿ ವೈವಿಧ್ಯಮಯ ಸ್ಟೈಲ್​ಗಳು ಬರುತ್ತಿವೆ.
ನೀವು ಇದಾಗಲೇ ವಿಭಿನ್ನ ರೀತಿಯ ಬಟ್ಟೆಗಳ ಮಾಸ್ಕ್​ ನೋಡಿರುವಿರಿ, ಬಣ್ಣ ಬಣ್ಣದ, ರಂಗುರಂಗಿನ, ಬಟ್ಟೆಗಳಿಗೆ ಮ್ಯಾಚಿಂಗ್​ ಎನ್ನುವಂಥ ಮಾಸ್ಕ್​ಗಳು ಇದೀಗ ಸರ್ವೇ ಸಾಮಾನ್ಯವಾಗಿದೆ. 20 ರೂಪಾಯಿ ಮಾಸ್ಕ್​ನಿಂದ ಹಿಡಿದು ಲಕ್ಷಲಕ್ಷಗಟ್ಟಲೆಯ ಮಾಸ್ಕ್​ವರೆಗೂ ಇದೀಗ ಲಭ್ಯ.
ಉಳ್ಳವರು ಚಿನ್ನದ್ದು, ವಜ್ರದ್ದು ಮಾಸ್ಕ್​ ಹಾಕಿಕೊಂಡೂ ಸುದ್ದಿ ಮಾಡಿದ್ದಾರೆ. ಮಾಸ್ಕ್​ ಕುರಿತಾಗಿ ಹಲವಾರು ಮೀಮ್ಸ್​ಗಳೂ ಹುಟ್ಟಿಕೊಂಡಿವೆ. ಮಾಸ್ಕ್​ ಯಾವುದೇ ಇರಲಿ, ಒಟ್ಟಿನಲ್ಲಿ ಇದು ಎಲ್ಲರ ಕಣ್ಣಿಗೆ ಕಾಣಿಸುವುದಂತೂ ಕಾಮನ್​. ಕಾಣಿಸದೇ ಹೋದರೆ ದಂಡ ನೀಡುವುದು ತಪ್ಪಲ್ಲ.
ಮಾಸ್ಕ್​ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಈ ಲಿಂಕ್​ನಲ್ಲಿ ತೋರಿಸಲಾಗಿದೆ;
This is an interesting mask….pic.twitter.com/Avg5jF0Q29
— Harsh Goenka (@hvgoenka)October 28, 2020

ಆದರೆ ಇದೀಗ ಇಲ್ಲಿ ಹೇಳಹೊರಟಿರುವುದು ಸ್ವಲ್ಪ ಡಿಫರೆಂಟ್​ ಮಾಸ್ಕ್​. ಇದು ಮೇಲ್ನೋಟಕ್ಕೆ ಕಾಣಿಸುವುದಿಲ್ಲ, ಸೂಕ್ಷ್ಮವಾಗಿ ಗಮನಿಸಿದರೆ ಅಷ್ಟೆ ಕಾಣಿಸುತ್ತದೆ! ಅಂಥದ್ದೊಂದು ವಿಶೇಷ ಮಾಸ್ಕ್​ ಇದೀಗ ಕೆಲವು ಕಡೆಗಳಲ್ಲಿ ಶುರುವಾಗಿದ್ದು, ಇದೀಗ ಹಲವಾರು ಮಂದಿ ಇದನ್ನು ಕೊಂಡುಕೊಂಡಿದ್ದಾರೆ ಕೂಡ.
ಅಷ್ಟಕ್ಕೂ ಇದೇನು ವಿಶೇಷ ಎಂದರೆ, ನಾವೆಲ್ಲ ಧರಿಸುವ ಮಾಸ್ಕ್​ ಮೂಗು, ಬಾಯಿಯನ್ನು ಕವರ್​ ಮಾಡಿದರೆ, ಈ ಮಾಸ್ಕ್​ ಮೂಗಿನ ಒಳಕ್ಕೆ ಹಾಕಿಕೊಳ್ಳುವುದು!ಹರ್ಷ್ ಗೋಯೆಂಕ್ ತಮ್ಮ ಟ್ವಿಟರ್​ನಲ್ಲಿ ಮೂಗಿಗೆ ಹಾಕುವ ಮಾಸ್ಕ್ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮೂಗಿನೊಳಗೆ ಹಾಕಿಕೊಳ್ಳುವ ಮಾಸ್ಕ್ ಬಗ್ಗೆ ಹೇಳಲಾಗಿದೆ. ಇದೊಂದು ಇಂಟರೆಸ್ಟಿಂಗ್ ಮಾಸ್ಕ್ ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಭ್ರಷ್ಟಾಚಾರ ಆರೋಪ: ಮುಖ್ಯಮಂತ್ರಿ ರಾವತ್​ ವಿರುದ್ಧದ ಪ್ರಕರಣ ಸಿಬಿಐಗೆ
ಈ ವಿಡಿಯೋ ಇದೀಗ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅದೇ ರೀತಿ ಹಲವಾರು ಪ್ರಶ್ನೆಗಳನ್ನೂ ಜನರು ಕೇಳುತ್ತಿದ್ದಾರೆ. ಮಾಸ್ಕ್ ಮೂಗಿನೊಳಗೆ ಹಾಕಿದ್ರೆ ಸಮಸ್ಯೆ ಆಗಲ್ವಾ? ಸೀನು ಬಂದ್ರೆ? ಬಾಯಿಗೆ ಹಾಕುವ ಮಾಸ್ಕ್ ಮೂಗಿಗೆ ಹಾಕಿದ್ರೆ ಕರೊನಾ ಹೋಗುತ್ತಾ? ಉಸಿರಾಟದ ಜತೆ ಮಾಸ್ಕ್ ಮೂಲಕ ಸೋಂಕು ಒಳಗೆ ಹೋಗಲ್ವಾ? ಹೀಗೆ ಅನೇಕ ಪ್ರಶ್ನೆಗಳನ್ನು ಟ್ವಿಟರ್​ನಲ್ಲಿ ಕೇಳಲಾಗಿದೆ.
ಈ ಪ್ರಶ್ನೆಗಳಿಗೆ ಸದ್ಯ ಉತ್ತರ ಸಿಕ್ಕಿಲ್ಲ. ಆದರೆ ಇಂಥ ಮಾಸ್ಕ್​ ಏನಾದರೂ ಎಲ್ಲೆಡೆ ಬಂದರೆ ಪೊಲೀಸರು ಪೇಚಿಗೆ ಸಿಲುಕುವುದಂತೂ ಖಂಡಿತ. ಏಕೆಂದರೆ ಮಾಸ್ಕ್​ ಧರಿಸಿದ್ದಾರೋ, ಇಲ್ಲವೋ ಎಂದು ನೋಡಲು ಜನರನ್ನು ನಿಲ್ಲಿಸಿ ಮೂಗನ್ನು ಚೆಕ್​ ಮಾಡಬೇಕು!
ಮನೆಗೆಲಸದವರು ಬೇಕಾಗಿದ್ದಾರೆ… ಸಂಬಳ ₹18.5 ಲಕ್ಷ, ಊಟ, ವಸತಿ ಫ್ರೀ…

ಹೆಂಡತಿಗೆ ಬೇರೆ ಸಂಬಂಧ ಇದ್ದಾಗ ಡಿವೋರ್ಸ್​ ಕೊಟ್ರೆ ಜೀವನಾಂಶ ಕೊಡಬೇಕಾಗತ್ತಾ?

ಭಾರತೀಯ ವಾಯುಪಡೆಗೆ ಆನೆಬಲ: ನ.5ರಂದು ಮತ್ತೆ ಮೂರು ರಫೇಲ್​ ಯುದ್ಧವಿಮಾನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 + eleven =
Remember me
