ಮುಂಬೈ :ಮಾಸ್ಕ್‌ ಕಡ್ಡಾಯ ಮಾಡಿ ವರ್ಷವೇ ಉರುಳುತ್ತಾ ಬಂದಿದೆ. ಮಾಸ್ಕ್‌ ಧರಿಸದವರ ಭಾರಿ ಪ್ರಮಾಣದ ದಂಡ ಹಾಕುವುದೂ ನಡೆದೇ ಇದೆ. ಆದರೆ ಅನೇಕ ಕಾರಣಗಳಿಂದ ಈಗೀನ ಮಾಸ್ಕ್‌ಗಳನ್ನು ಅನೇಕ ಮಂದಿ ಮೂಗು ಮುಚ್ಚುವಂತೆ ಕಟ್ಟಿಕೊಳ್ಳುತ್ತಿಲ್ಲ. ಪೊಲೀಸರು ಕಂಡೊಡನೆ ಮಾಸ್ಕ್‌ ಏರಿಸುವವರೇ ಹೆಚ್ಚು.
ಅದೇನೇ ಇರಲಿ. ಇಲ್ಲೊಬ್ಬ ಯುವಕ ಮಾತ್ರ ಮೂಗು- ಬಾಯಿ ಮುಚ್ಚಿಕೊಳ್ಳುವ ಬದಲು ಮಾಸ್ಕ್‌ ಅನ್ನು ಕಣ್ಣಿಗೆ ಕಟ್ಟಿಕೊಂಡಿದ್ದಾನೆ. ಅದೂ ಕರೊನಾ ಹೆಚ್ಚಾಗಿ ಹರಡುವ ಭೀತಿ ಇರುವ ರೈಲಿನಲ್ಲಿ. ಕಣ್ಣಿಗೆ ಮಾಸ್ಕ್‌ ಕಟ್ಟಿಕೊಂಡು ನಿದ್ದೆಗೆ ಜಾರಿದ್ದಾನೆ. ಈ ಲೋಕದ ಅರಿವೇ ಇಲ್ಲದಂತೆ ಕನಸಿನ ಲೋಕದಲ್ಲಿ ವಿಶ್ರಮಿಸುತ್ತಿದ್ದಾನೆ.
ಆತನ ಫೋಟೋ ಅನ್ನು ಯಾರೋ ತೆಗೆದು ಅದನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವೈರಲ್ ಫೋಟೋಗಳನ್ನು ಟ್ವಿಟರ್‌ನಲ್ಲಿ ಆಗಾಗ್ಗೆ ಪೋಸ್ಟ್‌ ಮಾಡುವ ಉದ್ಯಮಿ ಆನಂದ್ ಮಹೀಂದ್ರಾ ಈ ಫೋಟೋ ಅನ್ನು ಶೇರ್‌ ಮಾಡಿದ್ದಾರೆ.
मित्रांनो असं बेजबाबदार वागू नका !मास्क चा योग्य वापर करा , कमीत कमी स्वतः च्या आणि कुटुंबाच्या आरोग्याकरीता .https://t.co/0hrwlIw8uH
— Vijay Wadettiwar (@VijayWadettiwar)February 26, 2021

ಅಕ್ಕಪಕ್ಕದಲ್ಲಿ ಜನ ಇದ್ದರೂ ಮೂಗು, ಬಾಯಿಗೆ ಮಾಸ್ಕ್‌ ಹಾಕಿಕೊಳ್ಳದೇ ಕಣ್ಣಿಗೆ ಕಟ್ಟಿಕೊಂಡು ಮಲಗಿರುವುದು ಇಲ್ಲಿ ಕಾಣಬಹುದಾಗಿದೆ. ‘ಮುಂಬೈನಲ್ಲಿ ಇತ್ತೀಚಿನ ಕೋವಿಡ್ ಪ್ರಕರಣಗಳ ಹೆಚ್ಚಳದ ಹಿಂದಿನ ಕಾರಣಗಳನ್ನು ನೀವು ಹುಡುಕಲು ಪ್ರಾರಂಭಿಸಿದಾಗ ಈ ಕಾರಣ ಕೂಡ ಆಗಿದೆ ಎಂದು ಅವರು ಕಮೆಂಟ್ ಮಾಡಿ ಈ ಫೋಟೋ ಹಂಚಿಕೊಂಡಿದ್ದಾರೆ.
ಜನರಿಗೆ ರೋಗದ ಬಗ್ಗೆ ಹೆದರಿಕೆ, ಸರ್ಕಾರದ ನಿಯಮ ಪಾಲಿಸುವ ಕಳಕಳಿ ಇಲ್ಲದಿದ್ದರೆ ಕೋವಿಡ್‌ ಅತಿರೇಕಕ್ಕೆ ಹೋಗಬಹುದು ಎನ್ನುವ ಕಳಕಳಿಯನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ ಮಾಡಿ

ವಿದೇಶದಲ್ಲಿಯೂ ಪರಿಶುದ್ಧನಾಗಿದ್ದ ನಾನು ವಿವಾಹಿತೆಯ ಬಲೆಗೆ ಬಿದ್ದು ಏನೇನೋ ಮಾಡಿದೆ- ಹೇಗೆ ಹೊರಗೆ ಬರಲಿ?

ಇವರಿಗೆ ತೆಳ್ಳಗೆ, ಬೆಳ್ಳಗೆ ಲುಕ್ ಇರೋ ಯುವತಿಯರೇ ‌ ಇರಬೇಕಂತೆ- ಮೂಗು, ಕೂದಲು ಉದ್ದವಿರಬೇಕಂತೆ!

ಮ್ಯಾಟ್ರಿಮೋನಿಯಲ್‌ ಸೈಟ್‌ನಲ್ಲಿ ಯುವತಿಯರ ನೋಡಿ ಮದುವೆ ಪ್ರಪೋಸಲ್‌ ಇಡೋ ಯುವಕರೇ… ಎಚ್ಚರ ಎಚ್ಚರ…

VIDEO: ಸಿಎಂ ನಿವಾಸದ ಮುಂದೆ ಘರ್ಜಿಸುತ್ತಿದೆ ಸಿಂಹ: ಇದು ಮೇಕ್‌ ಇನ್‌ ಇಂಡಿಯಾದ ಹೆಮ್ಮೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − 9 =
Remember me
