ಚಿಕಾಗೊ: ಕರೊನಾ ವೈರಸ್​ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಮಾಸ್ಕ್​ಗಳನ್ನು ಕಡ್ಡಾಯ ಮಾಡಲಾಗಿದೆ. ಮಾಸ್ಕ್​ ಧರಿಸಿಲ್ಲವೆಂದು ಪೊಲೀಸರು ಪ್ರಶ್ನಿಸಿದಾಗ, ಜನರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯುವುದು ಮಾಮೂಲು. ಆದರೆ ಸಹೋದರಿಯರು ಮಾಸ್ಕ್​ ಹಾಕಿಲ್ಲವೆಂದು ಪ್ರಶ್ನೆ ಮಾಡಿದವನನ್ನೇ ತಿವಿದು ಸಾಯಿಸಿದ್ದಾರೆ!
ಇಂಥದ್ದೊಂದು ಭಯಾನಕ ಘಟನೆ ನಡೆದಿರುವುದು ಚಿಕಾಗೋದಲ್ಲಿ. ಶಾಪಿಂಗ್ ಮಾಡಲು ಬಂದಿದ್ದ ಈ ಅಕ್ಕ-ತಂಗಿ ಮಾಸ್ಕ್​ ಧರಿಸಿರಲಿಲ್ಲ. ಶಾಪಿಂಗ್​ ಮಾಲ್​ಗಳಲ್ಲಿ ಮಾಸ್ಕ್​ ಕಡ್ಡಾಯ ಇರುವಾಗ ಅದನ್ನು ಏಕೆ ಧರಿಸಿಲ್ಲ ಎಂದು ಭದ್ರತಾ ಸಿಬ್ಬಂದಿ ಪ್ರಶ್ನಿಸಿದ್ದಾನೆ.
ಇದನ್ನೂ ಓದಿ:ನನ್ನ ಸೇವೆ ಮಾಡಿ ಸದ್ಗತಿ ಪಡೆಯಿರಿ ಎಂದು ಕಾಮತೃಷೆ ತೀರಿಸಿಕೊಳ್ಳುತ್ತಿದ್ದ ‘ಗುರು’ಗೆ 120 ವರ್ಷ ಜೈಲು!
ಇದು ಮೂವರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ. ಜತೆಗೆ ಈ ಸಹೋದರಿಯರು ಅಲ್ಲಿಯೇ ಇಟ್ಟಿದ್ದ ಸ್ಯಾನಿಟೈಸರ್​ಗಳನ್ನು ಕೂಡ ಬಳಸಿರಲಿಲ್ಲ. ಮಾಸ್ಕ್​ ಧರಿಸದೇ, ಸ್ಯಾನಿಟೈಸರ್​ ಬಳಸದೇ ಹೋದರೆ ಪ್ರವೇಶವಿಲ್ಲ ಎಂದು ಭದ್ರತಾ ಸಿಬ್ಬಂದಿ ಹೇಳಿದ್ದಾನೆ. ಇದರಿಂದ ಸಿಟ್ಟುಗೊಂಡ ಈ ಸಹೋದರಿಯರು ಆತನನ್ನು ಒಂದಲ್ಲಾ…. ಎರಡಲ್ಲಾ…. 27 ಬಾರಿ ತಿವಿದು ತಿವಿದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಭದ್ರತಾ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಜೆಸ್ಸಿಕಾ ಮತ್ತು ಜಯಲಾ ಹಿಲ್ ಎಂಬ ಈ ಸಹೋದರಿಯನ್ನು ಪೊಲೀಸರು ಬಂಧಿಸಿದ್ದಾರೆ. ಜೆಸ್ಸಿಕಾ ಕಾವಲುಗಾರನನ್ನು ಹಿಂಭಾಗ, ಎದೆ ಮತ್ತು ತೋಳುಗಳಲ್ಲಿ ಇರಿದರೆ, ಆದರೆ ಅವಳ ಸಹೋದರಿ ಅವನ ಕೂದಲಿನಿಂದ ಹಿಡಿದಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ.
ಆತ್ಮರಕ್ಷಣೆಗಾಗಿ ಇವರು ಈ ರೀತಿ ಮಾಡಿದರು ಎಂದು ಸಹೋದರಿಯರ ಪರ ವಕೀಲರು ವಾದ ಮಂಡಿಸಿದ್ದಾರೆ. ಇಬ್ಬರೂ ಮಾನಸಿಕವಾಗಿ ಅಸ್ವಸ್ಥರಾಗಿರುವುದಾಗಿಯೂ ಅವರು ಹೇಳಿದ್ದಾರೆ. ಆದರೆ ಇಬ್ಬರನ್ನೂ ಬಂಧಿಸಲಾಗಿದೆ, ವಿಚಾರಣೆ ನಡೆಯುತ್ತಿದೆ.
ಮನೆಯಲ್ಲಿರೋ ವಸ್ತು ಮಾರಿ ಗೇಮ್​ ಆಡ್ತಾನೆ, ನೀವೇ ಶಿಕ್ಷೆ ಕೊಡಿ… ಮಗನ ವಿರುದ್ಧ ಪೊಲೀಸ್​ ಕಂಪ್ಲೇಂಟ್​!

ಮಾರುಕಟ್ಟೆಗೆ ಬಂದಿದೆ ಮೂಗೊಳಗೆ ಹಾಕುವ ಮಾಸ್ಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 10 =
Remember me
