ಗಾಂಧಿನಗರ:ಇಲ್ಲಿಯ ಬ್ಯೂಟಿ ಪಾರ್ಲರ್​ ಒಂದರಲ್ಲಿ ಮಾಸ್ಕ್​ ಧರಿಸಿ ಚೂಡಿದಾರ ಹಾಕಿದವಳೊಬ್ಬಳು ಬಂದು ನಿಂತಳು. ಅವಳನ್ನು ನೋಡಿದ ಬ್ಯೂಟಿ ಪಾರ್ಲರ್​ ಮಾಲೀಕಳು ಏನು ಬೇಕು ಎಂದು ವಿಚಾರಿಸಿದಾಗ, ಮಾಸ್ಕ್​ ಹಾಕಿ ಬಂದಾಕೆ ಐಬ್ರೋ ತೋರಿಸಿದ್ದಾಳೆ.
ಸರಿ ಐಬ್ರೋ ಮಾಡಿಸಲು ಬಂದಿದ್ದಾಳೆ ಎಂದು ಈಕೆ ಕುಳಿತುಕೊಳ್ಳಲು ಹೇಳಿದ್ದಾಳೆ. ಅಲ್ಲಿಂದ ಮೊದಲು ಬಂದವರೆಲ್ಲಾ ಹೋದ ಮೇಲೆ ಮಾಲೀಕಳು ಮಾಸ್ಕ್​ ಹಾಕಿ ಬಂದಾಕೆಯ ಐಬ್ರೋ ಮಾಡಲು ಕುಳಿತುಕೊಳ್ಳುವಂತೆ ಹೇಳಿದ್ದಾಳೆ.
ಅಷ್ಟರಲ್ಲಿಯೇ ಬಂದಾಕೆ, ನನಗೆ ಫೇಷಿಯಲ್​ ಕೂಡ ಮಾಡಿಸಬೇಕಿತ್ತು, ಮಾಡಿಸುವಿರಾ ಎಂದಿದ್ದಾಳೆ. ಆ ಧ್ವನಿ ಮಹಿಳೆಯದ್ದು ಅಲ್ಲ ಬದಲಿಗೆ ಪುರುಷರದ್ದು ಎಂದು ಮಾಲೀಕಳಿಗೆ ತಿಳಿದಿದೆ. ಮಾಸ್ಕ್​ ತೆಗೆಯುವಂತೆ ಸೂಚಿಸಿದ್ದಾಳೆ. ಅಷ್ಟರಲ್ಲಿಯೇ ಚೂಡಿದಾರಲ್ಲಿ ಬಂದವ ಮಾಸ್ಕ್​ ತೆಗೆದಿದ್ದಾನೆ. ಅಲ್ಲಿಗೆ ಬಂದದ್ದು ಮಹಿಳೆಯಲ್ಲ, ಬದಲಿಗೆ ಪುರುಷ ಎಂದು ತಿಳಿಯುತ್ತಲೇ ಮಾಲೀಕಳು ಹೊರಗೆ ಹೋಗುವಂತೆ ಗದರಿದ್ದಾಳೆ.
ಇದನ್ನೂ ಓದಿ:ಕಾಲಿಗೆ ಸುತ್ತಿಗೊಂಡ ಬೃಹದಾಕಾರದ ಹಾವು- ಭಯಾನಕ ವಿಡಿಯೋ ವೈರಲ್​
ಅಷ್ಟರಲ್ಲಿಯೇ ಬಂದಾತ ಆಕೆಯನ್ನು ಹತ್ತಿರಕ್ಕೆ ಸೆಳೆದುಕೊಂಡು ಇನ್ನಿಲ್ಲದ ಕಿರುಕುಳ ನೀಡಿದ್ದಾನೆ. ಸಂತ್ರಸ್ತೆ ಜೋರಾಗಿ ಕೂಗಿಕೊಂಡಾಗ ಅಕ್ಕಪಕ್ಕದವರು ಆಗಮಿಸುತ್ತಿದ್ದಂತೆಯೇ ಬಂದವ ಅಲ್ಲಿಂದ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾನೆ.
ಗಂಡನನ್ನು ಕಳೆದುಕೊಂಡು 12 ವರ್ಷದ ಮಗನೊಂದಿಗೆ ವಾಸಿಸುತ್ತಿರುವ ಸಂತ್ರಸ್ತೆ ಬ್ಯೂಟಿ ಪಾರ್ಲರ್​ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾಳೆ. ಆಕೆ ಒಬ್ಬಂಟಿ ಎಂದು ತಿಳಿದದ್ದರಿಂದ ಈ ವ್ಯಕ್ತಿ ಚೂಡಿದಾರ್​ ಹಾಕಿಕೊಂಡು ಮಾಸ್ಕ್​ ಧರಿಸಿ ಹೆಣ್ಣುಮಕ್ಕಳಂತೆ ಒಳಗೆ ಬಂದು ಈ ಕೃತ್ಯ ಎಸಗಿದ್ದಾನೆ.
ಮಹಿಳೆ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾಳೆ. ಅಕ್ಕಪಕ್ಕದ ಸಿಸಿಟಿವಿ ದೃಶ್ಯವನ್ನು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸರ್ಕಾರಿ ಬಸ್​, ಗ್ಯಾಸ್ ಟ್ಯಾಂಕರ್​ ನಡುವೆ ಭೀಕರ ಅಪಘಾತ- 12 ಮಂದಿ ಸಾವು

ಮೆನೋಪಾಸ್ ನಂತರ ಲೈಂಗಿಕಕ್ರಿಯೆಯಲ್ಲಿ ತೊಂದರೆಯಾದರೆ ಆಯುರ್ವೇದದಲ್ಲಿದೆ ಪರಿಹಾರ…

ಟ್ರಂಪ್​ರನ್ನ ಜೈಲಲ್ಲಿ ಹಾಕಿ ಎಲ್ಲರೂ ರೇಪ್​ ಮಾಡಬೇಕು- ನಟಿಯಿಂದ ಹೀಗೊಂದು ಟ್ವೀಟ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 + 18 =
Remember me
