ವಾಷಿಂಗ್ಟನ್:ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಬಂದು ತಿಂಗಳುಗಳೇ ಗತಿಸಿದರೂ, ಜೋ ಬೈಡೆನ್​ ಅಧ್ಯಕ್ಷರು ಎಂದು ಫಲಿತಾಂಶ ಹೊರಬಂದಿದ್ದರೂ ಇದುವರೆಗೂ ಡೊನಾಲ್ಡ್​ ಟ್ರಂಪ್​ ಸೋಲು ಒಪ್ಪಿಕೊಂಡಿರಲಿಲ್ಲ. ಇನ್ನು ಅವರ ಅಧಿಕಾರಾವಧಿ ತಿಂಗಳು ಮಾತ್ರವಿದ್ದು, ನಂತರವೂ ತಾವೇ ಅಧ್ಯಕ್ಷರು ಎಂದು ಹೇಳುತ್ತಿದ್ದರು.
ಇದಾಗಲೇ ಟ್ರಂಪ್​ ಕೋರ್ಟ್​ ಮೆಟ್ಟಿಲೇರಿಯಾಯ್ತು, ತಮಗೆ ಸಂದೇಹವಿದ್ದ ಅನೇಕ ಕಡೆಗಳಲ್ಲಿ ಮರುಎಣಿಕೆಯನ್ನು ಮಾಡಿಸಿಯೂ ಆಯ್ತು. ಇವೆಲ್ಲವೂ ಮುಗಿದ ಮೇಲೆ ಇದೀಗ ಅಮೆರಿಕದ ಚುನಾವಣಾ ಆಯೋಗ (ಎಲೆಕ್ಟೊರಲ್ ಕಾಲೇಜ್​) ವಿಜೇತರನ್ನು ಘೋಷಣೆ ಮಾಡಿದೆ. ಅದರ ಪ್ರಕಾರ ಜೋ ಬೈಡೆನ್​ (78) ಅವರೇ ಗೆಲುವು ಸಾಧಿಸಿರುವುದು ಎಂದು ಖಚಿತಪಡಿಸಿದೆ.
ಈ ಮೂಲಕ ಅಮೆರಿಕ ಅಧ್ಯಕ್ಷ ಹುದ್ದೆಯನ್ನು ಜೋ ಬೈಡೆನ್ ಅಲಂಕರಿಸಲಿರುವುದು ಕೊನೆಗೂ ನಿಶ್ವಿತವಾಗಿದೆ. 538 ಸದಸ್ಯರ ಎಲೆಕ್ಟೊರಲ್ ಕಾಲೇಜ್, ಬೈಡೆನ್ ತಮ್ಮ ಗೆಲುವಿಗೆ ಬೇಕಾದ 270 ಸ್ಥಾನಗಳಿಗೂ ಹೆಚ್ಚು ಮತಗಳನ್ನು ಪಡೆದು ಶ್ವೇತಭವನ ಪ್ರವೇಶದ ಅಂತಿಮ ಹಂತಕ್ಕೆ ತಲುಪಿದ್ದಾರೆ ಎಂದು ತಿಳಿಸಿದೆ. ಬೈಡೆನ್-ಹ್ಯಾರಿಸ್ 306 ಎಲೆಕ್ಟೊರಲ್ ಮತಗಳನ್ನು ಪಡೆದಿದ್ದಾರೆ.
ನವಂಬರ್ 3ರಂದು ನಡೆದ ಚುನಾವಣೆಯಲ್ಲಿ 81 ದಶಲಕ್ಷದಷ್ಟು ದಾಖಲೆ ಸಂಖ್ಯೆಯ ಮತಗಳನ್ನು ಪಡೆದಿದ್ದಾರೆ ಜೋ ಬೈಡನ್- ಕಮಲಾ ಹ್ಯಾರಿಸ್. ಇದು ಅಮೆರಿಕದ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ. 7 ದಶಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಬೈಡನ್ ಟ್ರಂಪ್ ವಿರುದ್ಧ ಗೆಲುವು ಸಾಧಿಸಿದದ್ದಾರೆ.
ಈ ನಡುವೆಯೇ ಟ್ರಂಪ್​ಗೆ ತಿರುಗೇಟು ನೀಡಿರುವ ಬೈಡೆನ್​, ಅಮೆರಿಕದ ಹೊಸ ಅಧ್ಯಾಯ ತೆರೆಯಲು ಸಕಾಲವಿದು. ನನ್ನ ಗೆಲುವಿನ ಬಗ್ಗೆ ಯಾರಿಗಾದರೂ ಅನುಮಾನವಿದ್ದರೆ, ಅವರು ತಮ್ಮ ಸಂಶಯಗಳನ್ನು ಈಗ ಬಗೆಹರಿಸಿಕೊಂಡಿರಬಹುದು ಎಂದಿದ್ದಾರೆ.
ಉತ್ತರ ಪ್ರದೇಶಕ್ಕೆ ಆಮ್​ ಆದ್ಮಿ ಲಗ್ಗೆ- ಮಹತ್ವದ ಘೋಷಣೆ ಮಾಡಿದರು ಕೇಜ್ರಿವಾಲ್​

ಮತಾಂತರ ಆಗಿಹೋಗಿದೆ, ಮೂರು ತಿಂಗಳ ಗರ್ಭಿಣಿ: ಗಂಡನನ್ನು ಬಿಟ್ಟುಬಿಡಿ ಎಂದ ಯುವತಿ!

ಡಾನ್ಸ್​ ಮಾಡಲು ವಧುವನ್ನು ಎಳೆದ ವರನ ಸ್ನೇಹಿತರು- ಮುಂದೆ ಆಗಬಾರದ್ದೆಲ್ಲಾ ಆಗೋಯ್ತು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 + eighteen =
Remember me
