ನ್ಯೂಯಾರ್ಕ್​:ಮಾಧ್ಯಮ ವ್ಯವಹಾರದ ದಂತಕಥೆ ಎಂದೇ ಪ್ರಸಿದ್ಧಿ ಪಡೆದಿರುವ, 14 ಬಿಲಿಯನ್ ಆಸ್ತಿಯೊಂದಿಗೆ ಜಗತ್ತಿನ ಸಿರಿವಂತರ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ 10 ಮಕ್ಕಳ ತಂದೆ, 91 ವರ್ಷದ ರೂಪರ್ಟ್ ಮುರ್ಡೋಕ್ ತಮ್ಮ ನಾಲ್ಕನೆಯ ಪತ್ನಿಗೆ ಡಿವೋರ್ಸ್​ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಇವರು ಫಾಕ್ಸ್ ಕಾರ್ಪೊರೇಷನ್, ಫಾಕ್ಸ್ ನ್ಯೂಸ್ ಚಾನೆಲ್​ನ ಮೂಲ ಕಂಪನಿ ಮತ್ತು ವಾಲ್ ಸ್ಟ್ರೀಟ್ ಜರ್ನಲ್​ನ ನ್ಯೂಸ್ ಕಾರ್ಪ್ ಒಡೆಯ.
ಆರು ವರ್ಷಗಳ ಹಿಂದೆ ಇವರು ನಟಿ ಜೆರ್ರಿ ಹಾಲ್‍ ಅವರನ್ನು ಮದುವೆಯಾಗಿದ್ದರು. ಇದಕ್ಕೂ ಮುನ್ನ ಮದುವೆಯಾದ ಮೂವರಿಗೆ ವಿಚ್ಛೇದನ ನೀಡಿ ಇವರನ್ನು ನಾಲ್ಕನೇ ಪತ್ನಿಯನ್ನಾಗಿ ಮಾಡಿಕೊಂಡಿದ್ದರು. 2016ರ ಮಾರ್ಚ್‍ನಲ್ಲಿ ಮಧ್ಯ ಲಂಡನ್‍ನಲ್ಲಿ ನಡೆದ ಸಮಾರಂಭದಲ್ಲಿ ಈ ಮದುವೆ ನಡೆದಿತ್ತು. 65 ವರ್ಷದ ಜೆರ್ರಿ ಹಾಲ್ ಮದುಮಗಳಾಗಿ ಬಂದಿದ್ದರು. ಆದರೆ ಇದೀಗ ವಿಚ್ಛೇದನ ಕೊಟ್ಟಿದ್ದಾರೆ. ಇದಕ್ಕೆ ಕಾರಣವಿನ್ನೂ ಬಹಿರಂಗಗೊಳ್ಳಲಿಲ್ಲ.
1956ರಲ್ಲಿ ಇವರ ಮೊದಲ ಮದುವೆಯಾಗಿತ್ತು. ಪೆಟ್ರೀಷಿಯಾ ಬುಕರ್ ಅವರೊಂದಿಗೆ ನಡೆದಿದ್ದ ಈ ಮದುವೆ 1967ಗೆ ಅಂತ್ಯಗೊಂಡಿತ್ತು. ನಂತರ ಮುರ್ಡೋಕ್ ಅವರು ಅನ್ನಾ ಮಾರಿಯಾ ಟೋರ್ವ್ ಅವರನ್ನು ಅದೇ ವರ್ಷ ಮದುವೆಯಾದರು, 1999ರಂದು ವಿಚ್ಛೇದನ ನೀಡಿದರು. ಅದೇ ಸಅಲಿನಲ್ಲಿ ವೆಂಡಿ ಡೆಂಗ್ ಅವರನ್ನು ಮೂರನೆಯ ಪತ್ನಿಯಾಗಿಸಿಕೊಂಡರು. 2016ರಲ್ಲಿ ಅವರಿಗೂ ಡಿವೋರ್ಸ್​ ನೀಡಿ ಜೆರ್ರಿ ಅವರನ್ನು ಮದುವೆಯಾಗಿದ್ದರು. ಈ ಎಲ್ಲಾ ಮದುವೆಗಳಿಂದ ಇವರಿಗೆ ಒಟ್ಟು 10 ಮಕ್ಕಳು ಇದ್ದಾರೆ.
ಆಸ್ಟ್ರೇಲಿಯಾದಿಂದ ಬಂದ ಮುರ್ಡೋಕ್, 1952 ರಲ್ಲಿ ತನ್ನ ತಂದೆಯ ಮರಣದ ನಂತರ ನ್ಯೂಸ್ ಲಿಮಿಟೆಡ್​ನ ನಿರ್ದೇಶಕರಾದರು. ಆಸ್ಟ್ರೇಲಿಯಾದ ಸಣ್ಣ ಸಂಸ್ಥೆಯೊಂದರ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಮುರ್ಡೋಕ್ ಇಂದು ವಿಶ್ವದ ಎರಡನೇ ಅತಿದೊಡ್ಡ ಮಾಧ್ಯಮ ಸಮೂಹವಾದ ನ್ಯೂಸ್ ಕಾರ್ಪ್​ನ ಅಧ್ಯಕ್ಷರಾಗಿದ್ದಾರೆ. 2020 ರ ಹೊತ್ತಿಗೆ, ಮುರ್ಡೋಕ್ ಸುಮಾರು 50 ದೇಶಗಳಲ್ಲಿ 800 ಕ್ಕೂ ಹೆಚ್ಚು ಕಂಪನಿಗಳ ಮಾಲೀಕರಾಗಿದ್ದಾರೆ.
ಬಂದೂಕು ತೋರಿದವರಿಗೂ ಬಾಗಿಲು ತೆರೆದ ಭಾರತ! ಸಹಾಯ ಮಾಡುವವರಿಲ್ಲದೇ ತತ್ತರಿಸಿದ ಅಫ್ಘನ್ನರ ಕಣ್ಣೀರು ಒರೆಸಿದ ಸೇನೆ

VIDEO: ಒಳಗೆ ಸೇರಿದರೆ ಗುಂಡು… ರಸ್ತೆ ಮಧ್ಯೆ ಫುಲ್​ ಟೈಟ್​- ಪೊಲೀಸರೂ ಸುಸ್ತು, ಕ್ಯಾಬ್​ ಚಾಲಕನೂ ಬೇಸ್ತು- ವಿಡಿಯೋ ವೈರಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
