ಶ್ರೀನಗರ:ನನ್ನನ್ನು ಮತ್ತೆ ಅಕ್ರಮವಾಗಿ ವಶಕ್ಕೆ ಪಡೆದಿದ್ದು, ನನ್ನ ಮಗಳು ಇಲ್ಟಿಜಾಳನ್ನು ಗೃಹಬಂಧನದಲ್ಲಿ ಇರಿಸಿದ್ದಾರೆ. ಕಾಶ್ಮೀರ ಓಪನ್​ ಜೈಲಾಗಿ ಮಾರ್ಪಟ್ಟಿದೆ ಎಂದು ಜಮ್ಮು-ಕಾಶ್ಮೀರದ ಪೀಪಲ್ಸ್ ಡೆಮಾಕ್ರ್ಯಾಟಿಕ್ ಪಕ್ಷದ (ಪಿಡಿಪಿ) ನಾಯಕಿ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಗುಡುಗಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿದ್ದಲಿನಿಂದಲೂ ಒಂದಿಲ್ಲೊಂದು ರೀತಿಯಲ್ಲಿ ಕೂಗಾಡುತ್ತಲೇ ಬಂದಿರುವ ಮುಫ್ತಿ ಇದೀಗ ಹೊಸ ಕ್ಯಾತೆ ತೆಗೆದಿದ್ದಾರೆ.
ಈ ಬಗ್ಗೆ ಟ್ವಿಟ್​ ಮಾಡಿರುವ ಮೆಹಬೂಬಾ, ಕಳೆದ ಎರಡು ದಿನಗಳಿಂದ ನನ್ನ ಕುಟುಂಬವನ್ನು ಮತ್ತೆ ಅಕ್ರಮವಾಗಿ ವಿಚಾರಣೆಗೊಳಪಡಿಸಲಾಗುತ್ತಿದೆ. ಅಂತೆಯೇ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಪುಲ್ವಾಮದಲ್ಲಿರುವ ತಮ್ಮ ಪಕ್ಷದ ನಾಯಕ ವಾಹೀದ್ ಉರ್ ರೆಹಮಾನ್ ಅವರ ಕುಟುಂಬವನ್ನು ಭೇಟಿ ಮಾಡಲು ಬಿಡುತ್ತಿಲ್ಲ. ವಾಹೀದ್​ರನ್ನು ಅನಗತ್ಯವಾಗಿ ಬಂಧಿಸಲಾಗಿದ್ದು, ಅವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಲಾಗಿದೆ. ಕೇವಲ ನನ್ನನ್ನು ಮಾತ್ರವಲ್ಲ ನನ್ನ ಮಗಳನ್ನು ಕೂಡ ಗೃಹ ಬಂಧನಕ್ಕೀಡು ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮರ್ಡರ್​ ಕೇಸ್​: ಮಾಜಿ ಸಚಿವನಿಗೆ ಇನ್ನೊಂದು ವಾರ ಜೈಲೂಟ
ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ನಾವೀದ್ ಬಾಬು ಜತೆ ಸಂಪರ್ಕ ಇರುವ ಆರೋಪದಡಿ ವಾಹೀದ್​ನನ್ನು ಬುಧವಾರ ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿತ್ತು. ವಾಹೀದ್ ಉರ್ ರಹಮಾನ್ ಪಿಡಿಪಿ ವರಿಷ್ಠೆ ಮೆಹಬೂಬಾ ಮುಫ್ತಿಗೆ ನಿಕಟವಾಗಿದ್ದಾರೆ ಎನ್ನಲಾಗಿದೆ.
ಬಿಜೆಪಿಯ ಸಚಿವರು ಮತ್ತು ಅವರ ಕೈಗೊಂಬೆಗಳು ಕಾಶ್ಮೀರದ ಪ್ರತಿಯೊಂದು ಮೂಲೆ, ಮೂಲೆಗೂ ಭೇಟಿ ನೀಡುತ್ತಿದ್ದಾರೆ. ಆದರೆ ನನ್ನ ವಿಚಾರದಲ್ಲಿ ಮಾತ್ರ ಭದ್ರತೆಯ ಸಮಸ್ಯೆ ಇದೆ ಎಂದು ಹೇಳುತ್ತಿರುವುದಾಗಿ ಮುಫ್ತಿ ದೂರಿದ್ದಾರೆ.
ಉಗ್ರರ ಉಪಟಳ ಹೆಚ್ಚಿರುವ ಪುಲ್ವಾಮಾದಲ್ಲಿ ವಾಹೀದ್ ನವೆಂಬರ್ 28ರಂದು ನಡೆಯಲಿರುವ ಮೊದಲ ಹಂತದ ಡಿಡಿಸಿ (ಡಿಸ್ಟ್ರಿಕ್ಟ್ ಡೆವಲಪ್​ಮೆಂಟ್ ಕೌನ್ಸಿಲ್) ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.
ಮಿನಿ ಧರಿಸಿ, ಕೆಳಕ್ಕೆ ಬಗ್ಗಿ ‘ಸೆಕ್ಸಿ ಶಾಪಿಂಗ್’ ಮಾಡೋ​ ಟಿಪ್ಸ್​ ಕೊಟ್ಟಾಕೆ ಸಿಲುಕಿದಳು ಪೇಚಿಗೆ!

ದೀದಿಗೆ ಶಾಕ್​ ಮೇಲೆ ಶಾಕ್​: ಸಾರಿಗೆ ಸಚಿವ ಸ್ಥಾನಕ್ಕೆ ಸುವೇಂದು ರಾಜೀನಾಮೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 3 =
Remember me
