ಮುಂಬೈ:ಇತ್ತೀಚೆಗೆ ವಿಕೃತಿ ಹೆಚ್ಚುತ್ತಲೇ ಸಾಗಿದೆ. ಅತ್ಯಾಚಾರ, ಅನಾಚಾರ, ಭೀಕರ ಕೊಲೆ ಪ್ರಕರಣಗಳೇ ಹೆಚ್ಚುತ್ತಿರುವ ಈ ದಿನಗಳಲ್ಲಿ ಅತ್ಯಂತ ಭಯಾನಕ ಎನ್ನಿಸುವ ಕೊಲೆ ಪ್ರಕರಣವೊಮದು ಮುಂಬೈನ ಬಾಂದ್ರಾದಲ್ಲಿ ನಡೆದಿದೆ.
ಅಜ್ಜಿ ಮೊಬೈಲ್​ಫೋನ್​ ಗಿಫ್ಟ್ ಕೊಡಲಿಲ್ಲ ಎಂಬ ಕಾರಣಕ್ಕೆ 24 ವರ್ಷದ ಯುವಕ ಆಕೆಯ ರುಂಡವನ್ನೇ ಕತ್ತರಿಸಿ, ತಲೆಯನ್ನು ಡೈನಿಂಗ್ ಟೇಬಲ್ ಮೇಲಿಟ್ಟಿದ್ದಾನೆ!
ಕ್ರಿಸ್ಟೋಫರ್ ಡಯಾಸ್ ಎಂಬಾತ ಇಂಥ ಭೀಕರ ಕೃತ್ಯ ಎಸಗಿದ್ದಾನೆ. ಅಜ್ಜಿ ರೋಜಿ ಮೊಮ್ಮಗನ ಭೀಕರ ಕೃತ್ಯಕ್ಕೆ ಬಲಿಯಾಗಿದ್ದಾಲೆ. ಕ್ರಿಸ್ಟೋಫರ್​ ಮಾದಕ ದ್ರವ್ಯ ವ್ಯಸನಿಯಾಗಿದ್ದು, ಅಲ್ಲದೆ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ. ಆದರೆ ಮುಂದಿನ ಚಿಕಿತ್ಸೆಗೆ ಹಣ ಇಲ್ಲದ ಕಾರಣ, ಪಾಲಕರು ಚಿಕಿತ್ಸೆಯನ್ನು ಅರ್ಧಕ್ಕೇ ನಿಲ್ಲಿಸಿ ಮನೆಗೆ ಕರೆತಂದಿದ್ದರು.
ಇದನ್ನೂ ಓದಿ:ತುಮಕೂರು ಜಿಲ್ಲೆಯಲ್ಲಿ ಕರೊನಾಗೆ ಐವರು ಬಲಿ
ಡಯಾಸ್‍ನ ಪೋಷಕರು ಮನೆಯ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರೆ, ಕುಟುಂಬದ ಇತರ ಸದಸ್ಯರು ನೆಲ ಮಹಡಿಯಲ್ಲಿದ್ದರು. ರಾತ್ರಿ ಊಟದ ಬಳಿಕ ಆರೋಪಿ ಅಜ್ಜಿಯ ಬಳಿ ತೆರಳಿದ್ದು, ಈ ವೇಳೆ ಮೊಬೈಲ್ ಗಿಫ್ಟ್ ನೀಡುವಂತೆ ಅಜ್ಜಿಯನ್ನು ಕೇಳಿದ್ದಾನೆ. ಆದರೆ ಅಜ್ಜಿ ಕೊಡಲು ಆಗಲ್ಲ ಎಂದಿದ್ದಾರೆ.
ಇದರಿಂದ ಸಿಟ್ಟುಗೊಂಡ ಈತ ಅಲ್ಲಿಯೇ ಇದ್ದ ಚಾಕುವಿನಿಂದ ಅಜ್ಜಿ ಮಲಗಿದ ನಂತರ ತಲೆಯನ್ನೇ ಕತ್ತರಿಸಿ ಕೊಲೆ ಮಾಡಿದ್ದಾನೆ. ಅಲ್ಲದೆ ಕತ್ತರಿಸಿದ ತಲೆಯನ್ನು ಡೈನಿಂಗ್ ಟೇಬಲ್ ಮೇಲೆ ಇಟ್ಟು ಮನೆಯವರಿಗೆ ತೋರಿಸಿದ್ದಾನೆ.
ಪೊಲೀಸರು ಆರೋಪಿಯನ್ನು ಬಂಧಿಸಿ, ಕೊಲೆ ಪ್ರಕರಣ ದಾಖಲಿಸಿದ್ದಾರೆ. ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಅಕ್ಟೋಬರ್ 17ರ ವರೆಗೆ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಲಕ್ಷ್ಮಿಬಾಂಬ್​ ಬದಲು ಸಲ್ಮಾಬಾಂಬ್​ ಎಂದು ಹೆಸರಿಡುವ ಧೈರ್ಯ ಇದೆಯೆ- ಚಿತ್ರದ ವಿರುದ್ಧ ಅಭಿಯಾನ ಶುರು

10ನೇ ಟೆಸ್ಟ್​ನಲ್ಲಿ ಪಾಸಿಟಿವ್​ ಬಂತು: ತಟ್ಟೆ-ಲೋಟ ಇಟ್ಕೊಂಡು ಜೀವನ ಮಾಡ್ದೆ- ರೇಣುಕಾಚಾರ್ಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 − 2 =
Remember me
