ಮುಂಬೈ:ಪುರುಷರ ಸ್ನೇಹವನ್ನು ಬಯಸಿದಾಗ ಅದು ಆಕೆಯು ಲೈಂಗಿಕ ಕ್ರಿಯೆ ನಡೆಸಲು ಅನುಮತಿ ಕೊಟ್ಟಂತಲ್ಲ ಎಂದಿರುವ ಬಾಂಬೆ ಹೈಕೋರ್ಟ್​, ಲೈಂಗಿಕ ಸಂಪರ್ಕ ಬೆಳೆಸಿದ ಯುವಕನೊಬ್ಬನಿಗೆ ಜಾಮೀನು ನಿರಾಕರಿಸಿದೆ.
ಮಹಿಳೆಯೊಂದಿಗೆ ಸ್ನೇಹ ಸಂಬಂಧವನ್ನು ಹಂಚಿಕೊಂಡ ಮಾತ್ರ ಪುರುಷ ಆಕೆಯನ್ನು ಲಘುವಾಗಿ ಪರಿಗಣಿಸುವ ಘಟನೆಗಳು ನಡೆಯುತ್ತಿವೆ. ಯುವತಿ ಗೆಳೆತನ ಬೆಳೆಸಿದರೆ ದೈಹಿಕ ಸಂಬಂಧವನ್ನು ಹೊಂದಲು ಅವಳು ಒಪ್ಪಿದ್ದಾಳೆ ಎಂದು ಅರ್ಥ ಮಾಡಿಕೊಳ್ಳುವ ಹಾಗಿಲ್ಲ ಎಂದು ನ್ಯಾಯಮೂರ್ತಿ ಭಾರತಿ ಎಚ್ ಡಾಂಗ್ರೆ ಹೇಳಿದ್ದಾರೆ.
ಏನಿದು ಘಟನೆ?22 ವರ್ಷದ ಯುವತಿಯೊಬ್ಬಳನ್ನು ಗರ್ಭವತಿ ಮಾಡಿ ನಂತರ ಮದುವೆ ನಿರಾಕರಿಸಿದ ಆರೋಪ ಹೊತ್ತ ಆಶಿಶ್​ ಚಕೋರ್​ ಎಂಬಾತನ ವಿರುದ್ಧ ದಾಖಲಾದ ದೂರಿಗೆ ಸಂಬಂಧಿಸಿದ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದರು. ಯುವತಿ ನೀಡಿರುವ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ.
ಜಾಮೀನು ಕೋರಿ ಆತ ಅರ್ಜಿ ಸಲ್ಲಿಸಿದ್ದ. ಆಶಿಶ್​ ಮತ್ತು ಯುವತಿ ಸ್ನೇಹಿತರಾಗಿದ್ದರು. ಆಗಾಗ್ಗೆ ಆಕೆಯ ಮನೆಗೆ ಆಶಿಶ್​ ಹೋಗಿ ಬರುತ್ತಿದ್ದ. ನಂತರ ಸ್ನೇಹ ಬೆಳೆಯಿತು. ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ತಾನು ಒಪ್ಪದಿದ್ದರೂ ಬಲವಂತವಾಗಿ ದೇಹ ಸಂಬಂಧ ಹೊಂದಿದ್ದ ಎಂದು ಯುವತಿ ದೂರಿದ್ದಾಳೆ.
ಮದುವೆಯಾಗುವ ಭರವಸೆ ನೀಡಿ ಅನೇಕ ಬಾರಿ ಲೈಂಗಿಕ ಕ್ರಿಯೆ ನಡೆಸಿದ. ಕೊನೆಗೆ ತಾನು ಗರ್ಭಿಣಿಯಾದಾಗ ಮದುವೆಯಾಗಲು ನಿರಾಕರಿಸಿದ. ಮಾತ್ರವಲ್ಲದೇ, ನನ್ನ ಶೀಲವನ್ನು ಶಂಕಿಸಿ, ನನಗೆ ಬೇರೊಬ್ಬನ ಜತೆ ಸಂಬಂಧವಿರುವುದಾಗಿ ಹೇಳುತ್ತಿದ್ದಾನೆ. ಹೀಗೆ ಮದುವೆಯ ಹೆಸರಿನಲ್ಲಿ ನನ್ನನ್ನು ಗರ್ಭಿಣಿ ಮಾಡಿ ಮೋಸ ಮಾಡಿದ್ದಾನೆ ಎಂದು ಯುವತಿ ದೂರು ನೀಡಿದ್ದಳು.
ಈ ದೂರಿನ ಆಧಾರದ ಮೇಲೆ ಆಶೀಶ್​ನನ್ನು ಪೊಲೀಸರು ಬಂಧಿಸಿದ್ದರು. ಮೇ 17, 2019 ಮತ್ತು ಏಪ್ರಿಲ್ 27, 2022 ರ ನಡುವೆ ಅನೇಕ ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಯುವತಿ ಹೇಳಿದ್ದಳು. ಬಂಧನದ ಹಿನ್ನೆಲೆಯಲ್ಲಿ ಆಶೀಸ್​ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ.
ಈತ ಮಾಡಿರುವ ಕೃತ್ಯ ಜಾಮೀನು ನೀಡಲು ಅರ್ಹವಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟಿದ್ದಾರೆ. ಯುವತಿ ದೈಹಿಕ ಸಂಬಂಧ ನಿರಾಕರಿಸಿದಾಗ ಬಲವಂತವಾಗಿ ಸಂಬಂಧ ಮುಂದುವರಿಸುವುದು ಅಪರಾಧ. ಪ್ರತಿಯೊಬ್ಬ ಮಹಿಳೆಯು ಸಂಬಂಧದಲ್ಲಿ ‘ಗೌರವ’ವನ್ನು ನಿರೀಕ್ಷಿಸುತ್ತಾಳೆ. ಅದು ಪರಸ್ಪರ ಪ್ರೀತಿಯ ಆಧಾರದ ಮೇಲೆ ಸ್ನೇಹದ ಸ್ವರೂಪದಲ್ಲಿರಬೇಕು. ಮದುವೆಯ ನೆಪದಲ್ಲಿ ಲೈಂಗಿಕ ಸಂಬಂಧ ಹೊಂದಿರುವುದೂ ಅಲ್ಲದೇ, ಗರ್ಭ ಧರಿಸಿದಾಗ ಶೀಲ ಶಂಕಿಸುವಂಥ ಕೃತ್ಯ ಮಾಡಿರುವುದು ಅಪರಾಧ. ಇಂಥವರು ಜಾಮೀನಿಗೆ ಯೋಗ್ಯರಲ್ಲ ಎಂದ ನ್ಯಾಯಮೂರ್ತಿಗಳು ಜಾಮೀನು ನಿರಾಕರಿಸಿದರು.
ಸ್ನೇಹಿತೆಯನ್ನು ಮದುವೆಯಾಗಲು ಲಿಂಗ ಬದಲಿಸಿಕೊಂಡ ವಿದ್ಯಾರ್ಥಿನಿ! ವೈದ್ಯರು ಹೇಳಿದ್ದೇನು?

ಇದ್ದ ಮೂವರೂ ಹೆಣ್ಣುಮಕ್ಕಳೆಂದು ಮತ್ತೆ ಗರ್ಭಧಾರಣೆ: ಒಟ್ಟಿಗೇ ಹುಟ್ಟಿದವು ನಾಲ್ಕು ಶಿಶುಗಳು!

ಇತಿಹಾಸ ತಿರುಚಿ, ಆಕ್ರಮಣಕಾರರ ಕೊಡುಗೆ ಎಂದು ಬಿಂಬಿಸಿರುವ ಹಸಿಸುಳ್ಳಿನ ಅರಿವಾಗಬೇಕಿದೆ- ನಾ. ಸೋಮೇಶ್ವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + nine =
Remember me
