ಮೆಕ್ಸಿಕೋ:ಇನ್ನೇನು ತಾನು ಸಾಯುತ್ತೇನೆ ಎಂದು ತಿಳಿದಾಗ 99 ವರ್ಷದ ವೃದ್ಧೆಯೊಬ್ಬರು ಮಕ್ಕಳು, ಮೊಮ್ಮಕ್ಕಳನ್ನು ಕರೆದು ತನ್ನ ಕೊನೆಯ ಆಸೆ ಹೇಳಿದ್ದಾಳೆ. ಇದನ್ನು ಕೇಳಿ ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ. ಆದರೆ ಕೊನೆಗೂ ಆ ಆಸೆಯನ್ನು ಈಡೇರಿಸಿದ್ದಾರೆ!
ಅಷ್ಟಕ್ಕೂ ಕುಟುಂಬಸ್ಥರು ದಿಗಿಲುಗೊಳ್ಳುವಂಥ ಮಾಡಿದ ಅಜ್ಜಿಯ ಕೊನೆಯ ಆಸೆ ಏನು ಎಂದರೆ, ತನ್ನ ಸಮಾಧಿಯ ಮೇಲೆ ಎಷ್ಟು ಸಾಧ್ಯವೋ ಅಷ್ಟು, ಭಾರವಾದ ಮತ್ತು ಉದ್ದವಾಗಿರುವ ಪುರುಷನ ಶಿಶ್ನದ ಮಾದರಿಯನ್ನು ಅಳವಡಿಸಬೇಕು ಎಂಬುದು! ಈ ಆಸೆಯನ್ನು ಕೇಳಿ ಕುಟುಂಬದವರೆಲ್ಲಾ ಕಣ್​ಕಣ್​ ಬಿಟ್ಟರೂ, ಅಜ್ಜಿಯ ಆಸೆಯನ್ನು ನೆರವೇರಿಸಿ ಐದೂವರೆ ಅಡಿ ಉದ್ದ ಮತ್ತು 600 ಪೌಂಡ್ ತೂಕದ ಶಿಶ್ನದ ಮಾದರಿಯನ್ನು ಅಳವಡಿಸಿದ್ದಾರೆ!
ಇಂಥದ್ದೊಂದು ವಿಚಿತ್ರ ಬೇಡಿಕೆ ಇಟ್ಟವಳು, 99 ವರ್ಷದ ಮೆಕ್ಸಿಕನ್​ ಅಜ್ಜಿ. ಈಕೆಯ ಹೆಸರು ಕತ್ರಿನಾ ಒರ್ಡುನಾ ಪೆರೆಜ್. ಇದು ಪೌರುಷತ್ವದ ಸಂಕೇತವಾಗಿದ್ದು, ಅಜ್ಜಿಯ ಆಸೆಯಂತೆ ಆಕೆಯ ಸಮಾಧಿಯ ಮೇಲೆ ನಿರ್ಮಿಸಲಾಗಿದೆ. ಇದನ್ನು ಪ್ರೀತಿ ಮತ್ತು ಜೀವನ ಸಂತೋಷದ ಸಂಕೇತವಾಗಿ ಸ್ಥಾಪಿಸಲಾಗಿದೆ ಎಂದು ಅಜ್ಜಿಯ ಮೊಮ್ಮಗ ಅಲ್ವಾರೊ ಮೋಟಾ ಲಿಮೊನ್ ಹೇಳಿದ್ದಾರೆ.

ಅಂದಹಾಗೆ ಈ ಅಜ್ಜಿ ಎಲ್ಲಾ ಸಾಮಾಜಿಕ ಕಟ್ಟಳೆಗಳನ್ನು ಧಿಕ್ಕರಿಸಿ ಧೈರ್ಯದಿಂದ ಮುನ್ನುಗ್ಗಿದಾಕೆ. ಮೆಕ್ಸಿಕೋದಲ್ಲಿ ಹೆಣ್ಣುಮಕ್ಕಳಿಗೆ ಕಟ್ಟುಪಾಡುಗಳು ಹೆಚ್ಚು. ಇವು ಅಜ್ಜಿಯನ್ನು ಉಸಿರುಗಟ್ಟಿಸಿದ್ದವಂತೆ. ತುಂಬಾ ಮುಂದುವರಿದ ಚಿಂತನೆ ಹೊಂದಿದ ಅಜ್ಜಿ, ಆ ಕಾಲದಲ್ಲಿಯೇ ಎಲ್ಲವನ್ನೂ ಧಿಕ್ಕರಿಸಿದವಳು, ತನ್ನ ಆಸೆಯಂತೆ ಬದುಕಿದಾಕೆ. ಆದ್ದರಿಂದ ಸಾವಿನ ನಂತರವೂ ಅಜ್ಜಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ ಎಂದಿದ್ದಾರೆ ಕುಟುಂಬದವರು.
ಶಿಶ್ನ ಮಾದರಿ ನಿರ್ಮಿಸಬೇಕು ಎಂದು ಇಂಜಿನಿಯರ್​ ಬಳಿ ಹೇಳಿದಾಗ ಅವರು ತಮಾಷೆ ಮತ್ತು ಆಶ್ಚರ್ಯದಿಂದ ನೋಡಿದ್ದರು. ಬಳಿಕ 12 ಜನರ ತಂಡ ಅಜ್ಜಿಯ ಆಸೆಯಂತೆಯೇ ಅದನ್ನು ನಿರ್ಮಿಸಿದೆ. ಇದಕ್ಕೆ ಸಂಪ್ರದಾಯವಾದಿಗಳ ವಿರೋಧವಿದ್ದರೂ ಕುಟುಂಬಸ್ಥರು ಮಾತ್ರ ಅಜ್ಜಿಯ ಕೊನೆಯಾಸೆಯನ್ನು ನೆರವೇರಿಸಿದ್ದಾರೆ.(ಏಜೆನ್ಸೀಸ್​)
ಅವನು ಇಲ್ಲಿ ಬರಲಾರ, ಇವಳು ಅಲ್ಲಿ ಹೋಗಲಾರಳು: ಪೇಚಿಗೆ ಸಿಲುಕಿದ ಪ್ರೇಮಿಗಳ ಆನ್​ಲೈನ್​ ಮದುವೆಗೆ ಹೈಕೋರ್ಟ್ ಅಸ್ತು

ಲೈಂಗಿಕ ಕ್ರಿಯೆ ವೇಳೆ ಸಂಗಾತಿಯ ಒಪ್ಪಿಗೆಯಿಲ್ಲದೆ ಕಾಂಡೋಮ್ ತೆಗೆಯುವುದು ಅಪರಾಧ: ಸುಪ್ರೀಂಕೋರ್ಟ್​

ಸಾವಿನ ಸೂಚನೆ ಸಿಗುತ್ತಲೇ ಶಾಲೆಗೆ ಬಂದ ಬಾಲಕ: ಸ್ನೇಹಿತರ ನೋಡಿ ಕೊನೆಯುಸಿರೆಳೆದ- ಕೊಪ್ಪಳದಲ್ಲೊಂದು ಮನಕಲಕುವ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − six =
Remember me
