ಕೋಲ್ಕತಾ:ಚುನಾವಣಾ ಪೂರ್ವ ಸಮೀಕ್ಷೆಗಳನ್ನೆಲ್ಲಾ (ಎಕ್ಸಿಟ್ ಪೋಲ್) ಬುಡಮೇಲು ಮಾಡಿ ಎನ್​ಡಿಎ ಮೈತ್ರಿಕೂಟ ಮುನ್ನಡೆ ಸಾಧಿಸುತ್ತಿದ್ದಂತೆಯೇ, ರಾಹುಲ್​ ಗಾಂಧಿಯವರು ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರಿಗೆ ಕರೆ ಮಾಡಿ ಎಂಜಿಬಿ (ಮರ್​ ಗಯಾ ಭಾಯ್​) ಎಂದರಂತೆ…
– ಹೀಗೆಂದು ಲೇವಡಿ ಮಾಡಿದವರು ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆಯ ರಾಜ್ಯ ಸಚಿವ ಹಾಗೂ ಪಶ್ಚಿಮ ಬಂಗಾಳ ಬಿಜೆಪಿ ಮುಖಂಡ ಬಾಬುಲ್ ಸುಪ್ರಿಯೊ.
ಇದನ್ನೂ ಓದಿ:ಯಾರಿಗೆ ಬಿಹಾರ?: ನಿತೀಶ್​ ಕುಮಾರ್​-ತೇಜಸ್ವಿ ಹಣಾಹಣಿ
ಅಂತಿಮ ಕ್ಷಣದಲ್ಲಿ ಏನಾಗತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಇದುವರೆಗಿನ ಫಲಿತಾಂಶವನ್ನು ಗಣನೆಗೆ ತೆಗೆದುಕೊಂಡು ಲೇವಡಿ ಮಾಡಿರುವ ಬಾಬುಲ್​ ಅವರು, ನಾನು ಇದನ್ನು ಗಂಭೀರವಾಗಿ ಹೇಳುತ್ತಿದ್ದೇನೆ, ರಾಹುಲ್​ ಗಾಂಧಿಯವರು ಕರೆ ಮಾಡಿ ಹೀಗೆ ಹೇಳಿದ್ದಾರೆ ಎಂದರು.
ಶನಿವಾರ ಪ್ರಕಟವಾದ ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಜೆಪಿ ಹಾಗೂ ಅದರ ಮಿತ್ರಪಕ್ಷ ಜೆಡಿಯು ಪಾಳಯದಲ್ಲಿ ಭಾರಿ ಅಸಮಾಧಾನ ಹಾಗೂ ಚಿಂತೆ ಮೂಡಿಸಿದ್ದವು. ಏಕೆಂದರೆ ಮಾಡಲಾಗಿದ್ದ ಸಮೀಕ್ಷೆಗಳ ಪೈಕಿ ಒಂದೆರಡು ಸಮೀಕ್ಷೆಗಳ ಹೊರತಾಗಿ ಹೆಚ್ಚಿನ ಸಮೀಕ್ಷೆಗಳು ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳನ್ನು ಒಳಗೊಂಡ ಮಹಾಘಟಬಂಧನ (ಎಂಜಿಬಿ) ಮೈತ್ರಿಕೂಟಕ್ಕೆ ನಿಚ್ಚಳ ಬಹುಮತ ಸಿಗಲಿದೆ ಎಂದು ಹೇಳಿದ್ದವು.
ಆದರೆ ಈವರೆಗಿನ ಅಪ್​ಡೇಟ್​ ನೋಡಿದರೆ ಸಮೀಕ್ಷೆಗಳು ಉಲ್ಟಾ ಹೊಡೆದಿವೆ. ಅದಕ್ಕೆ ಬಾಬುಲ್​ ಈ ರೀತಿ ಹೇಳಿದ್ದಾರೆ. ಬಿಹಾರದ ಜನತೆ ಎಲ್ಲವನ್ನೂ ಮರೆತಿದೆ ಎಂದು ಜೈಲು ಮತ್ತು ಬೇಲ್​ನಲ್ಲಿ​ (ಜಾಮೀನಿನಲ್ಲಿ) ಇರುವವರು ಹೇಗೆ ನಂಬಿದ್ದರು? ಯಾವ ಧೈರ್ಯದಿಂದ ಅವರು ಈ ರೀತಿ ಯೋಚಿಸಿದ್ದರು? ಜಂಗಲ್ ರಾಜ್‌ನಲ್ಲಿ ಜನರನ್ನು ಹಿಂಸಿಸಲು ಹೋಗಿದ್ದವರು ಅವರೇ ಅಲ್ಲವೇ? ಎಂದು ಬಾಬುಲ್​ ಟ್ವೀಟ್​ನಲ್ಲಿ ಪ್ರಶ್ನಿಸಿದ್ದಾರೆ.
ಮಹಿಳೆ ಎಂದರೆ ವೇಶ್ಯೆ, ಕೆಟ್ಟ ಹೆಂಗಸು ಎಂದಿದ್ದ ಆಕ್ಸ್​ಫರ್ಡ್​​ ಡಿಕ್ಷನರಿಗೆ ಕೊನೆಗೂ ಆಯ್ತು ಜ್ಞಾನೋದಯ!

ನನ್ನ ಸಾವಿಗೆ ಉದ್ಧವ್​ ಠಾಕ್ರೆಯೇ ಕಾರಣ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡ ಕಂಡಕ್ಟರ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 3 =
Remember me
